ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ಸಾಮಗ್ರಿಗಳ ತೀವ್ರ ಕೊರತೆ: ಅಮೆರಿಕಕ್ಕೆ ಸಹಾಯ ಹಸ್ತ ಚಾಚಿದ ಚೀನಾ

Last Updated 30 ಮಾರ್ಚ್ 2020, 3:54 IST
ಅಕ್ಷರ ಗಾತ್ರ

ವಾಸಿಂಗ್ಟ್‌ನ್: ಅಮೆರಿಕಾದಲ್ಲಿ ಕೊರೊನಾ ಸೋಂಕು ಹರಡುವಿಕೆ ಮೂರನೇ ಹಂತ ತಲುಪಿರುವ ಹಿನ್ನೆಲೆಯಲ್ಲಿ ಮುಖಗವಸು, ಕೈಗವಸು, ನಿಲುವಂಗಿ ಮತ್ತು ಇತರ ಮೂಲಭೂತ ವೈದ್ಯಕೀಯ ಸಾಮಗ್ರಿಗಳ ತೀವ್ರ ಕೊರತೆ ಉಂಟಾಗಿದೆ.

ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಹೋರಾಟ ನಡೆಸುತ್ತಿರುವ ಅಮೆರಿಕ ಚೀನಾದ ಸಹಾಯಕೋರಿದೆ.

ಚೀನಾದ ಶಾಂಘೈನಿಂದ 80 ಟನ್ ಮುಖಗವಸು, ಕೈಗವಸು, ನಿಲುವಂಗಿ ಮತ್ತು ಇತರ ವೈದ್ಯಕೀಯ ಸಾಮಗ್ರಿಗಳನ್ನು ಹೊತ್ತ ವಿಮಾನ ಅಮೆರಿಕದ ನ್ಯೂಯಾರ್ಕ್‌ ನಗರಕ್ಕೆ ಭಾನುವಾರ ತಲುಪಿದೆ.

ಏಪ್ರಿಲ್ ಆರಂಭದ ವೇಳೆಗೆ ಅಮೆರಿಕಾದಲ್ಲಿ ಕೊರೊನಾ ಸೋಂಕು ಶೀಘ್ರಗತಿಯಲ್ಲಿ ಹರಡುವ ಮುನ್ಸೂಚನೆ ಇದ್ದು, 22 ವಿಮಾನಗಳಲ್ಲಿ ಮೂಲಭೂತ ಸಾಮಗ್ರಿಗಳನ್ನು ಚೀನಾದಿಂದ ತರಿಸಿಕೊಳ್ಳಲಾಗುವುದು ಎಂದು ಶ್ವೇತಭವನದ ಅಧಿಕಾರಿಗಳು ತಿಳಿಸಿದ್ದಾರೆ.

ಭಾನುವಾರ ನ್ಯೂಯಾರ್ಕ್‌ಗೆ ಬಂದಿಳಿದ ವಿಮಾನವು 13 ಸಾವಿರ ಎನ್‌-95 ಗವಸುಗಳು, 18 ಲಕ್ಷ ಮುಖಗವಸುಗಳು ಮತ್ತು ನಿಲುವಂಗಿಗಳು, 10 ಲಕ್ಷ ಕೈವಸುಗಳು ಹಾಗೂ ಸಾವಿರಾರು ಥರ್ಮೊಮೀಟರ್‌ಗಳನ್ನು ಹೊಂದಿತ್ತು.

ಈ ಎಲ್ಲ ಸಾಮಗ್ರಿಗಳನ್ನು ನ್ಯೂಯಾರ್ಕ್, ನ್ಯೂಜರ್ಸಿ ಮತ್ತು ಕನೆಕ್ಟಿಕಟ್‌ ರಾಜ್ಯಗಳಿಗೆ ವಿತರಣೆ ಮಾಡುವುದಾಗಿ ಫೆಡರಲ್‌ ಏಮರ್ಜನ್ಸಿ ಮ್ಯಾನೇಜ್ಮೆಂಟ್‌ ಏಜೆನ್ಸಿ ತಿಳಿಸಿದೆ.

ಕೊರೊನಾ ಸೋಂಕು ಒಂದು ವರ್ಷ ಮುಂದುವರಿದರೆ ಅಮೆರಿಕ ಒಂದಕ್ಕೆ 3.5 ಬಿಲಿಯನ್ ಮುಖಗವಸುಗಳು ಬೇಕಾಗುತ್ತವೆ ಎಂದು ಅಲ್ಲಿನ ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆ ಅಂದಾಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT