ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವುಹಾನ್‌ನಲ್ಲಿ ಕೋವಿಡ್‌ ರೋಗಿಗಳೆಲ್ಲ ಆಸ್ಪತ್ರೆಯಿಂದ ಬಿಡುಗಡೆ 

Last Updated 26 ಏಪ್ರಿಲ್ 2020, 9:54 IST
ಅಕ್ಷರ ಗಾತ್ರ

ಶಾಂಘೈ: ಜಾಗತಿಕ ಮಹಾಮಾರಿ ಕೊರೊನಾ ವೈರಸ್‌ನ ಉಗಮ ಸ್ಥಾನ ವುಹಾನ್‌ನ ಯಾವುದೇ ಆಸ್ಪತ್ರೆಯಲ್ಲೂ ಈಗ ಕೊರೊನಾ ವೈರಸ್‌ನ ಸೋಂಕಿತರಿಲ್ಲ. ಎಲ್ಲರನ್ನೂ ಬಿಡುಗಡೆ ಮಾಡಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

‘ಏ. 26ರ ಹೊತ್ತಿಗೆ ವುಹಾನ್‌ನಲ್ಲಿ ಯಾವುದೇ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿಲ್ಲ. ಪರಿಸ್ಥಿತಿಯನ್ನು ಈ ಹಂತಕ್ಕೆ ನಿಯಂತ್ರಿಸಲು ಶ್ರಮಿಸಿದ ವುಹಾನ್‌ ಮತ್ತು ಅಲ್ಲಿನ ಆರೋಗ್ಯ ಸಿಬ್ಬಂದಿಗೆ ಧನ್ಯವಾದಗಳು,’ ಎಂದು ರಾಷ್ಟ್ರೀಯ ಆರೋಗ್ಯ ಆಯೋಗದ ವಕ್ತಾರ ಮಿ ಫೆಂಗ್‌ ಹೇಳಿದ್ದಾರೆ.

ವುಹಾನ್‌ನಲ್ಲಿ ಒಟ್ಟಾರೆ 46452 ಸೋಂಕು ಪ್ರಕರಣಗಳು ಪತ್ತೆಯಾಗಿದ್ದವು. ಇದು ಚೀನಾದ ಒಟ್ಟಾರೆ ಪ್ರಕರಣದಲ್ಲಿ ಶೇ. 56% ಆಗಿತ್ತು. ಇಲ್ಲಿ 3869 ಮಂದಿ ಸಾವಿಗೀಡಾಗಿದ್ದರು, ಇದು ದೇಶದಲ್ಲಿ ಸೋಂಕಿನಿಂದ ಸಂಭವಿಸಿದ್ದ ಒಟ್ಟಾರೆ ಸಾವಿನಲ್ಲಿ 84% ಆಗಿತ್ತು.

ಜಗತ್ತಿನಲ್ಲಿ ಸದ್ಯ 28 ಲಕ್ಷಕ್ಕೂ ಅಧಿಕ ಮಂದಿಗೆ ಕೊರೊನಾ ವೈರಸ್‌ ಸೋಂಕು ತಗುಲಿದ್ದು, ಇದರ ಪರಿಣಾಮವಾಗಿ ಹೆಚ್ಚು ಕಡಿಮೆ 2 ಲಕ್ಷ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಚೀನಾದಲ್ಲಿ 4,636 ಮಂದಿ ಈ ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮಾರಕ ಕಾಯಿಲೆಯು ಕಳೆದ ವರ್ಷದ ಡಿಸೆಂಬರ್‌ನಲ್ಲಿ ಚೀನಾದ ವುಹಾನ್‌ ಪ್ರಾಂತ್ಯದ ವನ್ಯ ಜೀವಿಗಳ ಮಾಂಸ ಮಾರಾಟ ಮಾಡುವ ಮಾರುಕಟ್ಟೆಯಿಂದ ಜನರಿಗೆ ಹರಿಡಿತು ಎಂಬುದು ಈ ವರೆಗೆ ನಂಬಲಾಗಿರುವ ವಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT