ಗುರುವಾರ , ಫೆಬ್ರವರಿ 20, 2020
19 °C

ಬೆಳಗಾಗುವುದರಲ್ಲಿ ಸೆಲೆಬ್ರೆಟಿ ಆಯ್ತು ಮನುಷ್ಯರಂತೆ 'ಹಾಯ್' ಹೇಳುವ ಈ ಬೆಕ್ಕು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಕ್ಕೊಂದು ಅದರ ವಿಶಿಷ್ಟ ಧ್ವನಿಯಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಗಮನ ಸೆಳೆದಿದ್ದು, ರಾತ್ರಿ ಬೆಳಗಾಗುವುದರಲ್ಲಿ ಸೆಲೆಬ್ರೆಟಿ ಆಗಿದೆ.

ಅದೇನಪ್ಪ ಅಂತಹ ಧ್ವನಿ ಎಂದು ಯೋಚಿಸುತ್ತಿದ್ದೀರಾ? ಗ್ಯಾಂಬಿನೊ ಎನ್ನುವ ಈ ಬೆಕ್ಕು ’ಮಿಯಾಂವ್‌’ ಎನ್ನುವುದೇ ವಿಶಿಷ್ಟವಾಗಿದ್ದು, ಮನುಷ್ಯರು ಹಾಯ್‌ ಎನ್ನುವಂತೆ ಕೇಳಿಸುತ್ತದೆ.

ಬೆಕ್ಕಿನ ಮಾಲೀಕ ಇನ್‌ಸ್ಟಾಗ್ರಾಂ ಹಾಗೂ ಟಿಕ್‌ಟಾಕ್‌ನಲ್ಲಿ ಆ ವಿಡಿಯೊವನ್ನು ಹಂಚಿಕೊಂಡಿದ್ದು, ಅದಕ್ಕೆ ‘ಇದು ಮಿಯಾಂವ್‌ ಎನ್ನುವುದು ದಕ್ಷಿಣ ಅಮೆರಿಕದ ಶೈಲಿಯಲ್ಲಿ ವೆಲ್‌, ಹಾಯ್‌ ಎಂದು ಕೇಳಿಸುತ್ತಿದೆ’ ಎಂಬ ಒಕ್ಕಣೆಯನ್ನು ನೀಡಿದ್ದಾರೆ.

 

ಆ ವಿಡಿಯೊದಲ್ಲಿ ಎರಡು ಬೆಕ್ಕುಗಳಿದ್ದು, ಓಡಿ ಹೋಗುವ ತಿಳಿ ಹಳದಿ ಬಣ್ಣ ಬೆಕ್ಕನ್ನೇ ಹಿಂಬಾಲಿಸು ಕ್ಯಾಮೆರಾ ಅದು ಅಡಗಿ ಕೂತಿದ್ದನ್ನು ನೋಡುತ್ತಿದ್ದಂತೆ ಗ್ಯಾಂಬಿನೊ ಮಿಯಾಂವ್‌ ಎನ್ನುತ್ತದೆ. 

ಇಲ್ಲಿಯವರೆ ಬೆಕ್ಕಿನ ಈ ವಿಡಿಯೊವನ್ನು ಟಿಕ್‌ಟಾಕ್‌ನಲ್ಲಿ 14 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ 6 ಲಕ್ಷ ಮಂದಿ ವೀಕ್ಷಿಸಿದ್ದು, ಸಾವಿರ ಕಮೆಂಟ್‌ಗಳು ಬಂದಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು