ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬ್ರೆಕ್ಸಿಟ್‌ ಒಪ್ಪಂದ ಕಾರ್ಯಗತ ಸನ್ನಿಹಿತ’

Last Updated 15 ಅಕ್ಟೋಬರ್ 2019, 19:27 IST
ಅಕ್ಷರ ಗಾತ್ರ

ಲಕ್ಸೆಂಬರ್ಗ್‌: ‘ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರ ಬರುವ ಪ್ರಕ್ರಿಯೆಗೆ (ಬ್ರೆಕ್ಸಿಟ್‌ ಒಪ್ಪಂದ ಜಾರಿ) ಈ ವಾರ ಅಂತಿಮ ರೂಪ ಸಿಗಲಿದೆ’ ಎಂದು ಸಂಧಾನಕಾರ ಮಿಷೆಲ್‌ ಬರ್ನಿಯರ್‌ ಮಂಗಳವಾರ ಇಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಒಂದೆಡೆ, ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರ ಬರಲು ಅ.31ರ ಗಡುವು ಸಮೀಪಿಸುತ್ತಿದೆ. ಇನ್ನೊಂದೆಡೆ, ಒಕ್ಕೂಟದ ಇತರ ರಾಷ್ಟ್ರಗಳ ಮುಖಂಡರು ಈ ಒಪ್ಪಂದ ಜಾರಿ ಕುರಿತಂತೆ ಬ್ರಿಟನ್‌ ಜೊತೆಗಿನ ಮಾತುಕತೆ ತ್ವರಿತಗೊಳಿಸಲು ಸಮಾವೇಶ ಆಯೋಜಿಸಿದ್ದು, ಇದು ಗುರುವಾರ ಆರಂಭವಾಗಲಿದೆ. ಹೀಗಾಗಿ ಮಿಷೆಲ್‌ ಹೇಳಿಕೆಗೆ ಈಗ ಮಹತ್ವ ಬಂದಿದೆ.

ಇಲ್ಲಿ ನಡೆದ ಒಕ್ಕೂಟದ 27 ರಾಜ್ಯಗಳ ಪ್ರತಿನಿಧಿಗಳ ಗೋಪ್ಯ ಸಭೆಯಲ್ಲಿ ಪಾಲ್ಗೊಂಡ ನಂತರ ಮಾತನಾಡಿದ ಮಿಷೆಲ್‌, ‘ಈ ಒಪ್ಪಂದ ಜಾರಿ ಬಹಳ ಕಠಿಣ ಎನಿಸಿದರೂ, ಈ ವಾರವೇ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಿದೆ’ ಎಂದು ಹೇಳಿದರು.

‘ಬ್ರಿಟನ್‌ ಹಾಗೂ ಐರೋಪ್ಯ ಒಕ್ಕೂಟದ ಪ್ರತಿಯೊಬ್ಬ ವ್ಯಕ್ತಿಯ ಆಶೋತ್ತರಕ್ಕೆ ಬ್ರೆಕ್ಸಿಟ್‌ ಸ್ಪಂದಿಸುವಂತಿರಬೇಕು. ಇಂತಹ ಸಕಾರಾತ್ಮಕ ಅಂಶಗಳಿಗೆ ಕಾನೂನು ರೂಪ‍ ನೀಡುವುದು ಈಗಿನ ತುರ್ತು’ ಎಂದೂ ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT