ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ: ಏರುತ್ತಿರುವ ಕೊರೊನಾ ಸೋಂಕು ಪೀಡಿತರ ಸಂಖ್ಯೆ, ಭಾನುವಾರ 648 ಪ್ರಕರಣ ಪತ್ತೆ

Last Updated 23 ಫೆಬ್ರುವರಿ 2020, 6:49 IST
ಅಕ್ಷರ ಗಾತ್ರ

ಬೀಜಿಂಗ್ (ಚೀನಾ): ಕೊರೊನಾ ವೈರಸ್ ಸೋಂಕು ಹೆಚ್ಚಾಗುತ್ತಿದ್ದು,648 ಮಂದಿಗೆ ಸೋಂಕು ತಗುಲಿದೆ ಎಂದು ಭಾನುವಾರ ವರದಿಯಾಗಿದೆ. ಹುಬೇ ನಗರದಲ್ಲಿ ಮಾತ್ರ ಸಾವಿನ ಸಂಖ್ಯೆ ಕಡಿಮೆಯಾಗಿದ್ದೂ ಸೋಂಕು ತಗುಲುವುದೂ ಕಡಿಮೆಯಾಗುತ್ತಿದೆ.

ಆದರೆ, ವುಹಾನ್ ಹಾಗೂ ಇತರೆಡೆಗಳಲ್ಲಿ ಸೋಂಕು ತಗುಲಿರುವ ಪ್ರಕರಣಗಳು ವರದಿಯಾಗಿವೆ, ಹೊಸದಾಗಿ ಶನಿವಾರ ವರದಿಯಾದ 397 ಪ್ರಕರಣಗಳೂಸೇರಿದಂತೆ 648 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.

ಚೀನಾದಲ್ಲಿ ಕೊರೊನಾ ವೈರಸ್ ತಗುಲಿರುವವರ ಸಂಖ್ಯೆ76,936 ಕ್ಕೆ ಏರಿದೆ. ರಾಷ್ಟ್ರೀಯ ಆರೋಗ್ಯ ಆಯೋಗ ಕಳೆದ ತಿಂಗಳಿಂದ ಅಂಕಿಅಂಶಗಳನ್ನು ಪ್ರಕಟಿಸುತ್ತಿದ್ದು, 97 ಜನರ ಸಾವಿನಿಂದ ಆರಂಭವಾದಸಾವಿನ ಸಂಖ್ಯೆ ಈಗ 2,442 ಕ್ಕೆ ತಲುಪಿದೆ.

ಹುಬೇಯಲ್ಲಿ 96 ಮಂದಿ, ಪ್ರಾವಿನ್ಸ್ ಆಸ್ಪತ್ರೆಯಲ್ಲಿ 82 ಮಂದಿ ಸಾವನ್ನಪ್ಪಿದ್ದಾರೆ. ವುಹಾನ್ ನಗರದಲ್ಲಿ ಇದುವರೆಗೂ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಸೋಂಕು ಹರಡುವ ಭೀತಿಯಿಂದ ಜನರು ಮನೆಯಿಂದ ಹೊರಗೆ ಬರದೆ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ.
ಶನಿವಾರ ಹುಬೇ ನಗರದಲ್ಲಿ ಹೊಸದಾಗಿಸೋಂಕು ತಗುಲಿರುವ ಪ್ರಕರಣಗಳು ವರದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT