ಶುಕ್ರವಾರ, ಜುಲೈ 30, 2021
20 °C

ಗಡಿ ಸಂಘರ್ಷ: ಉದ್ಧಟತನ ತೋರಿದ ಚೀನಾ ಕಡೆಯಲ್ಲಿ‌ 43 ಸಾವು-ನೋವು

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

prajavani

ಬೀಜಿಂಗ್: ಪೂರ್ವ ಲಡಾಖ್‌ನ ಗಾಲ್ವನ್ ಕಣಿವೆ ಪ್ರದೇಶದ ಭಾರತ–ಚೀನಾ ವಾಸ್ತವ ಗಡಿ ರೇಖೆಯಲ್ಲಿ (ಎಲ್‌ಎಸಿ) 45 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಸೇನೆಯೊಂದಿಗೆ ಸೋಮವಾರ ರಾತ್ರಿ ನಡೆಸಿದ ಹಿಂಸಾತ್ಮಕ ಸಂಘರ್ಷದಲ್ಲಿ ಚೀನಾದ 43 ಸೈನಿಕರ ಸಾವು-ನೋವಾಗಿದೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಗಾಲ್ವನ್ ಕಣಿವೆಯಲ್ಲಿ ಮುಖಾಮುಖಿಯಾದ ವೇಳೆ ಮೃತಪಟ್ಟವರು ಮತ್ತು ಗಂಭೀರವಾಗಿ ಗಾಯಗೊಂಡವರು ಸೇರಿದಂತೆ ಚೀನಾದ 43 ಮಂದಿ ಸಾವು ನೋವುಗಳನ್ನು ಅನುಭವಿಸಿದ್ದಾರೆ ಎಂದು ಭಾರತೀಯ ಸೇನೆಯ ಮೂಲಗಳು ತಿಳಿಸಿರುವುದಾಗಿ ಎಎನ್‌ಐ ಖಚಿತಪಡಿಸಿದೆ.

ಎರಡೂ ಸೇನೆಗಳ ಮುಖಾಮುಖಿ ಸಮಯದಲ್ಲಿ ಸಾವು ನೋವುಗಳಿಗೆ ತುತ್ತಾದ ತಮ್ಮ ಸೈನಿಕರನ್ನು ಏರ್‌ಲಿಫ್ಟ್ ಮಾಡುವ ವೇಳೆ ಎಲ್‌ಎಸಿಯ ಚೀನಾದ ಕಡೆಯಿಂದ ಚಾಪರ್ ಚಟುವಟಿಕೆಯ ಹೆಚ್ಚಳ ಕಂಡುಬಂದಿದೆ ಎಂದು ಎಎನ್‌ಐ ವರದಿ ಮಾಡಿದೆ.

ಆರಂಭದಲ್ಲಿ ಭಾರತ ಸೇನೆಯ ಕರ್ನಲ್‌ ಬಿ. ಸಂತೋಷ್‌ ಬಾಬು, ಹವಾಲ್ದಾರ್‌ ಪಳನಿ ಮತ್ತು ಸಿಪಾಯಿ ಓಝಾ ಹುತಾತ್ಮರಾಗಿದ್ದಾರೆ ಎಂದಷ್ಟೇ ಹೇಳಲಾಗಿತ್ತು. ಆದರೆ, ಸಂಘರ್ಷದ ಸ್ಥಳದಲ್ಲಿ ಕರ್ತವ್ಯದಲ್ಲಿದ್ದು ಗಂಭೀರವಾಗಿ ಗಾಯಗೊಂಡಿದ್ದ ಇನ್ನೂ 17 ಯೋಧರು ಮೃತಪಟ್ಟಿದ್ದಾರೆ ಎಂದು ಮಂಗಳವಾರ ರಾತ್ರಿ ತಿಳಿಸಿದೆ. ಗಾಯಗೊಂಡ ಯೋಧರು ಅತಿ ಎತ್ತರದ ಪ್ರದೇಶದಲ್ಲಿ ಶೂನ್ಯ ತಾಪಮಾನಕ್ಕೆ ಒಡ್ಡಿಕೊಂಡಿದ್ದರಿಂದಾಗಿ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಮೂಲಕ ಸಂಘರ್ಷದಲ್ಲಿ ಭಾರತೀಯ ಸೇನೆಯ 20 ಮಂದಿ ಯೋಧರು ಹುತಾತ್ಮರಾಗಿರುವುದಾಗಿ ಸೇನೆ ತಿಳಿಸಿದೆ.

ಇದನ್ನೂ ಓದಿ:

ಹಿಂಸಾತ್ಮಕ ಮುಖಾಮುಖಿ ಘರ್ಷಣೆಯಲ್ಲಿ ಎರಡೂ ಕಡೆಯವರೂ ಸಾವುನೋವುಗಳನ್ನು ಅನುಭವಿಸಿದ್ದಾರೆ ಮತ್ತು ಗಾಲ್ವನ್ ಕಣಿವೆಯಲ್ಲಿನ ವಾಸ್ತವ ಗಡಿ ರೇಖೆಯನ್ನು  (ಎಲ್‌ಎಸಿ) ವಾಸ್ತವಿಕ ನಿಯಂತ್ರಣ ರೇಖೆಯನ್ನು (ಎಲ್‌ಎಸಿ) ಗೌರವಿಸಲು ಒಮ್ಮತದಿಂದ ಚೀನಾದ ಕಡೆಯವರು ನಿರ್ಗಮಿಸಿದ್ದಾರೆ ಮತ್ತು ಭಾರತದ ಯೋಧರು ಹಿಂದೆ ಸರಿದಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು