ಗುರುವಾರ , ಡಿಸೆಂಬರ್ 5, 2019
19 °C
Condoms recalled in Uganda over quality concerns: charity

ಭಾರತದ ದೋಷಯುಕ್ತ ಕಾಂಡೋಮ್‌ಗಳು ವಾಪಸ್

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಕಂಪಾಲಾ : ಎಚ್‌ಐವಿ ಸೋಂಕು ಪ್ರಕರಣಗಳು ಹೆಚ್ಚಿರುವ ಉಗಾಂಡಾಗೆ ಪೂರೈಸಲಾಗಿದ್ದ ಸಾವಿರಾರು ದೋಷಯುಕ್ತ ಕಾಂಡೋಮ್‌ಗಳನ್ನು ಹಿಂಪಡೆಯಲಾಗಿದೆ ಎಂದು ಜಾಗತಿಕ ಆರೋಗ್ಯ ಸೇವಾ ಸಂಸ್ಥೆ ಮೇರಿ ಸ್ಟೋಪ್ಸ್‌ ಹೇಳಿದೆ. ‘ಕಾಂಡೋಮ್‌ಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿವೆ’ ಎಂದು ಉಗಾಂಡಾದ ರಾಷ್ಟ್ರೀಯ ಔಷಧ ಪ್ರಾಧಿಕಾರ (ಎನ್‌ಡಿಎ) ಎಚ್ಚರಿಕೆ ನೀಡಿತ್ತು. ಭಾರತ ಮೂಲದ ಎಂಎಚ್‌ಎಲ್‌ ಹೆಲ್ತ್‌ಕೇರ್‌ ಸಂಸ್ಥೆ 2019ರ ಏಪ್ರಿಲ್‌ನಲ್ಲಿ ಕಾಂಡೋಮ್‌ಗಳನ್ನು ತಯಾರಿಸಿದ್ದು, ಬಾಳಿಕೆ ಅವಧಿಯು ಏಪ್ರಿಲ್‌ 2022ರವರೆಗೂ ಇರಲಿದೆ ಎಂದು ದಾಖಲಿಸಲಾಗಿತ್ತು. ಮೇರಿ ಸ್ಟೋಪ್ಸ್‌ನ ಉಗಾಂಡಾ ವಕ್ತಾರ ಡೇವಿಡ್‌ ಕಮು, ‘ನಾಲ್ಕು ಲಕ್ಷ ಕಾಂಡೋಮ್‌ಗಳಿದ್ದ ಎರಡು ದಾಸ್ತಾನುಗಳಲ್ಲಿ ದೋಷವಿತ್ತು‘ ಎಂದರು.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು