ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಚೀನಾ ದೇಶಗಳಿಂದ ಡಬ್ಲ್ಯುಟಿಒ ನೀತಿಯ ದುರುಪಯೋಗ: ಟ್ರಂಪ್

‘ವಿಶ್ವ ವಾಣಿಜ್ಯ ಒಪ್ಪಂದದ ಲಾಭ ಪಡೆಯಲು ಅವಕಾಶ ನೀಡುವುದಿಲ್ಲ’
Last Updated 15 ಆಗಸ್ಟ್ 2019, 4:49 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಭಾರತ ಹಾಗೂ ಚೀನಾ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಾಗಿ ಈಗ ಉಳಿದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

‘ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳು ಎಂಬ ಹಣೆಪಟ್ಟಿ ಹೊತ್ತು ಈ ಎರಡು ದೇಶಗಳು ವಿಶ್ವ ವ್ಯಾಪಾರ ಒಪ್ಪಂದದ (ಡಬ್ಲ್ಯುಟಿಒ) ಲಾಭ ಪಡೆಯುತ್ತಿದ್ದವು. ಇನ್ನು ಮುಂದೆ ಇದಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಹೇಳಿದ್ದಾರೆ.

ಪೆನ್ಸಿಲ್ವೇನಿಯಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೆಲವು ದೇಶಗಳು ಆರ್ಥಿಕವಾಗಿ ಸದೃಢವಾಗಿವೆ. ಆದರೆ, ವಿಶ್ವ ವ್ಯಾಪಾರ ಒಪ್ಪಂದದ ನಿಯಮಗಳಲ್ಲಿ ಇರುವ ಲೋಪದೋಷಗಳನ್ನು ಈ ದೇಶಗಳು ದುರುಪಯೋಗಪಡಿಸಿಕೊಂಡು ಲಾಭ ಪಡೆಯುತ್ತಿವೆ. ಇಂತಹ ದೇಶಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಲುವಾಗಿ ‘ಯುಎಸ್‌ ಟ್ರೇಡ್‌ ರೆಪ್ರಸೆಂಟಿಟೇವ್‌’ ಸಂಸ್ಥೆಗೆ ಹೆಚ್ಚಿನ ಅಧಿಕಾರ ನೀಡಿರುವುದಾಗಿ ಟ್ರಂಪ್‌ ಹೇಳಿದ್ದಾರೆ.

‘ಅಮೆರಿಕ ಮೊದಲು’ (ಅಮೆರಿಕ ಫಸ್ಟ್‌) ಎಂಬ ನೀತಿಯನ್ನು ಬಲವಾಗಿ ಪ್ರತಿಪಾದಿಸುತ್ತಿರುವ ಅವರು, ಅಮೆರಿಕದಿಂದ ಆಮದು ಮಾಡಿಕೊಳ್ಳುವ ಸರಕುಗಳಿಗೆ ಭಾರತ ಭಾರಿ ಸುಂಕ ವಿಧಿಸುತ್ತಿದೆ ಎಂದು ಹಲವಾರು ಬಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚೀನಾ ವಿರುದ್ಧವೂ ಇಂತಹ ಆರೋಪ ಮಾಡಿದ್ದ ಟ್ರಂಪ್‌, ಆ ದೇಶದಿಂದ ಆಮದಾಗುವ ಸರಕುಗಳಿಗೆ ಅಧಿಕ ಸುಂಕ ವಿಧಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಚೀನಾ ಸಹ ಅಮೆರಿಕದಿಂದ ಆಮದು ಮಾಡಿಕೊಳ್ಳುತ್ತಿರುವ ಸರಕಿಗೆ ಭಾರಿ ಮೊತ್ತದ ಸುಂಕ ವಿಧಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT