ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆನಡಾ: ಸಲಿಂಗ ವಿವಾಹ ತಿರಸ್ಕರಿಸಿದ ಆಂಗ್ಲಿಕನ್‌ ಚರ್ಚ್‌

Last Updated 15 ಜುಲೈ 2019, 17:35 IST
ಅಕ್ಷರ ಗಾತ್ರ

ಮಾಂಟ್ರಿಯಲ್‌ :ಸಲಿಂಗ ವಿವಾಹದ ವ್ಯಾಖ್ಯಾನ ಬಲಿಸುವ ಪ್ರಸ್ತಾವವನ್ನು ಆಂಗ್ಲಿಕನ್‌ ಚರ್ಚ್‌ ತಿರಸ್ಕರಿಸಿದೆ.

ಚರ್ಚಿನ ಸಾಮಾನ್ಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಯಿತು. ಈ ಮಸೂದೆ ಅಂಗೀಕಾರ ಆಗಿದ್ದರೆ, ಗಂಡು– ಹೆಣ್ಣು ನಡುವಿನ ಮದುವೆ ಕಾನೂನಿನ ವ್ಯಾಖ್ಯಾನ ಬದಲಾಗುತ್ತಿತ್ತು.

ಈ ಪ್ರಸ್ತಾಪದ ಪರ ಮತ್ತು ವಿರುದ್ಧವಾಗಿಸಾಮಾನ್ಯ ಜನರು, ಪಾದ್ರಿಗಳು ಮತ್ತು ಬಿಷಪ್‌ಗಳು ಮತಚಲಾಯಿಸಿದ್ದರು. ಪ್ರಸ್ತಾಪದ ಅಂಗೀಕಾರಕ್ಕೆ ಮೂರನೇ ಎರಡರಷ್ಟು ಬಹುಮತದ ಅಗತ್ಯವಿತ್ತು.

ಜನರು ಮತ್ತು ಪಾದ್ರಿಗಳು ಈ ಪ್ರಸ್ತಾಪದ ಪರವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದರು. ಆದರೂ ಬಹುಮತ ಸಾಧ್ಯವಾಗಲಿಲ್ಲ. ಬಿಷಪ್‌ಗಳು ಈ ಪ್ರಸ್ತಾಪದ ವಿರುದ್ಧವಾಗಿದ್ದರು.

ಈ ಪ್ರಸ್ತಾಪದ ಅಂಗೀಕಾರಕ್ಕೆ ಎರಡು ಹಂತಗಳ ಮತದಾನ ಅಗತ್ಯವಾಗಿತ್ತು. ಮೊದಲ ಹಂತದ ಮತದಾನ ಮೂರು ವರ್ಷಗಳ ಹಿಂದೆ ನಡೆದಿತ್ತು. ಈ ಪ್ರಸ್ತಾಪವನ್ನು ತಿರಸ್ಕರಿಸಿರುವುದಕ್ಕೆ ಅಸಮಾಧಾನ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT