ಶನಿವಾರ, ಮೇ 30, 2020
27 °C

ಕೊರೊನಾ ಸೋಂಕು: ಸಿಂಗಾಪುರದಲ್ಲಿ ಪತ್ತೆಯಾದ 74 ಹೊಸ ಪ್ರಕರಣಗಳಲ್ಲಿ 7 ಭಾರತೀಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂಗಾಪುರ: ಇಲ್ಲಿ ಬುಧವಾರ ವರದಿಯಾದ 74  ಹೊಸ ಕೊರೊನಾ ವೈರಸ್ ಸೋಂಕು ಪ್ರಕರಣಗಳಲ್ಲಿ ಏಳು ಭಾರತೀಯರು ಸೇರಿದ್ದಾರೆ. ಆ ಮೂಲಕ ಸಿಂಗಾಪುರದಲ್ಲಿ ಒಟ್ಟು ಕೊರೊನಾ ವೈರಸ್‌ ಸೋಂಕು ಪ್ರಕರಣಗಳು 1000 ಗಡಿ ದಾಟಿದೆ.

ದೃಢಪಟ್ಟ ಹೊಸ ಪ್ರಕರಣಗಳಲ್ಲಿ 54 ಜನರು ಸ್ಥಳೀಯರಾಗಿದ್ದಾರೆ. ಅವರು ಹೊರದೇಶಗಳಿಗೆ ಭೇಟಿ ನೀಡಿದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ. 

ಸಿಂಗಪುರ ಆರೋಗ್ಯ ಸಚಿವಾಲಯದ ಬಿಡುಗಡೆ ಮಾಡಿರುವ ಪಟ್ಟಿಯ ಪ್ರಕಾರ, ಹೊಸದಾಗಿ ಸೋಂಕು ಪತ್ತೆಯಾದವರಲ್ಲಿ 7 ಭಾರತೀಯರು ಸೇರಿದ್ದಾರೆ. 

ಸೋಂಕು ಪೀಡಿತರಲ್ಲಿ ಮೂವರು 28, 30 ಮತ್ತು 40 ವರ್ಷ ವಯಸ್ಸಿನವರಾಗಿದ್ದಾರೆ. ಅವರು ಅಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಭಾರತೀಯರು ಎಂದು ತಿಳಿದುಬಂದಿದೆ.

ಸಿಂಗಾಪುರ ವರ್ಕ್‌ ವಿಸಾ ಹೊಂದಿರುವ 50 ವರ್ಷದ ಮಧ್ಯ ವಯಸ್ಕ, 64 ವರ್ಷದ ವೃದ್ಧ ಸೇರಿದ್ದಾರೆ.

ಸಿಂಗಾಪುರ ವರ್ಕ್ ಪಾಸ್‌ನಲ್ಲಿರುವ 37 ವರ್ಷದ ಭಾರತೀಯ ಯುವಕ ಸೇರಿದಂತೆ, 20 ವರ್ಷದ ಭಾರತೀಯ ಮೂಲದ ಸಿಂಗಾಪುರ ಖಾಯಂ ನಿವಾಸಿ ಹೊಸದಾಗಿ ಸೋಂಕು ಪತ್ತೆಯಾದವರ ಪಟ್ಟಿಯಲ್ಲಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು