ಮಂಗಳವಾರ, ಸೆಪ್ಟೆಂಬರ್ 24, 2019
29 °C

ಬ್ರಿಟನ್‌: ಅಕ್ಟೋಬರ್‌ನಲ್ಲಿ ಚುನಾವಣೆ?

Published:
Updated:

ಲಂಡನ್‌ (ಪಿಟಿಐ): ಅವಧಿಗಿಂತ ಮುನ್ನವೇ, ಅಕ್ಟೋಬರ್‌ 15 ರಂದು ಸಾರ್ವತ್ರಿಕ ಚುನಾವಣೆ ನಡೆಸುವುದರ ಪರವಾಗಿ ಸಂಸತ್ತಿನಲ್ಲಿ ಬುಧವಾರ ಮತ ಚಲಾಯಿಸುವಂತೆ ವಿರೋಧ ಪಕ್ಷವಾದ ಲೇಬರ್‌ ಪಾರ್ಟಿಯ ಜೆರೆಮಿ ಕಾರ್ಬಿನ್‌ ಅವರಿಗೆ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಸವಾಲು ಹಾಕಿದರು.

ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರಬರುವ ಬ್ರೆಕ್ಸಿಟ್‌ ಒಪ್ಪಂದ ಕುರಿತು ಬೋರಿಸ್‌ ಜಾನ್ಸನ್‌ ಅವರು ಪ್ರಧಾನಿಯಾದ ನಂತರ ಮಂಗಳವಾರ ಸಂಸತ್ತಿನಲ್ಲಿ ಮೊದಲ ಬಾರಿಗೆ ಮತದಾನಕ್ಕೆ ಹಾಕಿದರು. ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿದ್ದರಿಂದ ಹಿನ್ನಡೆ ಅನುಭವಿಸಿದರು.

Post Comments (+)