ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್‌ ಮಾನವ ನಿರ್ಮಿತ ಅಲ್ಲ: ವುಹಾನ್ ವೈರಾಲಜಿ ಸಂಸ್ಥೆ ಹೇಳಿಕೆ

ವುಹಾನ್ ಇನ್ಸ್‌ಟಿಟ್ಯೂಟ್‌ ಆಫ್‌ ವೈರಾಲಜಿ ಮುಖ್ಯಸ್ಥ ಯುವಾನ್‌ ಹೇಳಿಕೆ
Last Updated 19 ಏಪ್ರಿಲ್ 2020, 20:30 IST
ಅಕ್ಷರ ಗಾತ್ರ

ಬೀಜಿಂಗ್‌: ‘ವುಹಾನ್ ಇನ್ಸ್‌ಟಿಟ್ಯೂಟ್‌ ಆಫ್‌ ವೈರಾಲಜಿ, ಮಾರಕಕೊರೊನಾ ವೈರಸ್‌ನ ಉಗಮ ಸ್ಥಾನ ಅಲ್ಲ. ಈ ವೈರಸ್‌ ಮಾನವ ನಿರ್ಮಿತವೂ ಅಲ್ಲ’ ಎಂದು ಸಂಸ್ಥೆಯ ನಿರ್ದೇಶಕ ಯುವಾನ್‌ ಝಿಮಿಂಗ್‌ ಹೇಳಿದ್ದಾರೆ.

ಚೀನಾದ ಪ್ರತಿಷ್ಠಿತ ಪ್ರಯೋಗಾಲಯವೂ ಆದ ಈ ಸಂಸ್ಥೆಯೇ ಕೊರೊನಾ ವೈರಸ್‌ ಹರಡಲು ಕಾರಣ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಯುವಾನ್‌ ಇದೇ ಮೊದಲ ಬಾರಿಗೆ ಸ್ಫಷ್ಟನೆ ನೀಡಿದ್ದಾರೆ.

‘ಕೆಲವರಿಗೆ ಈ ಬಗ್ಗೆ ಜ್ಞಾನ ಇಲ್ಲ, ಪುರಾವೆಗಳೂ ಇಲ್ಲ. ಹೀಗಿದ್ದು ಅವರು ಉದ್ಧೇಶಪೂರ್ವಕವಾಗಿ ಜನರನ್ನು ತಪ್ಪುದಾರಿಗೆ ಎಳೆಯುತ್ತಿರುವುದು ದುರದೃಷ್ಟಕರ’ ಎಂದು ಅಮೆರಿಕದ ಆರೋಪಗಳಿಗೆ ಅವರು ಪ್ರತಿಕ್ರಿಯಿಸಿದರು.

‘ಸಂಸ್ಥೆಯಲ್ಲಿ ಯಾವ ರೀತಿಯ ಸಂಶೋಧನೆ ನಡೆಯುತ್ತಿದೆ. ವೈರಸ್‌ಗಳನ್ನು ಹಾಗೂ ಪರೀಕ್ಷೆಗೆ ಬಂದ ಮಾದರಿಗಳ ನಿರ್ವಹಣೆ ಹೇಗೆ ನಡೆಯುತ್ತಿದೆ ಎಂಬುದು ನಮಗೆ ಗೊತ್ತು. ಹೀಗಾಗಿ ಸಂಸ್ಥೆಯಿಂದಲೇ ವೈರಸ್‌ ಜಗತ್ತಿಗೆ ಹರಡಿದೆ ಎಂಬ ಆರೋಪದಲ್ಲಿ ಸತ್ಯ ಇಲ್ಲ’ ಎಂದು ಅವರು ಸರ್ಕಾರಿ ಒಡೆತನದ ಸಿಜಿಟಿಎನ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಈ ಸಂಸ್ಥೆಯೇ ವೈರಸ್‌ನ ಮೂಲವಾಗಿದ್ದು, ನಂತರ ಜಗತ್ತಿನ ಇತರ ದೇಶಗಳಿಗೆ ವ್ಯಾಪಿಸಿತು ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಹ ಆರೋಪಿಸಿದ್ದರು.

‘ವುಹಾನ್‌ನ ಈ ಸಂಸ್ಥೆಯಿಂದಲೇ ತಪ್ಪಿಸಿಕೊಂಡಿದ್ದ ವೈರಸ್‌ ನಂತರ ಜಗತ್ತಿನಲ್ಲಿ ವ್ಯಾಪಿಸಿತು ಎಂಬ ವರದಿಗಳಿವೆ. ಈ ಬಗ್ಗೆ ಪರಿಶೀಲನೆ ನಡೆಸಿದ್ದೇವೆ’ ಎಂದೂ ಟ್ರಂಪ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT