ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್‌ ದೀರ್ಘಕಾಲೀನ ಸಮಸ್ಯೆ: ವಿಶ್ವ ಆರೋಗ್ಯ ಸಂಸ್ಥೆ 

Last Updated 23 ಏಪ್ರಿಲ್ 2020, 2:18 IST
ಅಕ್ಷರ ಗಾತ್ರ

ಜಿನಿವಾ:‘ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಕೊರೊನಾ ವೈರಸ್‌ (ಕೋವಿಡ್‌–19) ಆರಂಭಿಕ ಹಂತದಲ್ಲಿದೆ. ಅವುಗಳು ಈಗಷ್ಟೇ ವೈರಸ್‌ ವಿರುದ್ಧ ಹೋರಾಟ ಆರಂಭಸಿವೆ. ಹೀಗಾಗಿ ಕೊರೊನಾ ವೈರಸ್‌ ಎಂಬ ಮಹಾಮಾರಿ ಶೀಘ್ರದಲ್ಲೇ ಕೊನೆಗೊಳ್ಳದ, ದೀರ್ಘಕಾಲ ಇರುವ ಕಾಯಿಲೆಯಾಗಿದೆ,’ ಎಂದು ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ಹೇಳಿದೆ.

‘ಕೋವಿಡ್‌ನೊಂದಿಗೆ ನಾವು ಇನ್ನೂ ತುಂಬ ದೂರ ಹೆಜ್ಜೆ ಹಾಕಬೇಕಾಗಿದೆ. ಹೀಗಾಗಿ ತಪ್ಪುಗಳನ್ನು ತಡೆಗಟ್ಟಬೇಕಿದೆ. ಮನೆಗಳಲ್ಲೇ ಇರಬೇಕು ಎಂಬ ಆದೇಶಗಳನ್ನು ಪಾಲಿಸುವುದರಲ್ಲಿ ಮತ್ತು ದೈಹಿಕ ಅಂತರ ಕಾಯ್ದು ಕೊಳ್ಳಬೇಕು ಎಂಬ ವಿಚಾರದಲ್ಲಿ ಯಾವುದೇ ಪ್ರಶ್ನೆ ಇಲ್ಲ. ಇದರಿಂದ ಈಗಾಗಲೇ ಹಲವು ದೇಶಗಳಲ್ಲಿ ರೋಗದ ಹರಡುವಿಕೆಯನ್ನು ನಿಯಂತ್ರಿಸಲಾಗಿದೆ,’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಗೆಬ್ರೆಯೆಸಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

‘ಕೋವಿಡ್‌ ಪಿಡುಗು ಹಲವು ರಾಷ್ಟ್ರಗಳಲ್ಲಿ ಆರಂಭಿಕ ಹಂತದಲ್ಲಿದೆ. ಕೆಲವು ರಾಷ್ಟ್ರಗಳಲ್ಲಿ ಸೋಂಕು ಈಗಷ್ಟೇ ಕಾಣಿಸಿಕೊಳ್ಳುತ್ತಿದೆ. ಕೆಲವು ರಾಷ್ಟ್ರಗಳಲ್ಲಿ ಸೋಂಕಿನ ಸಂಖ್ಯೆಯಲ್ಲಿ ಈಗಷ್ಟೇ ಹೆಚ್ಚಳವಾಗುತ್ತಿದೆ,’ ಎಂದು ಅವರು ಹೇಳಿದರು.

ಸದ್ಯ ಜಗತ್ತಿನಾದ್ಯಂತ 26 ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ತಲುಗುಲಿದ್ದು, ಇದರಲ್ಲಿ 1.80 ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಭಾರತದಲ್ಲಿ 20 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ಇರುವುದು ದೃಢವಾಗಿದೆ. 652 ಮಂದಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT