ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ದಾಳಿಗೆ ಬೆಚ್ಚಿಬಿದ್ದ ಜನತೆಗೀಗ ಟಾಯ್ಲೆಟ್‌ ಪೇಪರ್‌, ಕಾಂಡೋಮ್‌ಗಳೇ ಆಸರೆ

Last Updated 7 ಮಾರ್ಚ್ 2020, 8:11 IST
ಅಕ್ಷರ ಗಾತ್ರ

ಜಗತ್ತಿನಾದ್ಯಂತ 3000ಕ್ಕೂ ಅಧಿಕ ಜನರ ಸಾವಿಗೆ ಕಾರಣವಾಗಿರುವ ಕೊರೊನಾ ಸೋಂಕು ಹಲವು ದೇಶಗಳಲ್ಲಿ ತಲ್ಲಣಗಳನ್ನು ಸೃಷ್ಟಿಸಿದೆ. ಆತಂಕಗೊಂಡಿರುವ ಜನರು ಸೋಂಕು ಹರಡುವಿಕೆ ತಡೆಗಟ್ಟಲು ಹಲವು ವಸ್ತುಗಳನ್ನು ಖರೀದಿ ಮಾಡುತ್ತಿದ್ದಾರೆ. ಹ್ಯಾಂಡ್‌ ಸ್ಯಾನಿಟೈಜರ್‌ ಮತ್ತು ಪೇಸ್‌ ಮಾಸ್ಕ್‌ಗಳಂತಹ ವಸ್ತುಗಳನ್ನು ಕೊಳ್ಳುವಿಕೆಯಲ್ಲಿ ಜನರು ತೊಡಗಿದ್ದಾರೆ. ಆದರೆ, ಹಲವು ದೇಶಗಳಲ್ಲಿ ಕೊರೊನಾ ಸೃಷ್ಟಿಸಿರುವ ಆವಾಂತರಕ್ಕೆ ಟಾಯ್ಲೆಟ್‌ ಪೇಪರ್‌ ಮತ್ತು ಕಾಂಡೋಮ್‌ಗಳಂತಹ ವಸ್ತುಗಳು ಸಹ ಅಪಾರ ಪ್ರಮಾಣದಲ್ಲಿ ಬಿಕರಿಯಾಗುತ್ತಿವೆ.

ಟಾಯ್ಲೆಟ್‌ ಪೇಪರ್‌ಗಳಿಗೆ ಹೆಚ್ಚಿದ ಬೇಡಿಕೆ

ಆಸ್ಟ್ರೇಲಿಯಾದಲ್ಲಿ ವೈರಸ್ ಹರಡುವ ಬಗ್ಗೆ ಆತಂಕಗಳು ಹೆಚ್ಚಾಗುತ್ತಿದ್ದಂತೆ, ಟಾಯ್ಲೆಟ್‌ ಪೇಪರ್‌ಗಳ ಕೊಳ್ಳುವಿಕೆ ಹೆಚ್ಚಾಗಿದೆ. ಟಾಯ್ಲೆಟ್ ಪೇಪರ್ ಖರೀದಿಯಲ್ಲಿ ಹಠಾತ್ ಏರಿಕೆ ಕಂಡುಬಂದಿದೆ ಎಂದು ‘ಬಿಬಿಸಿ’ ವರದಿ ಮಾಡಿದೆ. ಸಿಡ್ನಿ ಮೂಲದ ಕೆಲವು ಸೂಪರ್‌ ಮಾರ್ಕೆಟ್‌ಗಳು ಒಬ್ಬರಿಗೆ ನಾಲ್ಕು ಪ್ಯಾಕ್ ಖರೀದಿ ಮಿತಿಯನ್ನು ಜಾರಿಗೆ ತರಲು ಒತ್ತಾಯಿಸಿದೆ.

ಆಸ್ಟ್ರೇಲಿಯಾದಲ್ಲಿ ಟಾಯ್ಲೆಟ್‌ ಪೇಪರ್‌ ತಯಾರಿಸುವ ಹಲವು ಖಾರ್ಕಾನೆಗಳಿದ್ದರೂ, ಪೇಪರ್‌ಗೆ ದೊಡ್ಡ ಮಟ್ಟದ ಅಭಾವ ಕಂಡುಬಂದಿದೆ.

ಆಸ್ಟ್ರೇಲಿಯಾ ಅಷ್ಟೇ ಅಲ್ಲದೇ ಸಿಂಗಾಪುರ, ಜಪಾನ್ ಮತ್ತು ಹಾಂಗ್‌ಕಾಂಗ್‌ಗಳಲ್ಲಿ ಟಾಯ್ಲೆಟ್ ಪೇಪರ್‌ಗಳಿಗೆ ಇದೇ ರೀತಿಯ ಕೊರತೆ ಉಂಟಾಗಿದೆ.

ಕಾಂಡೋಮ್‌ ಕೊರತೆ

'ದಿ ಸನ್‌' ಸುದ್ದಿವಾಹಿನಿ ಮಾಡಿರುವ ವರದಿಯ ಪ್ರಕಾರ, ವಿಡಿಯೋ ಗೇಮ್‌ಗಳು ಮತ್ತು ಯೋಗ ಮ್ಯಾಟ್‌ಗಳಂತಹ ವಸ್ತುಗಳ ಮಾರಾಟ ಹೆಚ್ಚಾಗಿದ್ದು, ಕಾಂಡೋಮ್ ಮಾರಾಟದಲ್ಲಿ ತೀವ್ರ ಪ್ರಮಾಣದ ಏರಿಕೆ ಕಂಡುಬಂದಿದೆ.

ಕೊರೊನಾ ವೈರಸ್ ಸೋಂಕಿಗೆ ಒಳಗಾಗುವುದನ್ನು ತಪ್ಪಿಸಲು ಜನರು ತಮ್ಮ ಬೆರಳುಗಳಿಗೆ ಕಾಂಡೋಮ್‌ ಬಳಸಲು ಆರಂಭಿಸಿರುವ ವರದಿಯಾಗಿದೆ. ಆ ಮೂಲಕ ಕಾಂಡೋಮ್ ಪ್ಯಾಕೆಟ್‌ಗಳ ಮಾರಾಟದಲ್ಲಿ ಅಪಾರ ಪ್ರಮಾಣದ ಏರಿಕೆ ಕಂಡುಬಂದಿದೆ ಎಂದು ನ್ಯೂಸ್‌ ವೆಬ್‌ಸೈಟ್ ತಿಳಿಸಿದೆ.

ಬೇಕರಿ ಪರಿಕರಗಳ ಮಾರಾಟದಲ್ಲಿ ಏರಿಕೆ

ಚೀನಾ ಮೂಲದ ಇ-ಕಾಮರ್ಸ್ ತಾಣಗಳಾದ ಪಿಂಡ್ಯುಡಿಯೋ ಪ್ರಕಾರ, ಕೂದಲು ಕತ್ತರಿಸುವ ಸಾಧನಗಳು ಮತ್ತು ಕಾಂಡೋಮ್‌ಗಳನ್ನು ಜನರು ಹೆಚ್ಚು ಕೊಳ್ಳುತ್ತಿದ್ದಾರೆ. ಜೆಡಿ.ಕಾಮ್‌ ವೆಬ್‌ಸೈಟ್‌ ಮೂಲಕ ಬೇಕರಿ ಪರಿಕರಗಳನ್ನು ಅಧಿಕವಾಗಿ ಕೊಳ್ಳಲಾಗುತ್ತಿದೆ ಎಂದು ರಾಯಿಟರ್ಸ್‌ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT