ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 World Update: ರಷ್ಯಾದಲ್ಲಿ ಒಂದೇ ದಿನ 10,899 ಹೊಸ ಪ್ರಕರಣಗಳು ಪತ್ತೆ

Last Updated 12 ಮೇ 2020, 17:35 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಮಂಗಳವಾರ ರಷ್ಯಾದಲ್ಲಿ 10,899 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಜಗತ್ತಿನಲ್ಲಿ ಅತೀ ಹೆಚ್ಚು ಸೋಂಕಿತರಿರುವ ಎರಡನೇ ರಾಷ್ಟ್ರವಾಗಿದೆ ಎಂದು ಎಎಫ್‌ಪಿ ಅಂಕಿ ಅಂಶಗಳು ಹೇಳಿವೆ. ಇಲ್ಲಿಯವರೆಗೆ ರಷ್ಯಾದಲ್ಲಿ 232243 ಮಂದಿಗೆ ಸೋಂಕು ತಗುಲಿದೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ವಕ್ತಾರ ಡ್ಮಿಟ್ರಿ ಪೆಸ್ಕೋವ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಾನ್ ಹಾಪ್ಕಿನ್ಸ್ ಕೊರೊನಾವೈರಸ್ ರಿಸೋರ್ಸ್ ಸೆಂಟರ್ ಅಂಕಿಅಂಶಗಳ ಪ್ರಕಾರಜಗತ್ತಿನಾದ್ಯಂತ ಸೋಂಕಿತರ ಸಂಖ್ಯೆ4,222,968 ಆಗಿದೆ. ಅಮೆರಿಕದಲ್ಲಿ ಅತೀ ಹೆಚ್ಚು ಸೋಂಕಿತರು ಇದ್ದು, ಸೋಂಕಿತರ ಸಂಖ್ಯೆ 1354504ಕ್ಕೇರಿದೆ.ರಷ್ಯಾದಲ್ಲಿ-232243, ಬ್ರಿಟನ್‌ನಲ್ಲಿ 227735, ಸ್ಪೇನ್-227436 ಮಂದಿಗೆ ಸೋಂಕು ತಗುಲಿದೆ.

ಇಲ್ಲಿಯವರೆಗೆ 288368 ಮಂದಿ ಕೋವಿಡ್-19 ರೋಗದಿಂದ ಸಾವಿಗೀಡಾಗಿದ್ದಾರೆ. ಅಮೆರಿಕದಲ್ಲಿ 81,076 ಮಂದಿ ಸಾವಿಗೀಡಾಗಿದ್ದು, ಬ್ರಿಟನ್‌ನಲ್ಲಿ 32768 ಮಂದಿ ಸಾವಿಗೀಡಾಗಿದ್ದಾರೆ.

ಯುರೋಪ್‌ ದೇಶಗಳಾದ ಸ್ಪೇನ್‌, ಇಟಲಿ, ಪ್ರಾನ್ಸ್‌ ಮತ್ತು ಇಂಗ್ಲೆಂಡ್‌ಗಳಲ್ಲೂ ಕೋವಿಡ್‌-19 ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ.

ಸ್ಪೇನ್‌ನಲ್ಲಿ 2,68,143 ಸೋಂಕಿತರು ಪತ್ತೆಯಾಗಿದ್ದು, ಈವರೆಗೆ 26,744 ಜನರು ಸಾವಿಗೀಡಾಗಿದ್ದಾರೆ.

ಇಟಲಿಯಲ್ಲಿ 2,19,814 ಸೋಂಕು ಪ್ರಕರಣಗಳು ಬೆಳಕಿಗೆ ಬಂದಿದ್ದು, 30,739 ಸೋಂಕಿತರು ಮರಣ ಹೊಂದಿದ್ದಾರೆ.

ಇಂಗ್ಲೆಂಡ್‌ನಲ್ಲಿ 2,23,060 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 32,065 ಜನರು ಮೃತರಾಗಿದ್ದಾರೆ.

ಪ್ರಾನ್ಸ್‌ನಲ್ಲಿ ಸೋಂಕಿತರ ಸಂಖ್ಯೆ 1,77,423 ತಲುಪಿದ್ದು, 26,643 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT