ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗತಿಕ ಆರ್ಥಿಕತೆಯ ಮೇಲೆ ಕೊರೊನಾ ಪ್ರಭಾವ: ಐಎಂಎಫ್‌ ಎಚ್ಚರಿಕೆ

Last Updated 22 ಫೆಬ್ರುವರಿ 2020, 13:03 IST
ಅಕ್ಷರ ಗಾತ್ರ

ವಾಷಿಂಗ್ಟನ್: ಚೀನಾ ಕೊರೊನಾ ಸೋಂಕಿನಿಂದ ಎದುರಾಗಿರುವ ಆರ್ಥಿಕ ಸಮಸ್ಯೆ ತಾತ್ಕಾಲಿಕವಾಗಿದ್ದರೂ, ಜಾಗತಿಕ ಆರ್ಥಿಕತೆ ತೀರಾ ನಾಜೂಕಿನ ಸ್ಥಿತಿಯಲ್ಲಿರುವುದರಿಂದ ಜಾಗತಿಕ ಆರ್ಥಿಕ ಬೆಳವಣಿಗೆಗೆ ಹೊಡೆತ ಬೇಳಲಿದೆ ಎಂದು ಐಎಂಎಫ್‌ನ ಮುಖ್ಯಸ್ಥೆ ಕ್ರಿಸ್ಟಲಿನಾಜಾರ್ಜೀವಾ ಅವರು ಹೇಳಿದ್ದಾರೆ.

ಅಮೆರಿಕಾ–ಚೀನಾದ ನಡುವೆ ನಡೆಯತ್ತಿರುವ ವ್ಯಾಪಾರ ಯುದ್ಧವೂ ಸೇರಿದಂತೆಹಲವು ಸಮಸ್ಯೆಗಳನ್ನು ಜಾಗತಿಕ ಮಾರುಕಟ್ಟೆ ಎದುರಿಸುತ್ತಿದ್ದು, ದೀರ್ಘಕಾಲಿಕವಾದ ಮತ್ತೊಂದು ಆರ್ಥಿಕ ಸಂಕಷ್ಟವನ್ನು ಎದುರಿಸುವ ಸ್ಥಿತಿಯಲ್ಲಿ ಜಾಗತಿಕ ಮಾರುಕಟ್ಟೆ ಇಲ್ಲ ಎಂದು ಅವರು ತಮ್ಮ ಬ್ಲಾಗ್‌ನಲ್ಲಿ ಬರೆದಿದ್ದಾರೆ.

ಮಾರುಕಟ್ಟೆಯಲ್ಲಿ ಮುಂದುವರಿದ ಅನಿಶ್ಚಿತತೆಯು ಜನರಿಗೆ ಸಾಮಾನ್ಯವೆಂಬಂತಾಗಿಬಿಟ್ಟಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಕೊರೊನಾ ವೈರಸ್‌ ಈಗಿನ ಅತಿ ದೊಡ್ಡ ಅನಿಶ್ಚಿತತೆ. ನಾಜೂಕಾಗಿರುವ ಆರ್ಥಿಕತೆಯು ಚೇತರಿಸಿಕೊಳ್ಳುತ್ತಿರುವಾಗ ಈ ರೀತಿಯ ಅನಿಶ್ಚಿತ ಬೆಳವಣಿಗೆಗಳು ಯಾವ ರೀತಿ ಬೆದರಿಕೆಯೊಡ್ಡಬಲ್ಲವು ಎಂಬುದನ್ನು ನೆನಪಿಸುತ್ತದೆ ಎಂದು ಅವರು ಹೇಳಿದ್ದಾರೆ.

ಇತ್ತೀಚೆಗಿನ ಮಾಹಿತಿಯ ಪ್ರಕಾರ ಕೊರೊನಾ ವೈರಸ್‌ಗೆ2,345ಜನರು ಮೃತರಾಗಿದ್ದು, 76288ಜನರು ಚೀನಾದಲ್ಲಿ ಸೋಂಕು ಬಾಧಿತರಾಗಿದ್ದಾರೆ. ಸಾರಿಗೆ ವ್ಯವಸ್ಥೆಯಲ್ಲಿಯೂ ವ್ಯತ್ಯಯವಾಗಿದ್ದು, ಬಹುತೇಕ ವ್ಯಾಪಾರ ಮಳಿಗೆಗಳು ಮುಚ್ಚಿವೆ.

ಉತ್ಪಾದನೆಗಾಗಿಚೀನಾವನ್ನು ಅವಲಂಬಿಸಿರುವ ಆ್ಯಪಲ್‌ ಕೂಡ ಐಫೋನ್‌ ಸರಬರಾಜಿನಲ್ಲಿ ವೆತ್ಯಯವಾಗಬಹುದು ಎಂದು ಈ ವಾರ ಎಚ್ಚರಿಕೆ ನೀಡಿತ್ತು.

ಸೋಂಕು ವ್ಯಾಪಿಸುತ್ತಿರುವುದರಿಂದ ಇತರ ದೇಶಗಳಲ್ಲಿ ಗಂಭೀರ ಸಮಸ್ಯೆ ಎದುರಾಗುವುದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಕೊರೊನಾ ವೈರಸ್ ದೀರ್ಘಕಾಲಿಕ ಹಾಗೂ ಹೆಚ್ಚು ವ್ಯಾಪಕವಾಗಿ ಹರಡಿದರೆ ಚೀನಾದ ಆರ್ಥಿಕತೆ ಇನ್ನಷ್ಟು ವೇಗವಾಗಿ ಕ್ಷೀಣಿಸಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಕೊರೊನಾ ಸೋಂಕು ವಿಶೇಷವಾಗಿ ಹೊರ ದೇಶಗಳಿಗೆ ವ್ಯಾಪಿಸಿದರೆ ಸರಕು ಪೂರೈಕೆಗೆ ಹೆಚ್ಚಿನ ಅಡಚಣೆ ಮತ್ತು ಹೂಡಿಕೆಡದಾರರ ವಿಶ್ವಾಸ ಕುಸಿತದ ಜಾಗತಿಕ ಪರಿಣಾಮ ಇನ್ನಷ್ಟು ಹೆಚ್ಚಾಗಬಹುದು ಎಂದು ಅವರು ಹೇಳಿದ್ದಾರೆ.

ವಾರಾಂತ್ಯದಲ್ಲಿ ಸೌದಿ ಅರೇಬಿಯಾದಲ್ಲಿ ನಡೆಯಲಿರುವಜಿ–20 ದೇಶಗಳ ಹಣಕಾಸು ಸಚಿವರು ಮತ್ತು ಸೆಂಟ್ರಲ್ ಬ್ಯಾಂಕ್ ಮುಖ್ಯಸ್ಥರ ಸಭೆಗೆ ಸಿದ್ದ ಪಡಿಸಿದ ವರದಿಯಲ್ಲಿಜಾಗತಿಕ ಆರ್ಥಿಕ ವ್ಯವಸ್ಥೆಯು ಕೆಳಮುಖವಾಗಿಯೇ ಇರುವುದರ ಬಗ್ಗೆ ಅಂತರರಾಷ್ಟ್ರೀಯ ಹಣಕಾಸು ನಿಧಿಯು ಬುಧವಾರ ಮತ್ತೊಮ್ಮೆ ಎಚ್ಚರಿಸಿದೆ.

ಅಮೆರಿಕಾ–ಚೀನಾ ನಡುವಿನ ವ್ಯಾಪಾರಸಮರವು ಒಪ್ಪಂದ ಮೂಲಕ ತಾತ್ಕಾಲಿಕವಾಗಿ ಶಮನಗೊಂಡಿದ್ದರೂ, ಜಾಗತಿಕ ಅಭಿವೃದ್ಧಿ ದರ ಶೇ 3.3ಕ್ಕೆ ಕುಸಿಯಲಿದೆ ಎಂದು ವಾಷಿಂಗ್‌ಟನ್‌ ಮೂಲದ ಸಂಸ್ಥೆಯುಜನವರಿಯಲ್ಲಿ ಮುನ್ಸೂಚನೆ ನೀಡಿತ್ತು.

ಚೀನಾ–ಅಮೆರಿಕಾ ನಡುವಣ ವ್ಯಾಪಾರ ಸಮರಕ್ಕೆ ಸಂಬಂಧಿಸಿದಂತೆ ನಡೆದ ಮೊದಲ ಹಂತದ ಒ‌ಪ್ಪಂದದಿಂದಾಗಿ ಇನ್ನಷ್ಟು ದರ ಹೆಚ್ಚಳಕ್ಕೆ ಕಡಿವಾಣ ಬಿದಿದ್ದು, ವ್ಯಾಪಾರದ ಬಿಕ್ಕಟ್ಟಿನಿಂದ ಉಂಟಾಗಿದ್ದ ಹೊರೆಯು ಜಿಡಿಪಿ 0.2% ರಷ್ಟು ಕಡಿಮೆಮಾಡಲಿದೆ ಎಂದು ಐಎಂಎಫ್ ಅಂದಾಜಿಸಿದೆ.

ಈ ಒಪ್ಪಂದದಲ್ಲಿ ಇತ್ತೀಚೆಗೆ ಹೆರಿರುವ ಶುಲ್ಕ ಪದ್ಧತಿಯ ಭಾಗವನ್ನು ವ್ಯಾಪಿಸುತ್ತದೆ. ಹಾಗೂ ಅಮೆರಿಕಾ ರಿಂದ ಚೀನಾದ ಆಮದಿನಲ್ಲಿ ಕನಿಷ್ಠ ಹೆಚ್ಚಳವನ್ನು ನಿಗದಿಪಡಿಸುತ್ತದೆ ಎಂದು ಅವರು ಹೇಳಿದ್ದಾರೆ.

ಈ ವ್ಯಾಪಾರ ಹೊಂದಾಣಿಕೆಗಳು ಜಾಗತಿಕ ಆರ್ಥಿಕತೆಯ ಮೇಲೆ ಸುಮಾರು 100 ಬಿಲಿಯನ್ ವೆಚ್ಚ ಕಾರಣವಾಗಲಿದೆ.

ಸದಸ್ಯ ರಾಷ್ಟ್ರಗಳ ಆರ್ಥಿಕ ಚೇತರಿಕೆಯು ತುಂಬಾ ನಾಜೂಕಾಗಿದ್ದು ಜನರ ಜೀವನಮಟ್ಟವನ್ನು ಸುಧಾರಿಸಲು ಮತ್ತು ಯುವ ಜನತೆಗೆ ಉದ್ಯೋಗಾವಕಾಶ ಕಲ್ಪಿಸುವಲ್ಲಿ ಹಿನ್ನಡೆಯಾಗಿದೆ ಎಂದು ಎಂದು ಜಿ–20 ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅತ್ಯುತ್ತಮ ಎನಿಸುವ ಸಂದರ್ಭಗಳಲ್ಲೂ ಹೆಚ್ಚಿನ ದೇಶಗಳ ಜಾಗತಿಕ ಆರ್ಥಿಕ ಅಭಿವೃದ್ಧಿ ದರದ ಪ್ರಮಾಣವು ಸಾಧಾರಣವಾಗಿದೆಎಂದು ಜಾರ್ಜೀವಾ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT