ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾರಾಲಯ ಖಗೋಳ ವಿಜ್ಞಾನದ ಕೌತುಕ

Last Updated 7 ಫೆಬ್ರುವರಿ 2018, 9:50 IST
ಅಕ್ಷರ ಗಾತ್ರ

ಯಳಂದೂರು: ‘ಪ್ರತಿ ರಾತ್ರಿಯ ನೀರವತೆಯಲ್ಲೂ ಖಗೋಳ ವಿಷ್ಮಯಗಳು ಸಂಭವಿಸುತ್ತವೆ. ಇಂತಹ ವಿದ್ಯಮಾನವನ್ನು ವೈಜ್ಞಾನಿಕ ದೃಷ್ಟಿಯಿಂದ ವೀಕ್ಷಿಸುವ ಮನೋಭಾವ ವಿದ್ಯಾರ್ಥಿಗಳಲ್ಲಿ ಹೆಚ್ಚಾದಾಗ ಮಾತ್ರ ವಿಜ್ಞಾನದಲ್ಲಿ ಆಸಕ್ತಿ ಮೂಡಲು ಸಾಧ್ಯ’ ಎಂದು ಜಿ.ಪಂ ಉಪಾಧ್ಯಕ್ಷ ಜೆ. ಯೋಗೇಶ್ ಅಭಿಪ್ರಾಯಪಟ್ಟರು.

ಪಟ್ಟಣ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ‘ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ’ ಹಾಗೂ ವರ್ಣಾಸ್ ಟೆಕ್ನಾಲಜಿ ಸಂಸ್ಥೆ ಸೋಮವಾರ ಹಮ್ಮಿಕೊಂಡಿದ್ದ ತಾರಾಲಯ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬೆಂಗಳೂರಿನಲ್ಲಿರುವ ಪ್ರಖ್ಯಾತ ನೆಹರೂ ತಾರಾಲಯವನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ವೀಕ್ಷಿಸಬೇಕು. ಸರ್ಕಾರ ಶಾಲೆಯ ಬಳಿಯಲ್ಲಿಯೇ ತಾರಾಲಯ ವೀಕ್ಷಣೆಗೆ ಅನುವು ಮಾಡಿಕೊಟ್ಟಿದೆ. ಇದರಿಂದ ನಭೋಮಂಡಲದ ಹತ್ತು ಹಲವು ಕೌತಕವನ್ನು ನೋಡಿ ತಿಳಿಯಬಹುದು. ಪ್ರತಿ ವಿದ್ಯಾರ್ಥಿಯೂ ವೀಕ್ಷಿಸಿ ಖಗೋಳ ವಿಜ್ಞಾನ ವಿಷಯದಲ್ಲಿ ಜ್ಞಾನ ಕಟ್ಟಿಕೊಳ್ಳಲ್ಲಿ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಿಕಾರ್ಜು ಮಾತನಾಡಿ, ‘ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನುಕೂಲ ಕಲ್ಪಿಸಲು ಇಂತಹ ಪ್ರಯತ್ನ ಮಾಡಿದೆ. ಕ್ಷೀರಪಥ, ಗ್ರಹಣ ವೈವಿಧ್ಯ, ಸ್ಯಾಟಲೈಟ್‌ ಮೊದಲಾದ ವಿಷಯಗಳನ್ನು ಸರಳ ಕಲಿಕೆಯ ಭಾಗವಾಗಿ ದೃಶ್ಯ ಮತ್ತು ಶ್ರವ್ಯದ ಮೂಲಕ ತಲುಪಿಸುತ್ತದೆ. ವೀಕ್ಷಣೆಯ ಸ್ಥಳದಲ್ಲಿಯೇ ನಿರ್ಮಿಸಿರುವ ಟೆಂಟ್‌ನಲ್ಲಿ 30 ವಿದ್ಯಾರ್ಥಿಗಳು ಕುಳಿತು ವೀಕ್ಷಿಸಬಹುದು. 180 ಡಿಗ್ರಿ ತನಕ ವಾಲುವ ಫಿಶ್–ಐ ಕ್ಯಾಮೆರಾ ಇದಕ್ಕಾಗಿ ಬಳಕೆಯಾಗಿದೆ’ ಎಂದರು. ವರ್ಣಾಸ್ ಟೆಕ್ನಾಲಜಿಯ ಚರಣ್‌ತಯ್ಯಾ ಭೂಸನೂರುಮಠ, ಮುಖ್ಯ ಶಿಕ್ಷಕ ಶಿವಶಂಕರ್ ಹಾಗೂ ಮಕ್ಕಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT