ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲಸಕ್ಕೆ ಮರಳಿದ ಬ್ರಿಟನ್‌ ಪ್ರಧಾನಿ ಬೋರಿಸ್ ಜಾನ್ಸನ್

Last Updated 27 ಏಪ್ರಿಲ್ 2020, 21:24 IST
ಅಕ್ಷರ ಗಾತ್ರ

ಲಂಡನ್‌: ಕೋವಿಡ್‌ ಸೋಂಕಿನಿಂದ ಗುಣಮುಖರಾಗಿರುವ ಬ್ರಿಟನ್‌ ಪ್ರಧಾನಿಬೋರಿಸ್ ಜಾನ್ಸನ್‌ ಸೋಮವಾರ ಕೆಲಸಕ್ಕೆ ಮರಳಿದರು.

ದೇಶದ‍ಪರಿಸ್ಥಿತಿಯ ಪರಾಮರ್ಶೆ ನಡೆಸಿದ ಅವರು,‘ಬ್ರಿಟನ್‌ ಇನ್ನೂ ಗರಿಷ್ಠ ಅಪಾಯದ ಸ್ಥಿತಿಯಲ್ಲಿದೆ. ಹೀಗಾಗಿ, ಸದ್ಯಕ್ಕೆ ನಿರ್ಬಂಧಗಳನ್ನು ಸಡಿಲಿಸುವುದಿಲ್ಲ’ ಎಂದರು.

‘ಜನರು ತಾಳ್ಮೆ ವಹಿಸಲೇಬೇಕು. ಲಾಕ್‌ಡೌನ್‌ನಿಂದ ಕಷ್ಟಗಳನ್ನು ಎದುರಿಸಿರಬಹುದು. ಆದರೆ, ನಾವೀಗ ಈ ಬಿಕ್ಕಟ್ಟಿನ ಮೊದಲ ಹಂತದ ಅಂತ್ಯದಲ್ಲಿದ್ದೇವೆ. ಹೀಗಾಗಿ, ಸಹಕಾರ ಅಗತ್ಯ’ ಎಂದು ಹೇಳಿದರು.

‘ನನ್ನ ಜೀವ ಉಳಿಸಲು ಶ್ರಮಿಸಿದ ರಾಷ್ಟ್ರೀಯ ಆರೋಗ್ಯ ಸೇವೆಗೆ (ಎನ್‌ಎಚ್‌ಎಸ್‌) ಧನ್ಯವಾದಗಳನ್ನು ಸಲ್ಲಿಸುತ್ತೇವೆ’ ಎಂದು ಜಾನ್ಸನ್‌ ಈ ಸಂದರ್ಭದಲ್ಲಿ ತಿಳಿಸಿದರು.ಬ್ರಿಟನ್‌ನಲ್ಲಿ 20ಸಾವಿರಕ್ಕೂ ಹೆಚ್ಚು ಮಂದಿ ಕೋವಿಡ್‌ಗೆಸತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT