ಸೋಮವಾರ, ಜುಲೈ 26, 2021
27 °C
ಸಂಸದನನ್ನು ‘ಜನಾಂಗೀಯವಾದಿ’ ಎಂದ ಆರೋಪ

ಕೆನಡಾ: ಜಗ್ಮೀತ್‌ ಸಿಂಗ್‌ ಸಂಸತ್‌ನಿಂದ ಹೊರಕ್ಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಜಗ್ಮೀತ್‌ ಸಿಂಗ್‌

ಟೊರಂಟೊ: ಸಂಸದರೊಬ್ಬರನ್ನು ‘ಜನಾಂಗೀಯವಾದಿ’ ಎಂದು ಕರೆದಿರುವ ಆರೋಪದಲ್ಲಿ ಭಾರತ ಸಂಜಾತ ಕೆನಡಾ ಸಂಸದ ಜಗ್ಮೀತ್‌ ಸಿಂಗ್‌ ಅವರನ್ನು ಸಂಸತ್‌ನಿಂದ ತಾತ್ಕಾಲಿಕವಾಗಿ ಹೊರಹಾಕಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

‘ರಾಯಲ್ ಕೆನಡಿಯನ್ ಮೌಂಟೆಡ್ ಪೋಲಿಸ್ (ಆರ್‌ಸಿಎಂಪಿ) ಪಡೆಯಲ್ಲಿರುವ ವರ್ಣಭೇದ ನೀತಿಯ ಬಗೆಗಿನ ನಿಲುವಳಿಗೆ ಅನುಮೋದನೆ ನೀಡಲು ನಿರಾಕರಿಸಿದ ಕಾರಣಕ್ಕೆ ನ್ಯೂ ಡೆಮಾಕ್ರೆಟಿಕ್‌ ಪಾರ್ಟಿ (ಎನ್‌ಡಿಪಿ) ಸಂಸದ ಜಗ್ಮೀತ್‌ ಅವರು, ಸಂಸದ ಅಲೈನ್‌ ಥೆರೈನ್‌ರನ್ನು ‘ಜನಾಂಗೀಯವಾದಿ’ ಎಂಬುದಾಗಿ ಕರೆದಿದ್ದರು’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಪೊಲೀಸ್‌ ಪಡೆಯ ವಿರುದ್ಧ ಮಾಡಿರುವ ವರ್ಣಭೇದ ನೀತಿ ಆರೋಪದಿಂದ ಹಿಂದೆ ಸರಿಯುವುದಿಲ್ಲ’ ಎಂದು ಜಗ್ಮೀತ್‌ ಸಿಂಗ್‌ ಹೇಳಿದ್ದಾರೆ.

ಆರ್‌ಸಿಎಂಪಿಯಲ್ಲಿ ವ್ಯವಸ್ಥಿತ ವರ್ಣಭೇದ ನೀತಿ ಇದೆ ಎಂಬ ನಿಳುವಳಿಯನ್ನು ಜಗ್ಮೀತ್‌ ಸದನದಲ್ಲಿ ಮಂಡಿಸಿದ್ದರು ಮತ್ತು ಅದನ್ನು ಅಂಗೀಕರಿಸಲು ಸರ್ವಾನುಮತದ ಒಪ್ಪಿಗೆ ಕೋರಿದ್ದರು. ಪೊಲೀಸ್‌ ಪಡೆಯನ್ನು ನಿಯಂತ್ರಿಸುವ ಫೆಡರಲ್‌ ಕಾನೂನನ್ನು ಪರಿಶೀಲಿಸುವಂತೆಯೂ ಸರ್ಕಾರವನ್ನು ಒತ್ತಾಯಿಸಿದ್ದರು.

 ಈ ವೇಳೆ ಸಂಸದ ಅಲೈನ್‌ ಟೆರೈನ್‌ ಮತ್ತು ಜಗ್ಮೀತ್‌ ನಡುವೆ ವಾಗ್ವಾದ ನಡೆದಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು