ಭಾನುವಾರ, ಏಪ್ರಿಲ್ 5, 2020
19 °C

ಕೋವಿಡ್ ಜಾಗತಿಕ ಮಹಾಮಾರಿ ಎಂದು ಘೋಷಿಸಿದ ವಿಶ್ವ ಆರೋಗ್ಯ ಸಂಸ್ಥೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಅಮೆರಿಕದಲ್ಲಿ ಕ್ರ್ಯೂಸ್‌ ಶಿಪ್‌ನಿಂದ ಪ್ರಯಾಣಿಕರನ್ನು ವಿಮಾನದ ಮೂಲಕ ಸುರಕ್ಷಿತ ಸ್ಥಳಗಳಿಗೆ ಕಳುಹಿಸುವ ಪ್ರಯತ್ನ– ಸಂಗ್ರಹ ಚಿತ್ರ

ಜಿನೀವಾ: ‘ಕೊರೊನಾ ವೈರಸ್‌ ಸೋಂಕು ಹರಡುವಿಕೆ ತೀವ್ರವಾಗಿರುವುದರಿಂದ, ಕೋವಿಡ್–19 ಸಾಂಕ್ರಾಮಿಕ ರೋಗ ಎಂದು ಘೋಷಿಸಬಹುದು’ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಧನಾಮ್ ಗೆಬ್ರೆಯೆಸಸ್  ಬುಧವಾರ ಘೋಷಿಸಿದರು.

‘ಸೋಂಕು ಹರಡುವಿಕೆ ತೀವ್ರವಾಗಿದೆ. ಅದರ ತಡೆಗೆ ಸಾಕಷ್ಟು ಕ್ರಮ ಕೈಗೊಳ್ಳುತ್ತಿಲ್ಲ. ಇದು ಕಳವಳಕಾರಿ’ ಎಂದು ಅವರು ಹೇಳಿದರು.

'ವೈರಸ್‌ ನಿಗ್ರಹಿಸಲು ನೀವು ಪ್ರಯತ್ನಿಸದಿದ್ದರೆ, ಅದು ನಿಮ್ಮ ಆರೋಗ್ಯ ವ್ಯವಸ್ಥೆಯನ್ನೇ ಅಡಗಿಸಬಹುದು' ಎಂಬ ಎಚ್ಚರಿಕೆ ನೀಡಿದರು. 

ವಿಶ್ವ ಆರೋಗ್ಯ ಸಂಸ್ಥೆ ಸೋಂಕು ವ್ಯಾಪಿಸುತ್ತಿರುವ ಬಗ್ಗೆ ಪೂರ್ಣ ಗಮನ ಹರಿಸಿದೆ. ಅಪಾಯಕಾರಿ ಮಟ್ಟದಲ್ಲಿ ಸೋಂಕು ಹರಡುತ್ತಿರುವುದು ಮತ್ತು ಅದರ ತೀವ್ರತೆ, ಅದಕ್ಕೆ ತಕ್ಕಂತೆ ಕ್ರಮಗೊಳ್ಳದೆ ಇರುವುದು ಕಳವಳಕಾರಿ. ಆ ಬಗ್ಗೆ ನಾವು ಮೌಲ್ಯ ಮಾಪನ ನಡೆಸಿ ಕೋವಿಡ್‌–19 ಸಾಂಕ್ರಾಮಿಕ ರೋಗ ಎಂದು ವರ್ಗೀಕರಿಸಿರುವುದಾಗಿ ತಿಳಿಸಿದರು. 

ಜಗತ್ತಿನ ಸುಮಾರು 100 ರಾಷ್ಟ್ರಗಳಲ್ಲಿ ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಸಂಖ್ಯೆ 1,24,000 ಮುಟ್ಟಿದೆ. ಅದರಿಂದಾಗಿ ಸಾವಿಗೀಡಾದವರ ಸಂಖ್ಯೆ 4,500 ತಲುಪಿದೆ. ಇರಾನ್‌ ಮತ್ತು ಇಟಲಿಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿದೆ. 

ಕಳೆದ ಎರಡು ವಾರಗಳಲ್ಲಿ ಕೋವಿಡ್‌–19 ಪ್ರಕರಣ ಚೀನಾದ ಹೊರಗೆ 13 ಪಟ್ಟು ಹೆಚ್ಚಳವಾಗಿದೆ ಹಾಗೂ ಸೋಂಕು ತಗುಲುತ್ತಿರುವ ರಾಷ್ಟ್ರಗಳ ಸಂಖ್ಯೆ ಮೂರು ಪಟ್ಟು ಹೆಚ್ಚಿದೆ ಎಂದು ಟೆಡ್ರೋಸ್‌ ಹೇಳಿದರು. 

ಇದನ್ನೂ ಓದಿ: 

ಮುಂದಿನ ದಿನಗಳಲ್ಲಿ ಸೋಂಕು ಪ್ರಕರಣಗಳು ಹಾಗೂ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಅಧಿಕ. ನಾಲ್ಕು ರಾಷ್ಟ್ರಗಳಲ್ಲಿ ಶೇ 90ರಷ್ಟು ಪ್ರಕರಣಗಳು ದಾಖಲಾಗಿವೆ. 'ಸೋಂಕು ಉಪಶಮನಗೊಳಿಸಲು ನಾವು ಇನ್ನಷ್ಟು ಪ್ರಭಾವಯುತವಾಗಿ ಕಾರ್ಯನಿರ್ವಹಿಸಬೇಕಿದೆ. ಸೋಂಕು ನಿಯಂತ್ರಿಸುವ ಕಾರ್ಯದಿಂದ ಉಪಶಮನಗೊಳಿಸುವ ಕಾರ್ಯತಂತ್ರದ ಕಡೆಗೆ ಜಗತ್ತು ಕ್ರಮಿಸಬೇಕೆಂದು ಹೇಳುತ್ತಿಲ್ಲ...ಎರಡೂ ರೀತಿಯ ಕಾರ್ಯಾಚರಣೆ ಮುಂದುವರಿಯಬೇಕು' ಎಂದರು. 

ನಾವು ಈವರೆಗೂ ಕೊರೊನಾ ವೈರಸ್‌ನಿಂದ ಸಾಂಕ್ರಾಮಿಕ ಕಾಯಿಲೆ ಹರಡುವುದನ್ನು ಕಂಡಿರಲಿಲ್ಲ. ಹಾಗೆಯೇ ಸಾಂಕ್ರಾಮಿಕವಾದುದರನ್ನು ನಿಯಂತ್ರಿಸುವುದನ್ನೂ ನೋಡಿಲ್ಲ ಎಂದು ಹೇಳಿದರು. 

ಸೋಂಕಿನಿಂದ ಹೆಚ್ಚು ತತ್ತರಿಸಿರುವ ಇರಾನ್‌ನಲ್ಲಿ ಸೋಂಕು ತಡೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ಮತ್ತಷ್ಟು ವೈದ್ಯಕೀಯ ನೆರವಿನ ಅವಶ್ಯಕತೆ ಇದೆ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು