ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಬ್ರೆಕ್ಸಿಟ್‌ ಒಪ್ಪಂದಕ್ಕೆ ಒಪ್ಪಿಗೆ

ಬ್ರಿಟನ್ ಮತ್ತು ಐರೋಪ್ಯ ಒಕ್ಕೂಟ ಘೋಷಣೆ
Last Updated 17 ಅಕ್ಟೋಬರ್ 2019, 18:18 IST
ಅಕ್ಷರ ಗಾತ್ರ

ಲಂಡನ್: ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರ ಬರುವ ಪ್ರಕ್ರಿಯೆಯ (ಬ್ರೆಕ್ಸಿಟ್‌) ಹೊಸ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸಿರುವುದಾಗಿ ಬ್ರಿಟನ್ ಮತ್ತು ಐರೋಪ್ಯ ಒಕ್ಕೂಟ ಗುರುವಾರ ಘೋಷಿಸಿವೆ.

ಹೊಸ ಒಪ್ಪಂದವನ್ನು ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಶ್ಲಾಘಿಸಿದ್ದಾರೆ.

‘ಇದು ನ್ಯಾಯೋಚಿತ ಮತ್ತು ಸಮತೋಲನದಿಂದ ಕೂಡಿದ ಒಪ್ಪಂದ’ ಎಂದು ಐರೋಪ್ಯ ಒಕ್ಕೂಟದ ಮುಖ್ಯಸ್ಥ ಜೀನ್‌ ಕ್ಲೌಡ್‌ ಜಂಕರ್‌ ಬಣ್ಣಿಸಿದ್ದಾರೆ. ಈ ವಾರ ಬ್ರುಸೆಲ್ಸ್‌ನಲ್ಲಿ ಹಮ್ಮಿಕೊಂಡಿರುವ ಶೃಂಗಸಭೆಯಲ್ಲಿ ಸದಸ್ಯ ರಾಷ್ಟ್ರಗಳು ಇದಕ್ಕೆ ಅನುಮೋದನೆ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.

‘ಒಪ್ಪಂದಕ್ಕೆ ಸಂಬಂಧಿಸಿದಂತೆ ಎರಡೂ ಕಡೆಯಿಂದಲೂ ಕಾನೂನಾತ್ಮಕವಾಗಿ ಕಾರ್ಯ ನಿರ್ವಹಿಸಲಾಗುತ್ತಿದೆ. ಆದರೆ ಇದಕ್ಕೆ ಬ್ರಿಟನ್‌ ಸಂಸತ್‌ನಲ್ಲಿ ಅನುಮೋದನೆ ಸಿಗಬೇಕಿದೆ’ ಎಂದು ಹೇಳಿದ್ದಾರೆ. ಒಪ್ಪಂದಕ್ಕೆ ಬೆಂಬಲ ಸೂಚಿಸುವುದಿಲ್ಲ ಎಂದು ಉತ್ತರ ಐರ್ಲೆಂಡ್‌ನ ಡೆಮಾಕ್ರಟಿಕ್‌ ಯೂನಿಯನಿಸ್ಟ್‌ ಪಾರ್ಟಿ (ಡಿಯುಪಿ) ತಿಳಿಸಿದೆ. ಒಕ್ಕೂಟದಿಂದ ಬ್ರಿಟನ್‌ ಹೊರ ಬರಲು ಅ.31ರ ಗಡುವು ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT