ಸೋಮವಾರ, ಜುಲೈ 26, 2021
26 °C

‌ಕೋವಿಡ್–19 | ಚೀನಾದಲ್ಲಿ ಸೋಂಕು ಪ್ರಕರಣಗಳ ದಿಢೀರ್‌ ಏರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಬೀಜಿಂಗ್‌: ಚೀನಾದಲ್ಲಿ ಕೊರೊನಾ ಸೋಂಕಿನ 66 ಹೊಸ ಪ್ರಕರಣಗಳು ವರದಿಯಾಗಿದೆ.

ವುಹಾನ್‌ನಲ್ಲಿ ಕಾಣಿಸಿಕೊಂಡಿದ್ದ ಸೋಂಕು ಪ್ರಕರಣಗಳು ಏಪ್ರಿಲ್‌ನಲ್ಲಿ ನಿಯಂತ್ರಣಕ್ಕೆ ಬಂದಿವೆ ಎಂದು ಭಾವಿಸಲಾಗಿತ್ತು.  ಆ ಬಳಿಕ ದೇಶದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ಭಾನುವಾರ ವರದಿಯಾಗಿದೆ.

ಬೀಜಿಂಗ್‌ನಲ್ಲಿ ಪ್ರಕರಣಗಳು ದಿಢೀರ್‌ ಏರಿಕೆಯಾಗಿರುವ ಕಾರಣ ಸೋಂಕು ಹರಡುವುದನ್ನು ತಡೆಯಲು ಆರೋಗ್ಯ ಅಧಿಕಾರಿಗಳು ಸಮರೋಪಾದಿಯಲ್ಲಿ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಸೋಂಕಿನ ಲಕ್ಷಣಗಳು ಗೋಚರಿಸದ 103 ಜನರನ್ನು ಕ್ವಾರಂಟೈನ್‌ನಲ್ಲಿಡಲಾಗಿದೆ. ತಪಾಸಣೆಯಲ್ಲಿ ಸೋಂಕು ದೃಢವಾದರೂ ಜ್ವರ, ಕೆಮ್ಮು ಲಕ್ಷಣಗಳು ಕಾಣಿಸಿಕೊಳ್ಳದಂತಹ ಪ್ರಕರಣಗಳು ಇಲ್ಲಿ ಸಮಸ್ಯೆ ತಂದೊಡ್ಡಿವೆ. ಇತರರಿಗೆ ಈ ಸೋಂಕಿತರು ರೋಗ ಹರಡುವ ಭೀತಿ ಇದೆ.

ಮೂರು ದಿನಗಳಲ್ಲಿ ಬೀಜಿಂಗ್‌ನಲ್ಲಿ46 ಪ್ರಕರಣಗಳು ವರದಿಯಾಗಿದ್ದು ಅಧಿಕಾರಿಗಳನ್ನು ಅಚ್ಚರಿಗೊಳಿಸಿತ್ತು. ಈ ಕಾರಣದಿಂದಲೇ ಸ್ಥಳೀಯ ಮಾರುಕಟ್ಟೆಗಳನ್ನು ಬಂದ್‌ ಮಾಡುವ ನಿರ್ಧಾರವನ್ನು ಶನಿವಾರ ಕೈಗೊಳ್ಳಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು