ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಗಲಕ್ಷಣ ಇಲ್ಲದ ಸೋಂಕಿತರಿಂದ ಕೊರೊನಾ ಹರಡುವ ಸಾಧ್ಯತೆ ಕಡಿಮೆ: ಡಬ್ಲ್ಯೂಎಚ್‌ಒ

Last Updated 10 ಜೂನ್ 2020, 12:02 IST
ಅಕ್ಷರ ಗಾತ್ರ

ಜಿನೀವಾ:ಕೆಮ್ಮು,ಶೀತ, ಜ್ವರದಂತಹ ಪೂರ್ವಭಾವಿ ಲಕ್ಷಣಗಳೇ ಕಾಣಿಸದ ಸೋಂಕಿತ ವ್ಯಕ್ತಿಗಳಿಂದ ಕೊರೊನಾ ಹರಡುವ ಸಾಧ್ಯತೆ ತೀರಾ ಕಡಿಮೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಸ್ಪಷ್ಟಪಡಿಸಿದೆ.

ಜಿನೀವಾದ ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ವಿಶ್ವದ ನಾನಾ ದೇಶಗಳ ಆರೋಗ್ಯ ತಜ್ಞರ ಸಭೆಯಲ್ಲಿ ಡಬ್ಲ್ಯೂಎಚ್ಒ ತಾಂತ್ರಿಕ ವಿಭಾಗ ಮತ್ತು ಸಾಂಕ್ರಾಮಿಕ ರೋಗ ವಿಭಾಗದ ಮುಖ್ಯಸ್ಥೆ ಮಾರಿಯಾ ವಾನ್‌ ಕರ್ಖೋವ್ ಈ ವಿಷಯವನ್ನು ಖಚಿತಪಡಿಸಿದ್ದಾರೆ.‌

ರೋಗಲಕ್ಷಣಗಳು ಗೋಚರಿಸದ ಕೊರೊನಾ ಸೋಂಕು ಪ್ರಕರಣಗಳು ಸದ್ಯ ಸಿಂಗಪುರ ಮತ್ತು ಚೀನಾದಲ್ಲಿ ವರದಿಯಾಗಿವೆ. ಉಳಿದ ರಾಷ್ಟ್ರಗಳಲ್ಲಿ ಇನ್ನೂ ಈ ಬಗ್ಗೆ ಯಾವುದೇ ವರದಿಯಾಗಿಲ್ಲ ಎಂದು ಅವರು ಹೇಳಿದ್ದಾರೆ.

ಚೀನಾದ ವುಹಾನ್‌ನಲ್ಲಿ ಕೊರೊನಾ ಸೋಂಕು ತಗುಲಿದ 300 ಜನರಲ್ಲಿ ಯಾವುದೇ ರೋಗಲಕ್ಷಣಗಳು ಕಾಣಿಸಿಕೊಂಡಿ ರಲಿಲ್ಲ.ಅಷ್ಟೇ ಅಲ್ಲ, ಈ 300 ಸೋಂಕಿತರ ನೇರ ಸಂಪರ್ಕದಲ್ಲಿದ್ದ 1,174 ಜನರಲ್ಲೂ ಸೋಂಕು ದೃಢಪಟ್ಟಿಲ್ಲ ಎಂದು ಚೀನಾ ವರದಿ ಮಾಡಿದೆ.

ಕೋವಿಡ್‌ ವೈರಾಣು ಸೋಂಕಿತರಾದರೂ ರೋಗಲಕ್ಷಣ ಕಾಣದ ರೋಗಿಗಳ ಹಲ್ಲುಜ್ಜುವ ಬ್ರಷ್‌, ಟವೆಲ್‌, ಮಗ್, ಮಾಸ್ಕ್‌ ಸೇರಿದಂತೆ ಅವರು ಬಳಸುವ ವಸ್ತುಗಳನ್ನು ಪರೀಕ್ಷಿಸಲಾಗಿದೆ.ಅವರ ಯಾವ ವಸ್ತುಗಳಲ್ಲೂ ಕೋವಿಡ್‌–19 ವೈರಾಣು ಕಂಡುಬಂದಿಲ್ಲ ಎಂದು ಅಂತರರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಜರ್ನಲ್‌ ವರದಿ ಮಾಡಿದೆ.

ರೋಗಲಕ್ಷಣಗಳು ಕಾಣಿಸದ ಕೊರೊನಾ ಪೀಡಿತರಿಂದ ಸೋಂಕು ತ್ವರಿತಗತಿಯಲ್ಲಿ ಬೇರೊಬ್ಬರಿಗೆ ಹರಡುವುದಿಲ್ಲ ಎಂಬುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗಳಾಗಬೇಕಿದೆ ಎಂದುಮಾರಿಯಾ ವಾನ್‌ ಕರ್ಖೋವ್‌ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT