ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸೆರೆಯಲ್ಲಿ ಸೌದಿ ರಾಜವಂಶ, ಲಾಕ್ ಡೌನ್ ಜಾರಿ, ಹಜ್ ರದ್ದು ಸಾಧ್ಯತೆ

Last Updated 11 ಏಪ್ರಿಲ್ 2020, 4:13 IST
ಅಕ್ಷರ ಗಾತ್ರ

ರಿಯಾದ್ (ಸೌದಿಅರೆಬಿಯಾ): ವಿಶ್ವದಾದ್ಯಂತ 183 ರಾಷ್ಟ್ರಗಳಲ್ಲಿ ರುದ್ರನರ್ತನ ಮಾಡುತ್ತಿರುವ ಕೊರೊನಾ ಸೋಂಕು ಈಗ ಸೌದಿ ಅರೆಬಿಯಾವನ್ನು ತಲುಪಿದ್ದು, ಇಡೀ ರಾಜವಂಶವೇ ಕೋವಿಡ್ ಸೆರೆಯಲ್ಲಿದೆ.

ಸೌದಿಹಿರಿಯ ದೊರೆಗೆ ಸೋಂಕು ತಗುಲಿದ್ದು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ.ಅಲ್ಲದೆ, ರಾಜಮನೆತನದ 12ಕ್ಕಿಂತಲೂ ಹೆಚ್ಚು ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ರಾಜಮನೆತನಕ್ಕಾಗಿಯೇ ಇರುವ ಆಸ್ಪತ್ರೆಯ ವೈದ್ಯರು ರಾಜಮನೆತನ ಹಾಗೂ ಅವರ ನಿಕಟವರ್ತಿಗಳಿಗಾಗಿಯೇ 500 ಹಾಸಿಗೆಗಳನ್ನು ಸಿದ್ಧಪಡಿಸಿದ್ದು, ಚಿಕಿತ್ಸೆ ನೀಡಲು ಸಿದ್ಧತೆ ನಡೆಸಿದ್ದಾರೆ.ಇದಲ್ಲದೆ, ಸೌದಿ ಆರೋಗ್ಯ ಇಲಾಖೆಯ ವೈದ್ಯರು ಸಂದೇಶ ಕಳುಹಿಸಿ ಕಟ್ಟೆಚ್ಚರ ವಹಿಸುವಂತೆ ತಿಳಿಸಿದ್ದಾರೆ.

ಮಂಗಳವಾರ ರಾತ್ರಿಯೇ ದೇಶದ ಎಲ್ಲಾ ಗಣ್ಯವ್ಯಕ್ತಿಗಳಿಗೆ ವಿದ್ಯುನ್ಮಾನ ಮಾಧ್ಯಮದ ಮೂಲಕ ನಿರ್ದೇಶನಗಳನ್ನು ಕಳುಹಿಸಲಾಗಿದೆ ಎಂದು ಕಿಂಗ್ ಫೈಸಲ್ ಸ್ಪೆಷಲಿಸ್ಟ್ ಆಸ್ಪತ್ರೆ ಉಸ್ತುವಾರಿ ಅಧಿಕಾರಿಗಳು ತಿಳಿಸಿದ್ದಾರೆ.

ತೀರಾ ಅಗತ್ಯ ಇರುವ ರೋಗಿಗಳನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ಆಸ್ಪತ್ರೆಯ ವೈದ್ಯರು ಸಂದೇಶದಲ್ಲಿ ತಿಳಿಸಿದ್ದಾರೆ. ಕೊರೊನಾ ಸೋಂಕು ಪೀಡಿತರು ಎಷ್ಟು ಮಂದಿ ಇದ್ದಾರೆ ಎಂಬುದು ತಿಳಿದಿಲ್ಲ.ಆದರೆ, ಕಟ್ಟೆಚ್ಚರದಿಂದ ಇರಬೇಕು. ಅಲ್ಲದೆ, ರಾಜಮನೆತನದ ಪರಿವಾರದವರಿಗೆ ಮಾತ್ರ ಚಿಕಿತ್ಸೆ ನೀಡಲಾಗುವುದು. ಅಲ್ಲದೆ ಅಗತ್ಯವಿರುವ ರಾಜಮನೆತನದವರಿಗೆಕೊಠಡಿಗಳನ್ನು ಸಿದ್ಧಪಡಿಸಲಾಗಿದೆ ಎಂದುವೈದ್ಯರು ತಿಳಿಸಿದ್ದಾರೆ.

ಆರು ವಾರಗಳ ನಂತರ ರಾಜಮನೆತನದವರಿಗೆ ಕೊರೊನಾ ಸೋಂಕು ತಗುಲುವುದರೊಂದಿಗೆ ಸೌದಿದೊರೆಯ ಕುಟುಂಬಕ್ಕೆ ತಗುಲಿರುವುದು ತೀವ್ರ ಆತಂಕ ಸೃಷ್ಟಿ ಮಾಡಿದೆ.ರಾಜಮನೆತನದ ಸುಮಾರು 150 ಮಂದಿಗೆ ಕೊರೊನಾ ಸೋಂಕು ತಗುಲಿದೆ ಎಂದು ರಾಜಮನೆತನದ ಜೊತೆ ನಿಕಟ ಸಂಪರ್ಕ ಹೊಂದಿರುವ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.

ಸೌದಿ ಅರೆಬಿಯಾ ಹಿರಿಯ ರಾಜ ಸಲ್ಮಾನ್ (84) ಸ್ವಯಂ ರಕ್ಷಣೆಗಾಗಿ ಕೆಂಪು ಸಮುದ್ರದ ಸಮೀಪ ಇರುವ ಜಿದ್ದಾ ನಗರಕ್ಕೆ ಸಮೀಪದ ದ್ವೀಪವೊಂದರ ಅರಮನೆಯಲ್ಲಿ ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಅಲ್ಲದೆ, ರಾಜ ಮಹಮದ್ ಬಿನ್ ಸಲ್ಮಾನ್ ಆತನ ಪುತ್ರ 34 ವರ್ಷದ ರಾಜ ಕೆಂಪು ಸಮುದ್ರದ ಸಮೀಪ ಅನೇಕ ಮಂತ್ರಿಗಳೊಂದಿಗೆ ತಾನು ನಿರ್ಮಿಸಬೇಕೆಂದುಕೊಂಡಿರುವ ನಿಯೋಮ್ ನಗರದಲ್ಲಿ ವಾಸ್ತವ್ಯ ಹೂಡಿದ್ದಾನೆ.

ಇರಾನ್‌‌ನಿಂದ ಬಂದ ವ್ಯಕ್ತಿಯೊಬ್ಬರಿಂದ ಈ ಸೋಂಕು ಸೌದಿ ಅರೆಬಿಯಾ ತಲುಪಿದೆ ಎಂದು ನಂಬಲಾಗಿದೆ. ಆದರೂ ಸೋಂಕು ತಗುಲಿರುವುದು ಇಡೀ ಸೌದಿ ಅರೆಬಿಯಾದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಮಾಡಿದೆ.ಸೌದಿ ಅರೆಬಿಯಾದ ರಾಜರು ದೇಶದಲ್ಲಿರುವ ಎಲ್ಲಾ ನಗರಗಳಲ್ಲಿ 24 ಗಂಟೆಗಳ ಲಾಕ್ ಡೌನ್ ಜಾರಿಗೊಳಿಸಿದ್ದಾರೆ. ಅಲ್ಲದೆ, ದೇಶದಿಂದ ಹೊರಹೋಗುವ ಒಳಬರುವ ಎಲ್ಲಾ ವಿಮಾನಗಳನ್ನು ರದ್ದುಪಡಿಸಿದ್ದಾರೆ. ಮಾರ್ಚ್ 2 ರಿಂದ ಮುಸಲ್ಮಾನರ ಪವಿತ್ರ ಯಾತ್ರಾಸ್ಥಳ ಮೆಕ್ಕಾ ಮದೀನಕ್ಕೆ ವಿಶ್ವದ ಯಾವುದೇ ರಾಷ್ಟ್ರದಿಂದ ಭಕ್ತರು ಬರದಂತೆ ನಿರ್ಬಂಧವಿಧಿಸಲಾಗಿದೆ. ಇಲ್ಲಿರುವ ದಿನಸಿ ಅಂಗಡಿಗಳು ಹಾಗೂ ಔಷಧ ಅಂಗಡಿಗಳಿಗೆ ಮಾತ್ರ ತೆರೆಯಲು ಅವಕಾಶ ನೀಡಲಾಗಿದೆ.

ಕೇವಲ ಹತ್ತಿರದ ಸ್ಥಳಗಳಿಗೆ ಹೋಗಲು ಮಾತ್ರ ಅವಕಾಶ ನೀಡಲಾಗುವುದು.ಅಲ್ಲದೆ, ಕೊರೊನಾ ಸೋಂಕಿನಿಂದಾಗಿ ಪವಿತ್ರ ಹಜ್ ಯಾತ್ರೆಯನ್ನು ರದ್ದುಗೊಳಿಸುವ ಸಾಧ್ಯತೆ ಇದೆ ಎಂದು ಆಡಳಿತಗಾರರು ತಿಳಿಸಿದ್ದಾರೆ. 1798ರಿಂದ ಕಳೆದ ವರ್ಷದವರೆಗೆ ಯಾವುದೇ ಅಡೆತಡೆ ಇಲ್ಲದೆ ಹಜ್ ಯಾತ್ರೆ ನಡೆದಿದೆ. ಈ ಬಾರಿ ಸೋಂಕು ಹರಡುವ ಭೀತಿಯಿಂದ ರದ್ದುಗೊಳಿಸುವ ಸಾಧ್ಯತೆ ಇದೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ.ವಿಶ್ವದ ಅತಿದೊಡ್ಡ ತೈಲ ರಫ್ತುದಾರ ಸೌದಿ ಅರೆಬಿಯಾದಲ್ಲಿ ಈವರೆಗೆ ಕೊರೋನಸೋಂಕಿನಿಂದ 41 ಮಂದಿ ಮೃತಪಟ್ಟಿದ್ದು, 2,795 ಸೋಂಕು ತಗುಲಿದ ಪ್ರಕರಣಗಳು ವರದಿಯಾಗಿವೆ.

ಸಾಂಕ್ರಾಮಿಕ ರೋಗವು ಪ್ರಾರಂಭವಾಗುತ್ತಿದೆ ಮನೆಯಲ್ಲೇ ಇರಬೇಕು ಎಂದು ಸೌದಿ ಆರೋಗ್ಯ ಅಧಿಕಾರಿಗಳು ಮಂಗಳವಾರ ಎಚ್ಚರಿಸಿದ್ದಾರೆ.ಮುಂದಿನ ಕೆಲವು ವಾರಗಳಲ್ಲಿ ಸೋಂಕುಗಳ ಸಂಖ್ಯೆ “ಕನಿಷ್ಠ 10,000 ದಿಂದ ಗರಿಷ್ಠ 200,000 ವರೆಗೆ ಇರುತ್ತದೆ” ಎಂದು ಆರೋಗ್ಯ ಸಚಿವ ತವ್ಫಿಕ್ ಅಲ್-ರಬಿಯಾ ಅಧಿಕೃತ ಸೌದಿ ಪತ್ರಿಕೆಗೆ ತಿಳಿಸಿದ್ದಾರೆ.

ಸೋಂಕು ಈಗಾಗಲೆ ಸೌದಿಯಲ್ಲಿ ಎಷ್ಟು ಪ್ರಮಾಣದಲ್ಲಿದೆ ಎಂದು ನಿಖರವಾಗಿ ಹೇಳುವುದು ಕಷ್ಟ. ಸೌದಿ ಅರೇಬಿಯಾವು ಕೆಲವೇ ಮಂದಿಗೆ ಪರೀಕ್ಷೆ ನಡೆಸಲು ಸಮರ್ಥವಾಗಿದೆ, ಅದರ ಪ್ರಮುಖ ವೈದ್ಯಕೀಯ ಪ್ರಯೋಗಾಲಯವು ದಿನದ 24 ಗಂಟೆಯೂ ಕೆಲಸ ಮಾಡುತ್ತಿದೆ. "ಇದು ಎಲ್ಲರಿಗೂ ಸವಾಲಾಗಿದೆ, ಮತ್ತು ಸೌದಿ ಅರೇಬಿಯಾ ಇದಕ್ಕೆ ಹೊರತಾಗಿಲ್ಲ" ಎಂದು ಸೌದಿ ಸರ್ಕಾರದೊಂದಿಗೆ ಕೆಲಸ ಮಾಡುತ್ತಿರುವ ಅಮೆರಿಕಾದ ಹಿರಿಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಜೊವಾನ್ನಾ ಗೇನ್ಸ್ ಹೇಳಿದ್ದಾರೆ.

ರಾಜಮನೆತನವು ಸಾವಿರಾರು ರಾಜಕುಮಾರರನ್ನು ಒಳಗೊಂಡಿದೆ, ಅವರಲ್ಲಿ ಅನೇಕರು ವಾಡಿಕೆಯಂತೆ ಯೂರೋಪಿಗೆ ಪ್ರಯಾಣಿಸುತ್ತಾರೆ. ಕೆಲವರು ವಾಪಸಾಗುವಾಗ ಮರಳಿ ತಂದಿದ್ದಾರೆ ಎಂದು ನಂಬಲಾಗಿದೆ ಎಂದು ಕುಟುಂಬಕ್ಕೆ ಹತ್ತಿರವಿರುವ ವ್ಯಕ್ತಿಗಳು ಹೇಳುತ್ತಾರೆ.

ಸೌದಿ ಅರೆಬಿಯಾ ನಿವಾಸಿಗಳಲ್ಲದವರಲ್ಲಿ ಸೋಂಕು ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಆಗ್ನೇಯ ಏಷ್ಯಾ ಅಥವಾ ಅರಬ್ ದೇಶಗಳಿಂದ ವಲಸೆ ಬಂದ ಕಾರ್ಮಿಕರು ದೇಶದ ಜನಸಂಖ್ಯೆಯ ಸರಿಸುಮಾರು 33 ದಶಲಕ್ಷದಷ್ಟು ಇದ್ದಾರೆ. ಇವರೆಲ್ಲರೂ ಪ್ರಮುಖ ನಗರಗಳ ಹೊರಗಿನ ಪ್ರದೇಶಗಳಲ್ಲಿ ದೊಡ್ಡ ಶಿಬಿರಗಳಲ್ಲಿಒಟ್ಟಿಗೆ ಸೇರುತ್ತಾರೆ, ಹಲವರು ಕೊಠಡಿಗಳಲ್ಲಿ ಮಲಗುತ್ತಾರೆ ಮತ್ತು ಕೆಲಸಕ್ಕಾಗಿ ಬೆಳಿಗ್ಗೆ ಸಂಚರಿಸಲು ಬಸ್ಸುಗಳಲ್ಲಿ ಬರುತ್ತಾರೆ. ಇವು ಸೋಂಕು ಹರಡಲು ಕಾರಣಗಳಾಗಿವೆ ಎಂದು ರಾಜ್ಯದ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT