ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್‌ ಸೋಂಕಿನಿಂದ ಅಮೆರಿಕದಲ್ಲಿ ನಾಲ್ವರು ಭಾರತೀಯರ ಸಾವು

Last Updated 6 ಏಪ್ರಿಲ್ 2020, 14:47 IST
ಅಕ್ಷರ ಗಾತ್ರ

ನ್ಯೂಯಾರ್ಕ್: ಕೊರೊನಾ ವೈರಸ್‌ ಸೋಂಕಿನಿಂದ ಅಮೆರಿಕದಲ್ಲಿ ನಾಲ್ವರು ಭಾರತೀಯರು ಮೃತಪಟ್ಟಿದ್ದಾರೆ ಎಂದು ಮಲಯಾಳಿ ವಲಸಿಗರ ಸಂಘಟನೆಯೊಂದು ಸ್ಪಷ್ಟಪಡಿಸಿದೆ.

65 ವರ್ಷದ ಕೇರಳ ಮೂಲದ ಅಲಿಯಮ್ಮ ಕುರಿಯಾಕೋಸ್ ಕೋವಿಡ್‌-19 ಸೋಂಕಿನಿಂದ ಸಾವಿಗೀಡಾಗಿದ್ದಾರೆ.

ಕೊರೊನಾ ವೈರಸ್‌ ಸೋಂಕಿನಿಂದಾಗಿ ಇತರ ಮೂವರು ಭಾರತೀಯರು ಮೃತರಾಗಿದ್ದಾರೆಂದು ಉತ್ತರ ಅಮೆರಿಕಾದಲ್ಲಿನ ಕೇರಳ ಸಂಘಟನೆಗಳ ಒಕ್ಕೂಟ ದೃಢಪಡಿಸಿದೆ.

51 ವರ್ಷದ ಥಂಕಚನ್‌ ಎಂಚಿನಟ್ಟು, 45 ವರ್ಷದ ಅಬ್ರಹಾಂ ಸ್ಯಾಮ್ಯುಯೆಲ್ ಮತ್ತು 21 ವರ್ಷದ ಶಾನ್ ಅಬ್ರಹಾಂ ಎಂಬುವವರು ಮೃತಪಟ್ಟ ದುರ್ದೈವಿಗಳಾಗಿದ್ದಾರೆ.

ಇವರ ನಿಧನದ ಬಗ್ಗೆ ಅಮೆರಿಕದಲ್ಲಿನ ಕೇರಳ ಸಮುದಾಯ ಸಂಘಟನೆಗಳು ತೀವ್ರ ದುಃಖ ವ್ಯಕ್ತಪಡಿಸಿದ್ದು, ಅವರ ಕುಟುಂಬಗಳಿಗೆ ಮತ್ತು ಸ್ನೇಹಿತರಿಗೆ ಸಂತಾಪ ಸೂಚಿಸಿವೆ.

ಮೃತರ ಕುಟುಂಬಗಳೊಂದಿಗೆ ಸಂಪರ್ಕದಲ್ಲಿರುವುದಾಗಿ ನ್ಯೂಯಾರ್ಕ್‌ನ ಕಾನ್ಸುಲೇಟ್‌ ಜನರಲ್ ಆಫ್ ಇಂಡಿಯಾ ತಿಳಿಸಿದೆ.

ಕೊರೊನಾ ಸೋಂಕಿನ ಕೇಂದ್ರಬಿಂದುವಾಗಿರುವ ನ್ಯೂಯಾರ್ಕ್‌ ನಗರ ಒಂದರಲ್ಲೇ 90,000ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಅಮೆರಿಕದಲ್ಲಿ 337,392ಕ್ಕೂ ಅಧಿಕ ಪ್ರಕರಣಗಳು ಬೆಳಕಿಗೆ ಬಂದಿವೆ.

ಕೊರೊನಾ ಸೋಂಕಿಗೆ ಅಮೆರಿಕದಲ್ಲಿ ಈವರೆಗೂ ಬಲಿಯಾದವರ ಸಂಖ್ಯೆ 9,652 ದಾಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT