ಶನಿವಾರ, ಅಕ್ಟೋಬರ್ 19, 2019
27 °C

ಡೊನಾಲ್ಡ್‌ ಟ್ರಂಪ್‌ ವಿರುದ್ಧ ವಾಗ್ದಂಡನೆಗೆ ಕರೆ

Published:
Updated:
Prajavani

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ದೇಶದ ಪ್ರಜಾಸತ್ತೆಗೇ ಬೆದರಿಕೆಯಾಗಿ ಪರಿಣಮಿಸಿದ್ದು, ಅವರ ವಿರುದ್ಧ ವಾಗ್ದಂಡನೆ ಮಂಡಿಸಬೇಕು ಎಂದು ಡೆಮಾಕ್ರಟಿಕ್‌ ಪಕ್ಷದ ಜೋ ಬಿಡೆನ್‌ ಹೇಳಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿರುವ ಜೋ ಬಿಡೆನ್‌ ಮೊದಲ ಬಾರಿಗೆ ಈ ಕರೆ ಕೊಟ್ಟಿದ್ದಾರೆ.

ಉಕ್ರೇನ್‌ನ ಅಧ್ಯಕ್ಷ ವೊಲೊಡಿ ಮಿರ್‌ ಝೆಲೆನ್‌ಸ್ಕಿ ಅವರಿಗೆ ಜುಲೈ 25ರಂದು ಕರೆ ಮಾಡಿದ್ದ ಡೊನಾಲ್ಡ್‌ ಟ್ರಂಪ್‌, ಉಕ್ರೇನ್‌ನಲ್ಲಿ ಬಿಡೆನ್‌ ಅವರು ಪಾಲುದಾರರಾಗಿರುವ ಉದ್ಯಮದಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಡ ಹೇರಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಡೆಮಾಕ್ರಟಿಕ್‌ ಪಕ್ಷ ವಾಗ್ದಂಡನೆ ಬೆಂಬಲಿಸಿದೆ. 

Post Comments (+)