ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿನಾಶಕಾರಿ ಮಾನಸಿಕ ಆರೋಗ್ಯ ಬಿಕ್ಕಟ್ಟು ಸೃಷ್ಟಿಸಲಿದೆ ಕೋವಿಡ್‌-19: ವಿಶ್ವಸಂಸ್ಥೆ

Last Updated 14 ಮೇ 2020, 6:00 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಕೊರೊನಾ ಸೋಂಕು ಸೃಷ್ಟಿಸಿರುವ ದುರಂತವು ಜಾಗತಿಕವಾಗಿ ದೊಡ್ಡ ಮಟ್ಟದ ಮಾನಸಿಕ ಆರೋಗ್ಯ ಬಿಕ್ಕಟ್ಟನ್ನು ಹುಟ್ಟುಹಾಕಲಿದೆ ಎಂದು ವಿಶ್ವಸಂಸ್ಥೆ ಗುರುವಾರ ಎಚ್ಚರಿಸಿದೆ.

ಕೋವಿಡ್‌-19 ಜಾಗತಿಕ ಪಿಡುಗಿನಿಂದ ಉಂಟಾಗುವ ವಿನಾಶಕಾರಿ ಮಾನಸಿಕ ತೊಂದರೆಗಳನ್ನು ಪರಿಹರಿಸಲು ತುರ್ತು ಕ್ರಮ ಕೈಗೊಳ್ಳಬೇಕೆಂದು ವಿಶ್ವಸಂಸ್ಥೆ ತನ್ನ ಸದಸ್ಯ ರಾಷ್ಟ್ರಗಳಿಗೆಒತ್ತಾಯಿಸಿದೆ.

ಕೊರೊನಾ ಸೋಂಕು ವ್ಯಾಪಿಸುತ್ತಿದ್ದ ಮೊದಲ ಕೆಲ ತಿಂಗಳುಗಳಲ್ಲಿ ಜನರ ದೈಹಿಕ ಆರೋಗ್ಯವನ್ನು ಕಾಪಾಡುವುದು ಮುಖ್ಯ ಕಾಳಜಿಯಾಗಿತ್ತು. ಆದರೆ, ಕೋವಿಡ್‌-19 ಸೃಷ್ಟಿಸಿರುವ ಆವಾಂತರವು ಜಾಗತಿಕವಾಗಿ ಹೆಚ್ಚು ಜನರ ಮೇಲೆ ಭಾರೀ ಮಾನಸಿಕ ಒತ್ತಡವನ್ನುಂಟು ಮಾಡುತ್ತಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

'ಮಾನಸಿಕ ಆರೋಗ್ಯ ಸೇವೆಗಳನ್ನು ನಾವು ದಶಕಗಳಿಂದ ನಿರ್ಲಕ್ಷಿಸಿದ್ದೇವೆ ಮತ್ತು ಆ ಸೇವೆಗಳಲ್ಲಿ ಕಡಿಮೆ ಹೂಡಿಕೆ ಮಾಡಿದ್ದೇವೆ. ಕೋವಿಡ್‌-19 ಪಿಡುಗಿನಿಂದ ಕುಟುಂಬ ಹಾಗೂ ಸಮುದಾಯಗಳು ಈಗ ಹೆಚ್ಚುವರಿ ಮಾನಸಿಕ ಒತ್ತಡದಿಂದ ಬಳಲುತ್ತಿವೆ' ಎಂದು ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್‌ ಆತಂಕ ವ್ಯಕ್ತಪಡಿಸಿದ್ದಾರೆ.

ಕೋವಿಡ್‌-19 ಸಾಂಕ್ರಾಮಿಕ ರೋಗವನ್ನು ನಿಯಂತ್ರಣಕ್ಕೆ ತಂದ ನಂತರವೂ, ದುಃಖ, ಆತಂಕ ಮತ್ತು ಖಿನ್ನತೆ ಜನರು ಮತ್ತು ಸಮುದಾಯಗಳ ಮೇಲೆ ದುಷ್ಪರಿಣಾಮ ಬೀರುತ್ತವೆ ಎಂದು ಅವರು ಹೇಳಿದ್ದಾರೆ.

ಕೊರೊನಾ ಸೃಷ್ಟಿಸಿರುವ ಆವಾಂತರದಿಂದ ಜೀವನೋಪಾಯ ಕಳೆದುಕೊಳ್ಳುವ, ಪ್ರೀತಿಪಾತ್ರರಿಂದ ದೂರವಾಗುವ ಆತಂಕದಲ್ಲಿರುವ ಜನರು ಹೆಚ್ಚು ಮಾನಸಿಕ ಖಿನ್ನತೆಗೆ ಒಳಗಾಗಲಿದ್ದಾರೆ ಎಂದು ಗುಟೆರಸ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT