ಬುಧವಾರ, ಮೇ 27, 2020
27 °C

ದಿನಪತ್ರಿಕೆಗಳಿಂದ ಕೊರೊನಾ ಹರಡುವುದಿಲ್ಲ: ಡಬ್ಲ್ಯುಎಚ್‌ಒ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವಸಂಸ್ಥೆ: ದಿನಪತ್ರಿಕೆಗಳಿಂದ ಕೊರೊನಾವೈರಸ್ ಹರಡುವುದಿಲ್ಲ. ವೈರಸ್‌ಗಳು ಜೀವಂತವಾಗಿ ಇರಲು ಪೂರಕವಾಗಿರುವಂತಹ ವಾತಾವರಣ ದಿನಪತ್ರಿಕೆಗಳಲ್ಲಿ ಇರುವುದಿಲ್ಲ. ಅಲ್ಲದೆ, ಈಗ ಪತ್ರಿಕೆಗಳ ಮುದ್ರಣ ಬಹುತೇಕ ಸ್ವಯಂಚಾಲಿತವಾಗಿರುತ್ತದೆ. ಹೀಗಾಗಿ ಮುದ್ರಣದ ವೇಳೆಯೂ ಸೊಂಕು ಪತ್ರಿಕೆಗೆ ದಾಟಿಕೊಳ್ಳುವ ಸಾಧ್ಯತೆ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೇಳಿದೆ.

ಸೋಂಕು ತಗಲಿರುವ ವ್ಯಕ್ತಿಯಿಂದ ಯಾವುದೇ ರೀತಿಯ ಪ್ಯಾಕ್‌ಮಾಡಲಾದ ಸರಕುಗಳಿಗೆ ವೈರಸ್ ಹರಡುವ ಸಾಧ್ಯತೆ ಅತ್ಯಂತ ಕಡಿಮೆ. ಇದೇ ರೀತಿ ಮುದ್ರಿತ ದಿನಪತ್ರಿಕೆ ಮೂಲಕ ಕೊರೊನಾ ಸೋಂಕು ಹರಡುವ ಸಾಧ್ಯತೆಯೂ ಅತ್ಯಂತ ಕಡಿಮೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವಿವರಿಸಿದೆ.

ಪ್ಯಾಕ್‌ ಮಾಡಲಾದ ಸರಕುಗಳನ್ನು ಒಂದೆಡೆಯಿಂದ ಮತ್ತೊಂದೆಡೆಗೆ, ಒಂದು ವಾತಾವರಣದಿಂದ ಮತ್ತೊಂದು ವಾತಾವರಣಕ್ಕೆ ಸಾಗಿಸಿದರೂ, ಸೋಂಕಿತ ವ್ಯಕ್ತಿಯಿಂದ ಆ ಪ್ಯಾಕೇಜ್‌ಗೆ ಸೋಂಕು ದಾಟಿಕೊಳ್ಳುವ ಸಾಧ್ಯತೆ ಇಲ್ಲವೇ ಇಲ್ಲ. ಹೀಗಾಗಿ ದಿನಪತ್ರಿಕೆಗಳನ್ನು ಮುದ್ರಣಾಲಯದಿಂದ ಓದುಗರ ಮನೆವರೆಗೆ ತಲುಪಿಸುವ ಪ್ರಕ್ರಿಯೆಯಲ್ಲೂ ಸೋಂಕು ಪತ್ರಿಕೆಗಳಿಗೆ ದಾಟಿಕೊಳ್ಳುವ ಸಾಧ್ಯತೆ ಇಲ್ಲ ಎಂದು ಡಬ್ಲ್ಯುಎಚ್‌ಒ ಹೇಳಿದೆ.

ಕೊರೊನಾವೈರಸ್‌ ಹರಡಿರುವ ವಿಶ್ವದ ಹಲವು ರಾಷ್ಟ್ರಗಳಲ್ಲಿ ದಿನಪತ್ರಿಕೆಗಳನ್ನು ಓದುಗರ ಮನೆಗೆ ತಲುಪಿಸುವಲ್ಲಿ ಸಮಸ್ಯೆ ಎದುರಾಗಿದೆ. ಹೀಗಾಗಿ ಸೂಪರ್‌ ಮಾರ್ಕೆಟ್‌ ಮೂಲಕ ಪತ್ರಿಕೆಗಳನ್ನು ತಲುಪಿಸುವ ಮಾರ್ಗ ಕಂಡುಕೊಳ್ಳಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು