ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಪಮಾನ ಏರಿಕೆ: ಹಿಗ್ಗಿದ ಹಕ್ಕಿ ರೆಕ್ಕೆ, ಕುಗ್ಗಿದ ದೇಹ

Last Updated 5 ಡಿಸೆಂಬರ್ 2019, 20:00 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಹವಾಮಾನ ವೈಪರೀತ್ಯ ಹಕ್ಕಿಗಳ ಮೇಲೂ ಪ್ರಭಾವ ಬೀರತೊಡಗಿದೆ. ತಾಪಮಾನ ಏರಿಕೆಗೆಹಲವು ಹಕ್ಕಿಗಳ ದೇಹದ ಗಾತ್ರದಲ್ಲಿಇಳಿಕೆಯಾಗುತ್ತಿದ್ದು, ರೆಕ್ಕೆಗಳ ಗಾತ್ರ ಏರಿಕೆಯಾಗುತ್ತಿದೆ ಎಂದು ಅಧ್ಯಯನವೊಂದು ತಿಳಿಸಿದೆ.

ಅಮೆರಿಕದ ಮಿಷಿಗನ್‌ ವಿಶ್ವವಿದ್ಯಾಲಯದ ಸಂಶೋಧಕರು 52 ಜಾತಿಯ 70 ಸಾವಿರ ಉತ್ತರ ಅಮೆರಿಕದ ವಲಸೆ ಹಕ್ಕಿಗಳ ಅಧ್ಯಯನ ನಡೆಸಿ ವರದಿ ತಯಾರಿಸಿದ್ದಾರೆ. ಇವುಗಳಲ್ಲಿ ಹೆಚ್ಚಿನ ಹಕ್ಕಿಗಳು ಹಾರಾಡುವ ವೇಳೆಷಿಕಾಗೊದಲ್ಲಿ ಕಟ್ಟಡಗಳಿಗೆ ಅಪ್ಪಳಿಸಿ ಮೃತಪಟ್ಟಿದ್ದವು.1978ರಿಂದ 2016ರವರೆಗೆ ಎಲ್ಲ ಜಾತಿಯ ಹಕ್ಕಿಗಳ ದೇಹ ಗಾತ್ರದಲ್ಲಿ ಇಳಿಕೆ ಕಂಡುಬಂದಿದೆ.

ಈ ಅಧ್ಯಯನ ವರದಿ ‘ಇಕೊಲಜಿ ಲೆಟರ್ಸ್‌’ನಲ್ಲಿ ಪ್ರಕಟವಾಗಿದ್ದು, 40 ಜಾತಿಯ ಹಕ್ಕಿಗಳಲ್ಲಿ ರೆಕ್ಕೆಗಳ ಗಾತ್ರ ಹಿಗ್ಗಿರುವುದು ಕಂಡುಬಂದಿದೆ.

‘ಹೆಚ್ಚುತ್ತಿರುವ ತಾಪಮಾನವೇ ಹಕ್ಕಿಗಳ ದೇಹದ ಗಾತ್ರ ಕುಗ್ಗಲು ಕಾರಣ ಎನ್ನುವುದಕ್ಕೆ ಹಲವು ಸಾಕ್ಷ್ಯಗಳಿವೆ. ಈ ಹಿಂದೆನಡೆದ ಅಧ್ಯಯನಗಳೂ ಇದಕ್ಕೆ ಪೂರಕವಾಗಿವೆ’ ಎಂದು ಮುಖ್ಯ ಸಂಶೋಧಕ ಪ್ರೊ. ಬ್ರಿಯನ್‌ ವೀಕ್ಸ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT