ಶುಕ್ರವಾರ, ಜುಲೈ 30, 2021
28 °C

‌ಚೀನಾದಲ್ಲಿ ಕೋವಿಡ್–19: ದಿಢೀರ್ ಏರಿಕೆ ಕಂಡ ಸೋಂಕು, ಹೊಸದಾಗಿ 49 ಪ್ರಕರಣ

ಎಎಫ್‌ಫಿ Updated:

ಅಕ್ಷರ ಗಾತ್ರ : | |

prajavani

ಬೀಜಿಂಗ್‌: ಕೊರೊನಾ ವೈರಸ್‌ನ ಉಗಮ ಸ್ಥಾನ ಚೀನಾದಲ್ಲಿ ಮತ್ತೆ ಮಹಾಮಾರಿ ರೋಗ ಉಲ್ಬಣವಾಗುವ ಸಾಧ್ಯತೆಗಳು ಕಾಣಿಸಿವೆ. ಚೀನಾದಲ್ಲಿ ಕೊರೊನಾ ಸೋಂಕಿನ 49 ಹೊಸ ಪ್ರಕರಣಗಳು ವರದಿಯಾಗಿದೆ. ಇವುಗಳಲ್ಲಿ ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ 36 ಪ್ರಕರಣಗಳು ಪತ್ತೆಯಾಗಿವೆ.

ಚೀನಾದಲ್ಲಿ ಕಳೆದ ವರ್ಷ ಈ ಸಾಂಕ್ರಾಮಿಕ ರೋಗವು ಮೊದಲು ಹೊರಹೊಮ್ಮಿತು. ಅದಾದ ಬಳಿಕ ನಿಯಂತ್ರಣಕ್ಕೆ ತರಲಾಯಿತಾದರೂ ಕಳೆದ ವಾರ ರಾಜಧಾನಿಯಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿವೆ. 

ಬೀಜಿಂಗ್‌ನಲ್ಲಿ ಪತ್ತೆಯಾಗಿರುವ ಪ್ರಕರಣಗಳ ಜೊತೆಗೆ, ಬೀಜಿಂಗ್ ಅನ್ನು ಸುತ್ತುವರಿದಿರುವ ಹೆಬೀ ಪ್ರಾಂತ್ಯದಲ್ಲಿ ಮೂರು ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಹೇಳಿದೆ.

ಇದನ್ನೂ ಓದಿ: 

ಬೀಜಿಂಗ್‌ನ ಕ್ಸಿನ್‌ಫಾಡಿ ಆಹಾರ ಮಾರುಕಟ್ಟೆಯಲ್ಲಿರುವ ಕಾರ್ಮಿಕರ ಸಾಮೂಹಿಕ ಪರೀಕ್ಷೆಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ, ಜೊತೆಗೆ ಅವರ ಹತ್ತಿರ ವಾಸಿಸುವವರು ಮತ್ತು ಇತ್ತೀಚಿನ ವಾರಗಳಲ್ಲಿ ಅಲ್ಲಿಗೆ ಭೇಟಿ ಮಾಡಿದವರನ್ನು ಕೂಡ ಪತ್ತೆಹಚ್ಚಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ಈ ಪ್ರದೇಶದ 46,000 ನಿವಾಸಿಗಳಿಗೆ ವೈರಸ್ ಪರೀಕ್ಷೆ ನಡೆಸಲು ಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಈಗಾಗಲೇ 10,000 ಕ್ಕೂ ಹೆಚ್ಚಿನ ಜನರನ್ನು ಪರೀಕ್ಷಿಸಲಾಗಿದೆ.

ಮಾರುಕಟ್ಟೆಯ ಸಮೀಪವಿರುವ ಹನ್ನೊಂದು ವಸತಿ ಪ್ರದೇಶಗಳನ್ನು ಲಾಕ್‌ಡೌನ್ ಮಾಡಲಾಗಿದೆ ಮತ್ತು ಹಲವಾರು ನಗರಗಳ ನಿವಾಸಿಗಳು ಬೀಜಿಂಗ್‌ಗೆ ಪ್ರಯಾಣಿಸದಂತೆ ಎಚ್ಚರಿಕೆ ನೀಡಲಾಗಿದೆ. ಅಧಿಕಾರಿಗಳು ಮಾರುಕಟ್ಟೆಗೆ ಭೇಟಿ ನೀಡಿದವರನ್ನು ಪತ್ತೆಹಚ್ಚುವ ಪ್ರಯತ್ನಗಳನ್ನು ಚುರುಕುಗೊಳಿಸುತ್ತಿದ್ದಾರೆ.

ಚೀನಾದಲ್ಲಿ ಒಟ್ಟು 177 ಜನರು ಈಗಾಗಲೇ ಅನಾರೋಗ್ಯದಿಂದ ಬಳಲುತ್ತಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. 49 ಹೊಸ  ಪ್ರಕರಣಗಳು ವರದಿಯಾಗಿದ್ದು, ಬೀಜಿಂಗ್‌ನಲ್ಲಿ ಸಾಮೂಹಿಕ ಪರೀಕ್ಷೆಯನ್ನು ಪ್ರಾರಂಭಿಸಿದೆ. ಇವುಗಳಲ್ಲಿ 18 ಹೊಸ ಲಕ್ಷಣರಹಿತ ಪ್ರಕರಣಗಳೂ ಇದ್ದು, ಅವುಗಳಲ್ಲಿ ಏಳು ದೇಶೀಯವಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು