3

ಫಾಂಜಿಂಗ್‌ಶಾನ್ ಪರ್ವತ ವಿಶ್ವ ಪಾರಂಪರಿಕ ಪಟ್ಟಿಗೆ

Published:
Updated:

ಬೀಜಿಂಗ್‌: ಚೀನಾದ ಫಾಂಜಿಂಗ್‌ಶಾನ್‌ ಪರ್ವತವನ್ನು ಯುನೆಸ್ಕೊದ ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. 

ಬಹರೇನ್‌ನಲ್ಲಿ ಸೋಮವಾರ ನಡೆದ ವಿಶ್ವ ಪಾರಂಪರಿಕ ಸಮಿತಿಯ 42ನೇ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ವರ್ಷ ಒಟ್ಟು ಐದು ನೈಸರ್ಗಿಕ ಪಾರಂಪರಿಕ ಸ್ಥಳಗಳು ಈ ಬಾರಿ ಸ್ಪರ್ಧೆಯಲ್ಲಿದ್ದವು ಎಂದು ಮಾಧ್ಯಮಗಳು ವರದಿ ಮಾಡಿವೆ. 

ದಟ್ಟ ಅರಣ್ಯ, ಪರ್ವತ ಪ್ರದೇಶ, ಜಲಪಾತಗಳು ಹಾಗೂ 450 ಬಗೆಯ ಪ್ರಾಣಿ ಮತ್ತು ಪಕ್ಷಿ ಪ್ರಭೇದಗಳನ್ನು ಹೊಂದಿರುವ ಫಾಂಜಿಂಗ್‌ಶಾನ್‌ ಪರ್ವತ ನಿಸರ್ಗ ರಮಣೀಯ ತಾಣವಾಗಿದೆ ಎಂದು ಯುನೆಸ್ಕೊ ಹೇಳಿದೆ. 

ಚೀನಾ ಒಟ್ಟು 52 ವಿಶ್ವ ಪಾರಂಪರಿಕ ತಾಣಗಳನ್ನು ಹೊಂದಿದೆ. 

 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !