ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ: ಜನನ ಪ್ರಮಾಣ ಕುಸಿತ

Last Updated 17 ಜನವರಿ 2020, 19:45 IST
ಅಕ್ಷರ ಗಾತ್ರ

ಬೀಜಿಂಗ್‌ : ಚೀನಾದಲ್ಲಿ ಕಳೆದ ವರ್ಷ ಜನನ ಪ್ರಮಾಣದಲ್ಲಿ ಅಪಾರ ಕುಸಿತವಾಗಿದೆ. 1949ರ ಬಳಿಕ ಇದು ಅತ್ಯಂತ ಕಡಿಮೆ ಎಂದು ದಾಖಲಾಗಿದೆ.

ಇದರಿಂದ, ವೃದ್ಧರ ಸಂಖ್ಯೆಯೇ ಹೆಚ್ಚಲಿದ್ದು, ಕೆಲಸ ಮಾಡುವ ಯುವಕರ ಸಂಖ್ಯೆ ಕಡಿಮೆಯಾಗಲಿದೆ ಎನ್ನುವ ಆತಂಕ ಎದುರಾಗಿದೆ. ಜನಸಂಖ್ಯೆ ಬಿಕ್ಕಟ್ಟು ನಿವಾರಿಸುವ ನಿಟ್ಟಿನಲ್ಲಿ ಕಮ್ಯುನಿಸ್ಟ್‌ ಸರ್ಕಾರ 2016ರಲ್ಲಿ ‘ಒಂದೇ ಮಗು’ ನೀತಿಯನ್ನು ಸಡಿಲಗೊಳಿಸಿತ್ತು. ಇದರಿಂದಾಗಿ, ನಾಗರಿಕರು ಎರಡು ಮಕ್ಕಳನ್ನು ಹೊಂದುವ ಅವಕಾಶ ಕಲ್ಪಿಸಿತ್ತು. ಈ ಬದಲಾವಣೆಯಿಂದಲೂ ಜನಸಂಖ್ಯೆ ಹೆಚ್ಚಳವಾಗಿಲ್ಲ.

2019ರಲ್ಲಿ ಜನನ ಪ್ರಮಾಣ ಪ್ರತಿ ಒಂದು ಸಾವಿರ ಜನರಿಗೆ 10.48ರಷ್ಟಿತ್ತು ಎಂದು ರಾಷ್ಟ್ರೀಯ ಸಂಖ್ಯಾವಿಜ್ಞಾನ ಸಂಸ್ಥೆ ತಿಳಿಸಿದೆ.

‘ಜನರು ಈಗ ಸಣ್ಣ ಕುಟುಂಬವನ್ನು ಬಯಸುತ್ತಿದ್ದಾರೆ. ಜತೆಗೆ, ಜೀವನ ವೆಚ್ಚ ಹೆಚ್ಚಾಗಿರುವುದು ಜನನ ಪ್ರಮಾಣ ಇಳಿಕೆಗೆ ಕಾರಣ’ ಎಂದು ವಿಸ್ಕಾನ್ಸಿನ್‌ ಮ್ಯಾಡಿಸನ್‌ ವಿಶ್ವವಿದ್ಯಾಲಯದ ಹಿರಿಯ ವಿಜ್ಞಾನಿ ಯಿ ಫುಕ್ಸಿಯಾನ್‌ ವಿಶ್ಲೇಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT