ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್ ಉಳಿದುಬಿಡಬಹುದು: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

Last Updated 14 ಮೇ 2020, 7:07 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ:ಕೊರೊನಾ ವೈರಸ್ ನಮ್ಮಿಂದತೊಲಗದೇ ಉಳಿಯಬಹುದು ಮತ್ತು ಜನರು ಅದರೊಂದಿಗೆ ಬದುಕಲು ಕಲಿಯಬೇಕಾಗಿ ಬರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ಎಚ್ಚರಿಸಿದೆ.

ಕೆಲವು ದೇಶಗಳು ಲಾಕ್‌ಡೌನ್ ನಿರ್ಬಂಧಗಳನ್ನು ಕ್ರಮೇಣ ಸಡಿಲಿಸಲು ಪ್ರಾರಂಭಿಸುತ್ತಿದ್ದಂತೆ, ಕೊರೊನಾ ಸೋಂಕು ಹರಡುವುದನ್ನು ಸಂಪೂರ್ಣವಾಗಿ ಅಳಿಸಿಹಾಕಲಾಗುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಕಳೆದ ವರ್ಷದ ಕೊನೆಯಲ್ಲಿ ಚೀನಾದ ವುಹಾನ್‌ ಪ್ರಾಂತ್ಯದಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್‌ ಸೋಂಕು ಈಗಾಗಲೇ ಜಗತ್ತಿನಾದ್ಯಂತ ಮೂರು ಲಕ್ಷಕ್ಕೂ ಅಧಿಕ ಜನರ ಸಾವಿಗೆ ಕಾರಣವಾಗಿದೆ.

'ಜಾಗತಿಕ ಜನಸಮುದಾಯದಲ್ಲಿ ಹೊಸ ವೈರಸ್‌ ಪ್ರವೇಶ ಪಡೆದಿದೆ. ಇದು ಯಾವಾಗ ನಮ್ಮನ್ನು ತೊರೆಯಲಿದೆ ಎಂದು ಊಹಿಸುವುದು ಸಾಧ್ಯವಿಲ್ಲ' ಎಂದು ವಿಶ್ವ ಆರೋಗ್ಯ ಸಂಸ್ಥೆ ನಿರ್ದೇಶಕ ಮೈಕ್ ರಯಾನ್ ಹೇಳಿದ್ದಾರೆ.

ಎಚ್‌ಐವಿಯಂತೆ ಕೊರೊನಾ ವೈರಸ್‌ ಸಹ ಸ್ಥಳೀಯವಾಗಬಹುದು. ಔಷಧಿ ಕಂಡುಕೊಂಡು ಜನಸಮುದಾಯಕ್ಕೆ ತಲುಪಿಸಿದ ನಂತರ ಇದರ ನಿಯಂತ್ರಣವಾಗಬಹುದು. ನಾವು ಇದರೊಂದಿಗೆ ಹೊಂದಿಕೊಂಡು ಬದುಕುವುದನ್ನು ರೂಢಿಸಿಕೊಳ್ಳಬೇಕಾದಂತಹ ದುಸ್ಥಿತಿ ಬಂದೊದಗಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT