ಗುರುವಾರ , ಆಗಸ್ಟ್ 5, 2021
29 °C

ಬದುಕಿದ್ದಕ್ಕೆ ಪಾಪ ಪ್ರಜ್ಞೆ ಕಾಡಿದೆ: ಕೋವಿಡ್‌ ಚಿಕಿತ್ಸೆ ಬಿಲ್‌ಗೆ ವೃದ್ಧ ಆಘಾತ

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಕೊರೊನಾ ಸೋಂಕಿಗೆ ಒಳಗಾಗಿ ಸಾವು–ಬದುಕಿನ ನಡುವೆ ಹೋರಾಡಿ ಕೊನೆಗೂ ಗುಣಮುಖರಾದ 70 ವರ್ಷದ ವೃದ್ಧರೊಬ್ಬರು, ಆಸ್ಪತ್ರೆಯ ಬಿಲ್(₹8.14 ಕೋಟಿ)‌ ನೋಡಿ ಆಘಾತಕ್ಕೊಳಗಾಗಿದ್ದಾರೆ. 

ಸೋಂಕಿಗೆ ಒಳಗಾಗಿದ್ದ ಮೈಕಲ್‌ ಫ್ಲೋರ್, ಚಿಕಿತ್ಸೆಗೆಂದು ಸ್ವೀಡಿಶ್‌ ಮೆಡಿಕಲ್‌ ಕೇಂದ್ರದಲ್ಲಿ ದಾಖಲಾಗಿದ್ದರು. ‘ಆಸ್ಪತ್ರೆಯ ಬಿಲ್‌ ನೋಡಿ ಒಂದು ಕ್ಷಣ ಅವಕ್ಕಾಗಿದ್ದೆ. ಬದುಕುಳಿದಿದ್ದಕ್ಕೆ ಅಪರಾಧ ಪ್ರಜ್ಞೆ ಕಾಡುತ್ತಿದೆ’ ಎಂದು ಫ್ಲೋರ್‌ ಪ್ರತಿಕ್ರಿಯೆ ನೀಡಿದರು ಎಂದು ಸೀಯಾಟಲ್‌‌ ಟೈಮ್ಸ್‌ ವರದಿ ಮಾಡಿದೆ. 

ಫ್ಲೋರ್‌ ಆಸ್ಪತ್ರೆಯಲ್ಲಿ 62 ದಿನಗಳ ಕಾಲ ಚಿಕಿತ್ಸೆ ಪಡೆದಿದ್ದರು. ಸೋಂಕಿಗೆ ಒಳಗಾಗಿ ಅತಿ ಹೆಚ್ಚು ದಿನ ಆ ಆಸ್ಪತ್ರೆಯಲ್ಲಿ ಇದ್ದ ರೋಗಿ ಇವರಾಗಿದ್ದರು. ಆರೋಗ್ಯ ವಿಮೆ ಹಾಗೂ ಕೋವಿಡ್‌–19 ರೋಗಿಗಳಿಗೆ ಕಾಂಗ್ರೆಸ್‌ ಜಾರಿಗೊಳಿಸಿರುವ ವಿಶೇಷ ಆರ್ಥಿಕ ನಿಯಂತ್ರಣವು ಫ್ಲೋರ್‌ ನೆರವಿಗೆ ಬರುವ ಸಾಧ್ಯತೆ ಇದೆ ಎಂದು ಟೈಮ್ಸ್‌ ಉಲ್ಲೇಖಿಸಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು