ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣ ಬದಲಿಸುವ ಕೃತಕ ಚರ್ಮ ಅಭಿವೃದ್ಧಿ

Last Updated 22 ಆಗಸ್ಟ್ 2019, 20:40 IST
ಅಕ್ಷರ ಗಾತ್ರ

ಲಂಡನ್‌: ಊಸರವಳ್ಳಿಯಂತೆಬೆಳಕಿಗೆ ಒಡ್ಡಿದೊಡನೆ ಬಣ್ಣ ಬದಲಾಗುವಂತಹ ಕೃತಕ ಚರ್ಮವನ್ನು ಕೇಂಬ್ರಿಜ್‌ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.

ಈ ಕುರಿತು ‘ಅಡ್ವಾನ್ಸ್‌ಡ್‌ ಆಪ್ಟಿಕಲ್‌ ಮೆಟೀರಿಯಲ್ಸ್‌’ ನಿಯತಕಾಲಿಕದಲ್ಲಿ ಸಂಶೋಧನಾ ವರದಿ ಪ್ರಕಟವಾಗಿದೆ.ಚಿನ್ನದ ಸೂಕ್ಷ್ಮಕಣಗಳನ್ನು ಪಾಲಿಮರ್‌ ಶೆಲ್‌ಗೆ ಲೇಪಿಸಿ, ಅದನ್ನು ನೀರು ಮಿಶ್ರಿತ ಎಣ್ಣೆಯಲ್ಲಿ ಹಿಸುಕಿ ಈ ಉತ್ಪನ್ನವನ್ನು ತಯಾರಿಸಲಾಗಿದೆ. ಬಿಸಿ ಅಥವಾ ಬೆಳಕಿಗೆ ಈ ಕೃತಕ ಚರ್ಮವನ್ನು ಒಡ್ಡಿದಲ್ಲಿ ಕಣಗಳು ಒಂದಾಗಿ ಮೇಲ್ಮೈ ಬಣ್ಣ ಬದಲಾಗುತ್ತದೆ ಎಂದು ಉಲ್ಲೇಖಿಸಲಾಗಿದೆ.

ಊಸರವಳ್ಳಿ ಮತ್ತು ಕಟ್ಲ್‌ ಮೀನು ಈ ರೀತಿ ಚರ್ಮದ ಬಣ್ಣ ಬದಲಾಯಿಸುವ ಸಾಮರ್ಥ್ಯ ಹೊಂದಿವೆ. ಇವುಗಳ ಚರ್ಮದ ಕೋಶಗಳಲ್ಲಿನ ರಚನೆಯು ಹಿಗ್ಗಿದಾಗ ಅಥವಾ ಕುಗ್ಗಿದಾಗ ಬಣ್ಣ ಬದಲಾಗುತ್ತವೆ. ಇದನ್ನೇ ಆಧರಿಸಿ ಕೇಂಬ್ರಿಜ್ ವಿಶ್ವವಿದ್ಯಾಲಯದ ಸಂಶೋಧಕರು ಕೃತಕ ಚರ್ಮ ಅಭಿವೃದ್ಧಿಪಡಿಸಿದ್ದಾರೆ.

ಪ್ರಸ್ತುತ ಅಭಿವೃದ್ಧಿಪಡಿಸಿರುವ ಚರ್ಮವು ಒಂದು ಪದರದಿಂದ ಕೂಡಿದೆ. ಹೀಗಾಗಿ ಕೇವಲ ಒಂದು ಬಣ್ಣವಷ್ಟೇ ಗೋಚರಿಸುತ್ತಿದೆ. ಹೆಚ್ಚಿನ ಪದರಗಳನ್ನು ಅಭಿವೃದ್ಧಿಪಡಿಸಿದಲ್ಲಿ ಊಸರವಳ್ಳಿಯ ಮಾದರಿಯಲ್ಲಿ ಹಲವು ಬಣ್ಣಗಳನ್ನು ಪಡೆಯಲು ಸಾಧ್ಯ ಎಂದು ಸಂಶೋಧಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT