ಟಿಬೇಟ್‌ನಲ್ಲಿ ಸೇನಾ ತುಕಡಿ ಸಜ್ಜುಗೊಳಿಸಿದ ಚೀನಾ

7

ಟಿಬೇಟ್‌ನಲ್ಲಿ ಸೇನಾ ತುಕಡಿ ಸಜ್ಜುಗೊಳಿಸಿದ ಚೀನಾ

Published:
Updated:

ಬೀಜಿಂಗ್‌: ಕಿಂಘೈ–ಟಿಬೆಟ್‌ ಪ್ರಸ್ಥಭೂಮಿಯಲ್ಲಿ ಸೇನಾ ತುಕಡಿಗಳನ್ನು ಚೀನಾ ಸಜ್ಜುಗೊಳಿಸಿದೆ.

ಈ ಪ್ರದೇಶದಲ್ಲಿ ಆಮ್ಲಜನಕ ಪ್ರಮಾಣ ತೀರಾ ಕಡಿಮೆಯಿರುವ ಕಾರಣ, ಅಧಿಕದೊತ್ತಡದ ಆಮ್ಲಜನಕ ಘಟಕಗಳನ್ನು ಪೂರೈಸಿದೆ. ಅಲ್ಲದೆ, ವಿಶೇಷ ರೀತಿಯಲ್ಲಿ ವಿನ್ಯಾಸಗೊಳಿಸಿರುವ ಬ್ಯಾರಕ್‌ಗಳನ್ನು ಯೋಧರಿಗೆ ನೀಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಚೀನಾವು ನಿಯಮಿತವಾಗಿ ಹೀಗೆ ತುಕಡಿಗಳನ್ನು ನಿಯೋಜಿಸುತ್ತಿದೆ. ಸೇನೆಯ ಎಲ್ಲ ಮುಂಚೂಣಿ ತರಬೇತಿ ತುಕಡಿಗಳು ಹಾಗೂ ಗಡಿಭದ್ರತಾ ಪಡೆಗಳನ್ನು ಇಲ್ಲಿ ಸಜ್ಜುಗೊಳಿಸಲಾಗಿದೆ. ಭಾರತದ ಗಡಿಗೆ ಹತ್ತಿರವಿರುವ ಕ್ಸಿಗಾಜೆಯಲ್ಲಿನ ಸೇನಾ ಆಸ್ಪತ್ರೆಯಲ್ಲಿಯೂ ಅಧಿಕದೊತ್ತಡದ ಆಮ್ಲಜನಕ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನು ಚೀನಾ ಮಾಡಿದೆ. 

‘ಕಡಿಮೆ ಆಮ್ಲಜನಕ ಪರಿಣಾಮ ಮೆದುಳಿಗೆ ಹಾನಿ ಮತ್ತು ಕಾರ್ಬನ್‌ ಮಾನಾಕ್ಸೈಡ್‌ನಂತಹ ವಿಷಾನಿಲ ಉತ್ಪತ್ತಿಯಾಗುತ್ತಿದೆ. ಹೀಗಾಗಿ, ಈ ಚಿಕಿತ್ಸಾ ವ್ಯವಸ್ಥೆ ಮಾಡಲಾಗಿದೆ’ ಎಂದು ಮಾಧ್ಯಮಗಳು ವರದಿ ಮಾಡಿವೆ. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !