ಶನಿವಾರ, ಏಪ್ರಿಲ್ 4, 2020
19 °C

ಜಗತ್ತಿನ 60 ರಾಷ್ಟ್ರಗಳಲ್ಲಿ 3000 ಜನರನ್ನು ಬಲಿ ಪಡೆದ ಕೊರೊನಾ ವೈರಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ಯಾರಿಸ್‌: ಚೀನಾದಲ್ಲಿ ಪ್ರಾರಂಭವಾದ ಮಾರಣಾಂತಿಕ ಕೊರೊನಾ ವೈರಸ್‌ ಸೋಂಕು ಪಶ್ಚಿಮ ಯುರೋಪ್‌, ಇರಾನ್‌, ಮಲೇಶಿಯಾ ಮತ್ತು ಅಮೆರಿಕಾ ಸೇರಿದಂತೆ ಜಗತ್ತಿನ ಸುಮಾರು 60 ರಾಷ್ಟ್ರಗಳಲ್ಲಿ ವ್ಯಾಪಕವಾಗುತ್ತಿದೆ. 

ಕೊರೊನಾ ಸೋಂಕಿಗೆ ಈವರೆಗೆ ಬಲಿಯಾದವರ ಸಂಖ್ಯೆ 3000 ದಾಟಿದ್ದು, 88,000 ಕ್ಕೂ ಅಧಿಕ ಜನರು ಸೋಂಕು ಪೀಡಿತರಾಗಿದ್ದಾರೆ.  

ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಫ್ರಾನ್ಸ್‌ನ ವಿಶ್ವ ಪ್ರಸಿದ್ಧ ಲೌವ್ರೆ ಮ್ಯೂಸಿಯಂ ಅನ್ನು ಭಾನುವಾರ ಮುಚ್ಚಲಾಗಿದ್ದು, ಜಾಗತಿಕವಾಗಿ ಪ್ರವಾಸೋದ್ಯಮಕ್ಕೆ ತೀವ್ರ ಹೊಡೆತ ಬಿದ್ದಿದೆ.

ಕೊರೊನಾ ಭೀತಿಯಿಂದ ಈಗಾಗಲೇ ಜಾಗತಿಕವಾಗಿ ಹಣಕಾಸು ಮಾರುಕಟ್ಟೆಗಳು ಕುಸಿಯುತ್ತಿವೆ. ಅನೇಕ ನಗರಗಳಲ್ಲಿ ಖಾಲಿ ಬೀದಿಗಳು ಕಾಣಸಿಗುತ್ತಿವೆ.

ಅಮೆರಿಕದ ವಾಷಿಂಗ್ಟನ್‌ನಲ್ಲಿ ಕೊರೊನಾ ಸೋಂಕು ಮೊದಲ ಬಲಿ ಪಡೆದಿದ್ದು, ಈ ಘಟನೆ ಬೆನ್ನಲ್ಲೇ ಇರಾನ್‌ನಿಂದ ಅಮೆರಿಕಕ್ಕೆ ಜನರು ಆಗಮಿಸುವುದನ್ನು ನಿರ್ಬಂಧಿಸಲಾಗಿದೆ. ಜೊತೆಗೆ ದಕ್ಷಿಣ ಕೊರಿಯಾ ಹಾಗೂ ಇಟಲಿಯ ಕೆಲ ಪ್ರದೇಶಗಳಿಗೆ ಪ್ರಯಾಣಿಸದಂತೆ ತನ್ನ ಜನರಿಗೆ ಸಲಹೆ ನೀಡಿದೆ.

ಆಸ್ಟ್ರೇಲಿಯಾ ಮತ್ತು ಥೈಲ್ಯಾಂಡ್‌ನಲ್ಲಿ ಭಾನುವಾರ ಕೊರೊನಾದಿಂದ ಬಲಿಯಾದವರ ಬಗ್ಗೆ ವರದಿಯಾಗಿದೆ. 

ಕೊರೊನಾ ಸೋಂಕಿಗೆ ಚೀನಾದಲ್ಲಿ ಶನಿವಾರ 35 ಜನರು ಮೃತಪಟ್ಟಿದ್ದು, ಒಟ್ಟಾರೆ ಸಾವಿನ ಸಂಖ್ಯೆ 2,870ಕ್ಕೆ ಏರಿಕೆಯಾಗಿದೆ. 79,824 ಜನರಲ್ಲಿ ಸೋಂಕು ದೃಢಪಟ್ಟಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು