ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: ಜಾಗತಿಕ ಆರೋಗ್ಯ ತುರ್ತುಪರಿಸ್ಥಿತಿ ಘೋಷಿಸಿದ ವಿಶ್ವ ಆರೋಗ್ಯ ಸಂಸ್ಥೆ

Last Updated 31 ಜನವರಿ 2020, 20:00 IST
ಅಕ್ಷರ ಗಾತ್ರ

ಜಿನೇವಾ: ಮಾರಕ ಕೊರೊನಾ ವೈರಸ್‌ನಿಂದ ಚೀನಾದಲ್ಲಿ ಮೃತಪಟ್ಟವರ ಸಂಖ್ಯೆ 213ಕ್ಕೆ ಏರಿದ್ದು, ಭಾರತ ಸೇರಿದಂತೆ 12ಕ್ಕೂ ಹೆಚ್ಚು ದೇಶಗಳಲ್ಲಿ ರೋಗದ ಲಕ್ಷಣಗಳು ಕಂಡು ಬಂದಿವೆ. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಯುಎಚ್‌ಒ) ‘ಜಾಗತಿಕ ಆರೋಗ್ಯ ತುರ್ತುಪರಿಸ್ಥಿತಿ’ ಘೋಷಿಸಿದೆ.

ನೊವೆಲ್‌ ಕೊರೊನಾ ವೈರಸ್‌ನ ಕುರಿತು ಚೀನಾವು ವಿಶ್ವಸಂಸ್ಥೆಗೆ ಮಾಹಿತಿಯನ್ನು ನೀಡಿತ್ತು.

ಚೀನಾದಲ್ಲಿ 1,982 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿಗೆ ಒಳಗಾಗಿರುವ ಸಂಖ್ಯೆ 9,692ಕ್ಕೆ ಏರಿದೆ.

ಭಾರತೀಯರನ್ನು ಕರೆತರಲು ವುಹಾನ್‌ಗೆ ವೈದ್ಯರ ತಂಡ

ನವದೆಹಲಿ: ಕೊರೊನಾ ವೈರಸ್‌ ಸೋಂಕು ಪೀಡಿತ ನಗರ ಚೀನಾದ ವುಹಾನ್‌ನಲ್ಲಿರುವ ಭಾರತೀಯರನ್ನು ಕರೆತರಲು ಐವರು ವೈದ್ಯರನ್ನೊಳಗೊಂಡ ಏರ್‌ ಇಂಡಿಯಾ ವಿಮಾನವು ಶುಕ್ರವಾರ ತೆರಳಿತು.

ಚೀನಾದ ಹುಬೆ ಪ್ರಾಂತ್ಯದಲ್ಲಿ ಸುಮಾರು600 ಭಾರತೀಯರು ಇದ್ದಾರೆ. ಇವರಲ್ಲಿ 400 ಮಂದಿ
ಯನ್ನುಭಾರತಕ್ಕೆ ಕರೆತರಲು ಆರೋಗ್ಯ ಸಚಿವಾಲಯದ ಐವರು ನುರಿತ ವೈದ್ಯರು ಮತ್ತು ಒಬ್ಬರು ವೈದ್ಯಕೀಯ ಸಿಬ್ಬಂದಿ ತೆರಳಿದ್ದಾರೆ. ಶನಿವಾರ ವಾಪಸಾಗುವ ಸಂಭವ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

6 ಮಂದಿಗೆ ಸೋಂಕು?: ವೈರಸ್‌ ಲಕ್ಷಣಗಳನ್ನು ಹೋಲುವ ಆರು ಮಂದಿ ದೆಹಲಿಯ ರಾಮಮನೋಹರ ಲೋಹಿಯಾ ಆಸ್ಪತ್ರೆಗೆ ದಾಖಲಾಗಿದ್ದು, ನಿಗಾ ಘಟಕದಲ್ಲಿ ಇರಿಸಲಾಗಿದೆ.

ಸಹಾಯವಾಣಿ ಆರಂಭ: ಸೋಂಕು ಲಕ್ಷಣಗಳು ಕಂಡು ಬಂದರೆ ಕರೆ ಮಾಡಲು ಸಹಾಯವಾಣಿಯನ್ನು
(011– 23978046) ಆರಂಭಿಸಲಾಗಿದೆ.

ವಿದ್ಯಾರ್ಥಿನಿ ಸ್ಥಳಾಂತರ: ಕೇರಳದ ಸೋಂಕಿತ ವಿದ್ಯಾರ್ಥಿನಿಯನ್ನು ತ್ರಿಶ್ಶೂರ್‌ನ ಸಾರ್ವಜನಿಕ ಆಸ್ಪತ್ರೆಯಿಂದ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಶುಕ್ರವಾರ
ಸ್ಥಳಾಂತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT