ಸೋಮವಾರ, ಮೇ 25, 2020
27 °C

ಕೊರೊನಾ ಸೋಂಕು ಹಿನ್ನೆಲೆ: ಚೀನಾ ಉತ್ಪನ್ನಗಳ ಆಮದು ಅನಿವಾರ್ಯ ಎಂದ ಅಮೆರಿಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಸಿಂಗ್ಟನ್‌: ಅಮೆರಿಕದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್‌ 6 ಸಾವಿರಕ್ಕೂ ಅಧಿಕ ಮಂದಿಯನ್ನು ಬಲಿ ತೆಗೆದುಕೊಂಡಿದ್ದು, ಈಗಾಗಲೇ 2 ಲಕ್ಷಕ್ಕೂ ಅಧಿಕ ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. 

ಇಂತಹ ಸನ್ನಿವೇಶದಲ್ಲಿ ಅಮೆರಿಕದಲ್ಲಿ ದೊಡ್ಡ ಮಟ್ಟದ ಬಿಕ್ಕಟ್ಟು ಕಾಣಿಸಿಕೊಂಡಿದ್ದು, ವೈದ್ಯಕೀಯ ಉತ್ಪನ್ನಗಳಿಗಾಗಿ ಚೀನಾವನ್ನು ಅವಲಂಬಿಸಲೇಬೇಕಾದ ಪರಿಸ್ಥಿತಿ ಎದುರಾಗಿದೆ.

ಕೊರೊನಾ ವೈರಸ್‌ ಹರಡುವುದಕ್ಕೂ ಮೊದಲು ಸುಮಾರು ಅರ್ಧದಷ್ಟು ಮುಖಗವಸುಗಳನ್ನು ಅಮೆರಿಕವು ಚೀನಾದಿಂದ ಆಮದು ಮಾಡಿಕೊಂಡಿತ್ತು. ಆದರೆ, ಇವುಗಳು ಕೆಲ ದಿನಗಳಲ್ಲೇ ಖಾಲಿ ಆಗಿ, ಸಾಮಾನ್ಯ ಅಮೆರಿಕ ಪ್ರಜೆಗಳಲ್ಲಿ ಚೀನಾದ ಮುಖಗವಸುಗಳಿಗೆ ಬೇಡಿಕೆ ಅಧಿಕವಾಗಿದೆ.

ಚೀನಾದ ವುಹಾನ್‌ನಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ಸೋಂಕು ಈಗ ಜಗತ್ತಿನಾದ್ಯಂತ 10 ಲಕ್ಷಕ್ಕೂ ಅಧಿಕ ಜನರಲ್ಲಿ ಪತ್ತೆಯಾಗಿದೆ. ಅದರಲ್ಲೂ ಅಮೆರಿಕದಲ್ಲಿ ಕೊರೊನಾ ಸೋಂಕು ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದು, ಅದನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಗಿದೆ.

ಈ ಸಂದರ್ಭದಲ್ಲಿ ಅಮೆರಿಕದಲ್ಲಿ ಮುಖಗವಸು, ಕೈಗವಸು, ನಿಲುವಂಗಿ ಮತ್ತು ವೈದ್ಯಕೀಯ ಪರಿಕರಗಳಿಗೆ ಅಪಾರ ಬೇಡಿಕೆ ಇದೆ.

ಈ ಪರಿಕರಣಗಳನ್ನು ಅಮೆರಿಕಾ ಚೀನಾದಿಂದ ಆಮದು ಮಾಡಿಕೊಳ್ಳುತ್ತಿದೆ. ಈಗಾಗಲೇ 80 ಟನ್‌ನಷ್ಟು ಮುಖಗವಸು, ಕೈಗವಸು ಮತ್ತು ನಿಲುವಂಗಿಗಳನ್ನು ಅಮೆರಿಕಾ ಚೀನಾದಿಂದ ಆಮದು ಮಾಡಿಕೊಂಡಿದ್ದು, ಮುಂದಿನ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಚೀನಾ ಉತ್ಪನ್ನಗಳ ಆಮದು ನಡೆಯಲಿದೆ.

'ಇಂತಹ ಸಮಯದಲ್ಲಿ ಚೀನಾವು ಭಾರಿ ಪ್ರಮಾಣದ ಉತ್ಪನ್ನಗಳ ಪೂರೈಕೆಯ ಮೂಲವಾಗಿದೆ. ಚೀನಾದ ಮೇಲೆ ಅಮೆರಿಕಾವು ಅವಲಂಬಿತವಾಗಲೇಬೇಕಾದ ಅನಿವಾರ್ಯತೆ ಇದೆ' ಎಂದು ಪೀಟರ್‌ಸನ್‌ ಇನ್‌ಸ್ಟಿಟ್ಯೂಟ್ ಫಾರ್ ಇಂಟರ್ನ್ಯಾಷನಲ್ ಎಕನಾಮಿಕ್ಸ್‌ನ ಹಿರಿಯ ಸಂಶೋಧಕ ಚಡ್‌ ಬೌನ್‌ ಹೇಳಿದ್ದಾರೆ. 
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು