ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 World Update: ವಿಶ್ವದಾದ್ಯಂತ 3.24 ಲಕ್ಷ ದಾಟಿದ ಸಾವಿನ ಸಂಖ್ಯೆ

Last Updated 22 ಮೇ 2020, 16:00 IST
ಅಕ್ಷರ ಗಾತ್ರ

ವಾಷಿಂಗ್ಟನ್/ಇಸ್ಲಾಮಾಬಾದ್: ವಿಶ್ವದಾದ್ಯಂತ ಕೊರೊನಾ ವೈರಸ್ (ಕೋವಿಡ್–19) ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಈವರೆಗೆ 324,063 ಜನ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.

ಜಗತ್ತಿನಾದ್ಯಂತ ಸೋಂಕಿತರ ಸಂಖ್ಯೆ 49 ಲಕ್ಷ ದಾಟಿದೆ. ಜಾನ್ಸ್‌ ಹಾಪ್‌ಕಿನ್ಸ್ ಕೊರೊನಾ ವೈರಸ್ ರಿಸೋರ್ಸ್ ಸೆಂಟರ್ ಮಾಹಿತಿ ಪ್ರಕಾರ, ವಿಶ್ವದಾದ್ಯಂತ ಈವರೆಗೆ 4,929,455 ಜನರಿಗೆ ಸೋಂಕು ತಗುಲಿದೆ. 324,063 ಜನ ಮೃತಪಟ್ಟಿದ್ದು, 1,710,265 ಜನ ಚೇತರಿಸಿಕೊಂಡಿದ್ದಾರೆ.

ಕೊರೊನಾದಿಂದ ತತ್ತರಿಸಿರುವ ಅಮೆರಿಕದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 92,066 ತಲುಪಿದೆ. ಅಲ್ಲಿ ಸೋಂಕಿತರ ಸಂಖ್ಯೆ 1,531,485ಕ್ಕೆ ಏರಿಕೆಯಾಗಿದೆ. ರಷ್ಯಾದಲ್ಲಿ ಈವರೆಗೆ 308,705 ಜನರಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ, 2,972 ಮಂದಿ ಮೃತಪಟ್ಟಿದ್ದಾರೆ.

ಸ್ಪೇನ್‌ನಲ್ಲಿ ಸೋಂಕಿತರ ಸಂಖ್ಯೆ 232,037ಕ್ಕೆ ಏರಿಕೆಯಾಗಿದ್ದು, 27,778 ಮಂದಿ ಸಾವಿಗೀಡಾಗಿದ್ದಾರೆ. ಬ್ರಿಟನ್‌ನಲ್ಲಿ ಸೋಂಕಿತರ ಸಂಖ್ಯೆ 250,138ಕ್ಕೆ ಏರಿಕೆಯಾಗಿದ್ದು, 35,422 ಸೋಂಕಿತರು ಅಸುನೀಗಿದ್ದಾರೆ.

ಪಾಕಿಸ್ತಾನದಲ್ಲಿ ಕೋವಿಡ್‌ಗೆ ಜನಪ್ರತಿನಿಧಿ ಸಾವು: ಪಾಕಿಸ್ತಾನದಲ್ಲಿ ಪಂಜಾಬ್‌ ಪ್ರಾಂತ್ಯದ ಜನಪ್ರತಿನಿಧಿ ಶಾಹೀನ್ ರಾಜಾ (65) ಬುಧವಾರ ಕೋವಿಡ್‌ನಿಂದಾಗಿ ಮೃತಪಟ್ಟಿದ್ದಾರೆ. ಕೊರೊನಾದಿಂದಾಗಿ ಪಾಕಿಸ್ತಾನದಲ್ಲಿ ರಾಜಕಾರಣಿಯೊಬ್ಬರು ಮೃತಪಟ್ಟ ಮೊದಲ ಪ್ರಕರಣವಿದು ಎಂದು ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.

ಪಾಕಿಸ್ತಾನದಲ್ಲಿ ಈವರೆಗೆ 45,898 ಮಂದಿಗೆ ಸೋಂಕು ತಗುಲಿದ್ದು, 985 ಜನ ಸಾವಿಗೀಡಾಗಿದ್ದಾರೆ. ಮಂಗಳವಾರ ಒಂದೇ ದಿನ 46 ಮಂದಿ ಮೃತಪಟ್ಟಿದ್ದರು.

ಕೊರೊನಾ ವೈರಸ್ ಮೊದಲು ಕಾಣಿಸಿಕೊಂಡಿದ್ದ ಚೀನಾದಲ್ಲಿ ಈವರೆಗೆ 84,063 ಜನರಿಗೆ ಸೋಂಕು ತಗುಲಿದೆ. 4,638 ಜನ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT