ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19: ಜಾಗತಿಕ ಆರೋಪಕ್ಕೆ ಪ್ರತಿಯಾಗಿ ಶ್ವೇತಪತ್ರ ಬಿಡುಗಡೆ ಮಾಡಿದ ಚೀನಾ

ಡಿಸೆಂಬರ್ 27ರಂದು ಮೊದಲ ಪ್ರಕರಣ ಗಮನಕ್ಕೆ ಬಂದಿತ್ತು ಎಂದ ಚೀನಾ
Last Updated 7 ಜೂನ್ 2020, 16:05 IST
ಅಕ್ಷರ ಗಾತ್ರ

ಬೀಜಿಂಗ್: ಕೊರೊನಾ ವೈರಸ್ ಪ್ರಕರಣಗಳ ಮಾಹಿತಿ ಮತ್ತು ಅಂಕಿ–ಅಂಶಗಳ ಕುರಿತು ವರದಿ ಮಾಡುವಲ್ಲಿ ವಿಳಂಬ ನೀತಿ ಅನುಸರಿಸಿದೆ ಎನ್ನುವ ಜಾಗತಿಕ ಆರೋಪಕ್ಕೆ ಪ್ರತಿಯಾಗಿ ಚೀನಾ ಭಾನುವಾರ ಶ್ವೇತಪತ್ರ ಪ್ರಕಟಿಸಿದೆ.

ಡಿಸೆಂಬರ್ 27ರಂದು ವುಹಾನ್‌ನಲ್ಲಿ ಮೊದಲ ಬಾರಿಗೆ ನ್ಯುಮೋನಿಯಾ ವೈರಸ್ ಅನ್ನು ಗಮನಿಸಲಾಯಿತು ಮತ್ತು ಮನುಷ್ಯನಿಂದ ಮನುಷ್ಯನಿಗೆ ಇದು ಹರಡಬಲ್ಲದು ಎಂಬುದು ಜನವರಿ 19ರಂದು ತಿಳಿದುಬಂದಿತು. ಇದನ್ನು ನಿಗ್ರಹಿಸಲು ತ್ವರಿತ ಕ್ರಮಗಳನ್ನು ಕೈಗೊಳ್ಳಲಾಯಿತು ಎಂದು ಚೀನಾ ಹೇಳಿದೆ.

‘ವುಹಾನ್‌ನಲ್ಲಿ ಡಿ. 27ರಂದು ಮೊದಲ ಬಾರಿಗೆ ಕೋವಿಡ್‌–19 ಪ್ರಕರಣ ಪತ್ತೆಯಾದ ಬಳಿಕ, ಸ್ಥಳೀಯ ಸರ್ಕಾರವು ರೋಗಿಗಳ ಸ್ಥಿತಿಗತಿ–ಪ್ರಕರಣಗಳ ವಿಶ್ಲೇಷಣೆ, ಸಾಂಕ್ರಾಮಿಕ ರೋಗದ ಪತ್ತೆ ಹಚ್ಚುವಿಕೆ ಮತ್ತು ಪ್ರಾಥಮಿಕ ಪ್ರಯೋಗಾಲಯಪರೀಕ್ಷೆಗಳ ಫಲಿತಾಂಶದ ಅಧ್ಯಯನ ನಡೆಸಲುತಜ್ಞರ ತಂಡವನ್ನುನಿಯೋಜಿಸಿತ್ತು. ಅಂತಿಮವಾಗಿ ಇದು ವೈರಲ್ ನ್ಯೂಮೊನಿಯಾ ಎನ್ನುವ ನಿರ್ಣಯಕ್ಕೆ ತಂಡ ಬಂದಿತ್ತು’ ಎಂದು ಚೀನಾ ಶ್ವೇತಪತ್ರದಲ್ಲಿ ವಿವರಿಸಿದೆ.

‘ರಾಷ್ಟ್ರೀಯ ಆರೋಗ್ಯ ಆಯೋಗ (ಎನ್‌ಎಚ್‌ಸಿ) ಆಯೋಜಿಸಿದ್ದ ಉನ್ನತ ಮಟ್ಟದ ತಜ್ಞರು ಮತ್ತು ಸಂಶೋಧಕರ ತಂಡವು, ಈ ವೈರಸ್ ಮನುಷ್ಯರಿಂದ ಮನುಷ್ಯರಿಗೆ ಹರಡಬಲ್ಲದು ಎಂಬುದನ್ನು ಮೊದಲ ಬಾರಿಗೆ ಜನವರಿ 19ರಂದು ದೃಢಪಡಿಸಿತ್ತು’ ಎಂದು ಚೀನಾ ಹೇಳಿಕೊಂಡಿದೆ. ‌

‘ವುಹಾನ್‌ನಲ್ಲಿ ಸಮುದಾಯ ಮಟ್ಟದಲ್ಲಿ ವೈರಸ್ ಹರಡುವಿಕೆ ಮತ್ತುಪ್ರಕರಣಗಳ ಸಂಖ್ಯೆ ಹೆಚ್ಚಾದ ಬಳಿಕ, ಚೀನಾದ ಇತರ ಪ್ರದೇಶಗಳಲ್ಲೂ ದೃಢಪಡಿಸಿದ ಪ್ರಕರಣಗಳು ವರದಿಯಾದವು. ಆಗ ವೈರಸ್‌ ನಗರಗಳಲ್ಲಿ ವಾಹಕಗಳಾಗಿವೆ ಎನ್ನುವ ಅಂಶ ಪತ್ತೆಯಾಯಿತು. ಆ ನಂತರಸಾಂಕ್ರಾಮಿಕ ರೋಗ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತು ರಾಷ್ಟ್ರವ್ಯಾಪಿ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಸಮಯೋಚಿತವಾಗಿ, ವಿಶ್ವ ಆರೋಗ್ಯ ಸಂಸ್ಥೆ, ಅಮೆರಿಕ ಸೇರಿದಂತೆ ಇತರ ದೇಶಗಳಿಗೆ ಚೀನಾ ತನ್ನ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿತು. ಅಷ್ಟೇ ಅಲ್ಲಕೊರೊನಾ ವೈರಸ್ ಜೀನೋಮ್ ಅನುಕ್ರಮವನ್ನೂ ಬಿಡುಗಡೆ ಮಾಡಿತು’ಶ್ವೇತಪತ್ರ ಹೇಳಿದೆ.

ಜ.19ಕ್ಕೂ ಮುನ್ನ ಇದು ಮನುಷ್ಯರಿಂದ ಮನುಷ್ಯರಿಗೆ ಹರಡಬಲ್ಲದು ಎಂದು ಸೂಚಿಸಲು ಸಾಕಷ್ಟು ಪುರಾವಣೆಗಳಿರಲಿಲ್ಲ ಎಂದು ಚೀನಾದ ಖ್ಯಾತ ಶ್ವಾಸಕೋಶ ತಜ್ಞ ವಾಂಗ್ ಗುವಾಂಗ್ಫಾ ಹೇಳಿದ್ದಾರೆ. ಇವರು ಜನವರಿಯಲ್ಲಿ ಎನ್‌ಎಚ್‌ಸಿ ವುಹಾನ್‌ಗೆ ಕಳುಹಿಸಿದ್ದ ತಜ್ಞರ ಮೊದಲ ಗುಂಪಿನಲ್ಲಿದ್ದರು.

‘ಮಾರಕ ರೋಗದ ಕುರಿತು ವರದಿ ನೀಡುವಲ್ಲಿ ಚೀನಾ ಪಾರದರ್ಶಕತೆಯನ್ನು ಅನುಸರಿಸಿಲ್ಲ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ವಿಶ್ವದ ಇತರ ರಾಷ್ಟ್ರಗಳ ನಾಯಕರು ಆರೋಪ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT