ಬುಧವಾರ, ಮೇ 27, 2020
27 °C

ಕೋವಿಡ್-19 ಬಾಧಿತ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಆಸ್ಪತ್ರೆಗೆ ದಾಖಲು

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Boris

ಲಂಡನ್: ಕೊರೊನಾ ವೈರಸ್ ಸೋಂಕು ಇರುವುದಾಗಿ ದೃಢಪಟ್ಟು 10 ದಿನಗಳ ನಂತರ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್‌ ಅವರನ್ನು ಭಾನುವಾರ ಆಸ್ಪತ್ರೆಗೆ ದಾಖಲಿಸಲಾಗಿದೆ.

55ರ ಹರೆಯದ ಜಾನ್ಸನ್ ಅವರಿಗೆ ಮಾರ್ಚ್ 27ರಂದು ಕೋವಿಡ್-19 ರೋಗದ ಲಕ್ಷಣಗಳು ಕಾಣಿಸಿಕೊಂಡಿದ್ದು, ಅವರು ಏಳು ದಿನಗಳ ಕಾಲ ಅಧಿಕೃತ ನಿವಾಸ ಡ್ರೌನಿಂಗ್ ಸ್ಟ್ರೀಟ್‌ನಲ್ಲಿ ಸೆಲ್ಫ್ ಐಸೋಲೇಷನ್‌ನಲ್ಲಿದ್ದರು.  ಈ ನಡುವೆ ಅವರಿಗೆ ವಿಪರೀತ ಜ್ವರ ಬಂದಿದ್ದು, ವೈದ್ಯರ ಸಲಹೆಯಂತೆ ಅವರನ್ನು ಆಸ್ಪತ್ರೆಗೆ  ದಾಖಲಿಸಲಾಗಿದೆ ಎಂದು ಡ್ರೌನಿಂಗ್ ಸ್ಟ್ರೀಟ್ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್‌ಗೆ ಕೊರೊನಾ ಸೋಂಕು ದೃಢ

ಅವರಿಗೆ ರೋಗ ಲಕ್ಷಣಗಳು ಕಂಡು ಬಂದ ಕಾರಣ ಮಾತ್ರ  ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.  ಬೋರಿಸ್ ಜಾನ್ಸನ್ ಅವರ ಪತ್ನಿ ಕ್ಯಾರಿ ಸೆಮಂಡ್ಸ್ ಗರ್ಭಿಣಿಯಾಗಿದ್ದು, ಅವರಿಗೂ ಸೋಂಕು ಲಕ್ಷಣ ಕಾಣಿಸಿಕೊಂಡಿತ್ತು. ಆದರೆ ಈಗ ಅವರು ಗುಣಮುಖರಾಗುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು