ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶೀಯ ಪಥದರ್ಶಕ ವ್ಯವಸ್ಥೆಯ ಕೊನೆಯ ಉಪಗ್ರಹ ಉಡಾವಣೆ ಮಾಡಿದ ಚೀನಾ

Last Updated 23 ಜೂನ್ 2020, 7:06 IST
ಅಕ್ಷರ ಗಾತ್ರ

ಬೀಜಿಂಗ್: ಪಥದರ್ಶಕ ಉಪಗ್ರಹ ವ್ಯವಸ್ಥೆಯ (ನ್ಯಾವಿಗೇಷನ್) ಕೊನೆಯ ಉಪಗ್ರಹವನ್ನು ಚೀನಾ ಮಂಗಳವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಈ ಮೂಲಕ ಜಿಪಿಎಸ್ (ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್) ಹೊಂದಿರುವ ಅಮೆರಿಕಕ್ಕೆ ಸ್ಪರ್ಧೆ ಒಡ್ಡಲಿದ್ದು, ಬಾಹ್ಯಾಕಾಶದಲ್ಲಿ ಪ್ರಾಬಲ್ಯ ಸಾಧಿಸುವತ್ತ ಹೆಜ್ಜೆ ಇರಿಸಿದೆ.

ನೈರುತ್ಯ ಚೀನಾದ ಸಿಚುವಾನ್ ಪ್ರಾಂತ್ಯದ ಷಿಚಾಂಗ್ ಉಪಗ್ರಹ ಉಡಾವಣಾ ಕೇಂದ್ರದಿಂದ ನೌಕೆಯನ್ನು ನಭಕ್ಕೆ ಹಾರಿಸಲಾಯಿತು.

ಮಂಗಳವಾರ ಉಡಾವಣೆ ಮಾಡಲಾದ ನೌಕೆಯು ‘ಬಿಡೌ ಉಪಗ್ರಹ ವ್ಯವಸ್ಥೆ’ಯ 55ನೇ ಉಪಗ್ರಹ. ಇದನ್ನು ಶಕ್ತಿಶಾಲಿ ‘ಮಾರ್ಚ್ 3ಬಿ’ ರಾಕೆಟ್ ಹೊತ್ತೊಯ್ದಿತು ಎಂದು ಚೀನಾದ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.

ಇದರ ಉಡಾವಣೆಯಿಂದ ಚೀನಾವು ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಬಿಡೌ ಪಥದರ್ಶಕ ಉಪಗ್ರಹ ಜಾಲ ಸಂಪೂರ್ಣಗೊಂಡಿದೆ. ಈ ವ್ಯವಸ್ಥೆ ಹೊಂದಿದ ಜಗತ್ತಿನ ನಾಲ್ಕು ಪಥದರ್ಶಕ ಜಾಲಗಳಲ್ಲಿ ಒಂದೆನಿಸಿಕೊಂಡಿದೆ. ಅಮೆರಿಕದ ‘ಜಿಪಿಎಸ್’, ರಷ್ಯಾದ ‘ಗ್ಲೊನಾಸ್ಸ್’ (GLONASS) ಮತ್ತು ಐರೋಪ್ಯ ಒಕ್ಕೂಟದ ‘ಗೆಲಿಲಿಯೊ’ ಸಾಲಿಗೆ ಚೀನಾ ‘ಬಿಡೌ’ ಸೇರ್ಪಡೆಯಾಗಿದೆ. ಅತ್ಯಂತ ನಿಖರವಾದ ಪಥ, ಸ್ಥಾನ ಹಾಗೂ ಸಮಯದ ಮಾಹಿತಿಯನ್ನು ಈ ಜಾಲ ಒದಗಿಸಲಿದೆ.

ಭಾರತ ಕೂಡ ಪಥದರ್ಶಕ ಜಾಲವನ್ನು ಅಭಿವೃದ್ಧಿಪಡಿಸುತ್ತಿದ್ದು ಇದಕ್ಕೆ ‘ನಾವಿಕ್’ ಎಂಬ ಹೆಸರಿಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT