ಚೀನಾ ರಸ್ತೆ ಅಪಘಾತ; 18 ಮಂದಿ ಸಾವು

7

ಚೀನಾ ರಸ್ತೆ ಅಪಘಾತ; 18 ಮಂದಿ ಸಾವು

Published:
Updated:
ಗಾಯಗೊಂಡ ಪ್ರಯಾಣಿಕರೊಬ್ಬರಿಗೆ ಚಿಕಿತ್ಸೆ ನೀಡಲಾಯಿತು ಎಎಫ್‌ಪಿ ಚಿತ್ರ

ಬೀಜಿಂಗ್: ಹುನಾನ್ ಪ್ರಾಂತ್ಯದ ಹೆದ್ದಾರಿಯಲ್ಲಿ ಪ್ರಯಾಣಿಕ ಕೋಚ್ ಬಸ್‌ ಹಾಗೂ ಟ್ರಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಶನಿವಾರ 18ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ 14 ಮಂದಿ ಗಾಯಗೊಂಡಿದ್ದಾರೆ. 

ಶುಕ್ರವಾರ ಸಂಜೆ ವೇಳೆ ಸಂಭವಿಸಿದ ಈ ಅಪಘಾತ ಈಚೆಗಿನ ತಿಂಗಳಲ್ಲಿಯೇ ಭೀಕರವಾದುದಾಗಿದೆ. ಅಪಘಾತದಿಂದಾಗಿ ಹೆದ್ದಾರಿಯ ಎರಡೂ ಕಡೆಗಿನ ವಾಹನಗಳು ಹಾನಿಗೀಡಾಗಿರುವುದು ಸಿ.ಸಿ.ಟಿ.ವಿ ದೃಶ್ಯದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೈಸ್ಪೀಡ್ ರೈಲುಗಳು ಅಥವಾ ವಿಮಾನಗಳಿಗೆ ಹೋಲಿಸಿದರೆ ದೀರ್ಘಾವಧಿ ಪ್ರಯಾಣಕ್ಕೆ ಚೀನಾದ ಉದ್ಯೋಗ ವರ್ಗದ ಜನರಿಗೆ ಕೋಚ್ ಬಸ್‌ ಕಡಿಮೆ ದರದ ಪರ್ಯಾಯ ಸಾರಿಗೆ ಆಗಿದೆ. 

ಚೀನಾದಲ್ಲಿ ಸಂಚಾರ ಸುರಕ್ಷತೆಗೆ ಭಾರಿ ಸುಧಾರಣೆ ಕೈಗೊಂಡಿದ್ದರೂ, ಪ್ರತಿ ವರ್ಷ ಅಪಘಾತದಿಂದಾಗಿ 2.6 ಲಕ್ಷ ಚೀನಿಯರು ಸಾವಿಗೀಡಾಗುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !