ಸಂಸತ್‌ ಭವನದ ಬ್ಯಾರಿಕೇಡ್‌ಗೆ ಕಾರು ಡಿಕ್ಕಿ

7
ಭಯೋತ್ಪಾದನೆ ಕೃತ್ಯ: ಪೊಲೀಸರ ಹೇಳಿಕೆ

ಸಂಸತ್‌ ಭವನದ ಬ್ಯಾರಿಕೇಡ್‌ಗೆ ಕಾರು ಡಿಕ್ಕಿ

Published:
Updated:
Deccan Herald

ಲಂಡನ್‌: ಬ್ರಿಟನ್‌ ಸಂಸತ್‌ ಭವನದ ಹೊರಗಿನ ಬ್ಯಾರಿಕೇಡ್‌ಗಳಿಗೆ ಉಗ್ರನೊಬ್ಬ ಕಾರು ಡಿಕ್ಕಿ ಹೊಡೆಸಿದ್ದರಿಂದ ಮೂವರು ಗಾಯಗೊಂಡಿದ್ದಾರೆ.

ಅತಿ ವೇಗದಲ್ಲಿ ಕಾರು ಚಲಾಯಿಸಿದ ಈತ, ಹಲವು ಪಾದಚಾರಿಗಳು ಮತ್ತು ಸೈಕಲ್‌ ಸವಾರರ ಮೇಲೆ ನುಗ್ಗಿಸಲು ಪ್ರಯತ್ನಿಸಿದ್ದಾನೆ. ಬಳಿಕ ಸಂಸತ್‌ ಭವನದ ಆವರಣದ ಒಳಗೆ ಪ್ರವೇಶಿಸಲು ಮುಂದಾಗಿದ್ದ. 20 ವರ್ಷದ ಈ ಯುವಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ವರ್ಷ ಮಾರ್ಚ್‌ ತಿಂಗಳಲ್ಲಿಯೂ ಸಂಸತ್‌ ಭವನದ ಮೇಲೆಯೂ ದಾಳಿ ನಡೆಸುವ ಪ್ರಯತ್ನ ಇದಾಗಿತ್ತು.

 ‘ಬಂಧಿಸಲಾಗಿರುವ ಯುವಕನ ಮೇಲೆ ನಿಗಾವಹಿಸಿರಲಿಲ್ಲ. ಈತನ ವಿಚಾರಣೆ ನಡೆಯುತ್ತಿದೆ. ಆದರೆ, ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲ. ಈತ ಯಾರು ಎನ್ನುವ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ. ಈ ದಾಳಿ ಪ್ರಕರಣವನ್ನು ಭಯೋತ್ಪಾದನೆ ಕೃತ್ಯ ಎಂದೇ ಪರಿಗಣಿಸಿ ತನಿಖೆ ಕೈಗೊಳ್ಳಲಾಗಿದೆ. ಇದೊಂದು ಉದ್ದೇಶಪೂರ್ವಕ ಕೃತ್ಯ ಎನ್ನುವುದು ಗೊತ್ತಾಗಿದೆ’ ಎಂದು ಪೊಲೀಸ್‌ ಸಹಾಯಕ ಕಮಿಷನರ್‌ ನೀಲ್‌ ಬಸು ತಿಳಿಸಿದ್ದಾರೆ.

ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 12 ಗಂಟೆಗೆ ಈ ಘಟನೆ ನಡೆದಿದೆ. ಚಾಲಕನನ್ನು ಹೊರತುಪಡಿಸಿ ವಾಹನದಲ್ಲಿ ಬೇರೆ ಯಾರೂ ಕಾರಿನಲ್ಲಿ ಇರಲಿಲ್ಲ. ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿಲ್ಲ. 

 

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !