ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಕಾರಿಡಾರ್‌ ಅಮೆರಿಕ ಹೇಳಿಕೆ ತಳ್ಳಿಹಾಕಿದ ಪಾಕ್‌

Last Updated 25 ನವೆಂಬರ್ 2019, 19:28 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ‘ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್‌ (ಸಿಪಿಇಸಿ) ಪಾಕಿಸ್ತಾನವನ್ನು ಮತ್ತಷ್ಟು ಸಾಲದ ಸುಳಿಗೆ ಸಿಲುಕಿಸಲಿದ್ದು, ಆರ್ಥಿಕ ಸಂಕಷ್ಟಕ್ಕೆ ದೂಡಲಿದೆ’ ಎಂಬ ಅಮೆರಿಕ ಹೇಳಿಕೆಯನ್ನು ಪಾಕ್‌ನ ವಿದೇಶಾಂಗ ವ್ಯವಹಾರಗಳ ಸಚಿವ ಮಹಮೂದ್‌ ಖುರೇಷಿ ಸೋಮವಾರ ತಳ್ಳಿಹಾಕಿದ್ದಾರೆ.

ಮುಲ್ತಾನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ಥಿಕ ಕಾರಿಡಾರ್‌ ಯೋಜನೆಯು ರಸ್ತೆ, ರೈಲು ಜಾಲ ಸೇರಿದಂತೆ ವಿವಿಧೋದ್ದೇಶದ ಯೋಜನೆಯಾಗಿದೆ. ಇದು ದೇಶದ ಆರ್ಥಿಕತೆಗೆ ಚೇತರಿಕೆ ನೀಡಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ದೇಶದ ಸಾಲದ ಹೊರೆಯನ್ನು ಹೆಚ್ಚಿಸಲು ಕಾರಿಡಾರ್‌ ಯೋಜನೆ ಕಾರಣವಲ್ಲ ಎಂದಿದ್ದಾರೆ.

ಇತ್ತೀಚೆಗೆ ಅಮೆರಿಕದ ದಕ್ಷಿಣ ಏಷ್ಯಾ ವ್ಯವಹಾರಗಳ ಮುಖ್ಯಸ್ಥೆ ಅಲೈಸ್‌ ವೆಲ್ಸ್, ‘ಆರ್ಥಿಕ ಕಾರಿಡಾರ್‌’ ಭವಿಷ್ಯ
ದಲ್ಲಿ ಪಾಕಿಸ್ತಾನವನ್ನು ಹಾನಿಗೊಳಿಸುವ ಯೋಜನೆ ಎಂದು ವಾಷಿಂಗ್ಟನ್‌ನ ವಿಲ್ಸನ್‌ ಸೆಂಟರ್‌ನಲ್ಲಿ ಹೇಳಿದ್ದರು.

ಅಮೆರಿಕದ ಅಭಿ‍ಪ್ರಾಯವನ್ನು ಪಾಕಿಸ್ತಾನದಲ್ಲಿರುವ ಚೀನಾ ರಾಯಭಾರಿ ಯೂ ಜಿಂಗ್‌ ಅವರೂ ಖಂಡಿಸಿದ್ದರು. ‘ಪಾಕ್‌ ಮತ್ತು ಚೀನಾ ಸಂಬಂಧವು ‘ವಿನ್‌– ವಿನ್‌’ ಸಹಕಾರ ತತ್ವದಲ್ಲಿ ರೂಪುಗೊಂಡಿದೆ. ಸಾಲವನ್ನು ಹಿಂದಿರುಗಿಸಲು ಪಾಕ್‌ಗೆ ಸಮಯದ ಮಿತಿಯನ್ನು ಚೀನಾ ಹೇರಿಲ್ಲ’ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT