ಗುರುವಾರ , ಜೂಲೈ 2, 2020
28 °C
ಆದರೂ ವಿಮಾನ ಪ್ರಯಾಣದಿಂದ ದೂರವಿರಿ ಎಂದು ಎಚ್ಚರಿಕೆ

ಕೊರೊನಾ, ಇತರ ವೈರಸ್‌ ವಿಮಾನದಲ್ಲಿ ಬೇಗನೆ ಹರಡಲ್ಲ: ಅಮೆರಿಕ ರೋಗ ನಿಯಂತ್ರಣ ಕೇಂದ್ರ

ಪಿಟಿಐ Updated:

ಅಕ್ಷರ ಗಾತ್ರ : | |

Air travel

ವಾಷಿಂಗ್ಟನ್: ಕೋವಿಡ್–19 ಮತ್ತು ಇತರ ವೈರಸ್‌ಗಳು ವಿಮಾನಗಳಲ್ಲಿ ಸುಲಭವಾಗಿ ಹರಡುವುದಿಲ್ಲ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಸಾಧ್ಯವಾದಷ್ಟೂ ವಿಮಾನ ಪ್ರಯಾಣದಿಂದ ದೂರವಿರಿ ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ (ಸಿಡಿಸಿ) ಹೇಳಿದೆ.

ಕೋವಿಡ್–19ಗೆ ಸಂಬಂಧಿಸಿ ಬಿಡುಗಡೆ ಮಾಡಿರುವ ಮಾರ್ಗಸೂಚಿಯಲ್ಲಿ ಈ ಕುರಿತು ಸಿಡಿಸಿ ಉಲ್ಲೇಖಿಸಿದೆ. ವಿಮಾನಗಳಲ್ಲಿ ಇಬ್ಬರು ಪ್ರಯಾಣಿಕರ ನಡುವೆ ಅಂತರ ಕಾಯ್ದುಕೊಳ್ಳುವ ಬಗ್ಗೆಯೂ ಸಿಡಿಸಿ ಶಿಫಾರಸು ಮಾಡಿಲ್ಲ. ಆದರೆ, ವಿದೇಶಗಳಿಂದ ಬರುವವರಿಗೆ 14 ದಿನಗಳ ಕ್ವಾರಂಟೈನ್‌ನಲ್ಲಿ ಇರಲು ಸಿಡಿಸಿ ಸೂಚಿಸಿದೆ.

ಇದನ್ನೂ ಓದಿ: 

ಕೊರೊನಾ ವೈರಸ್ ಪರಿಣಾಮವಾಗಿ ಅಮೆರಿಕದಲ್ಲಿ ವಿಮಾನ ಸಂಚಾರ ಬಹುತೇಕ ಸ್ಥಗಿತಗೊಂಡಿದೆ. ಶೇ 90ರಷ್ಟು ವಿಮಾನ ಹಾರಾಟ ಸ್ಥಗಿತಗೊಂಡಿದೆ ಎನ್ನಲಾಗಿದೆ. 

ವಿಮಾನಗಳಲ್ಲಿ ಗಾಳಿಯ ಪರಿಚಲನೆ ಮತ್ತು ಶುದ್ಧೀಕರಣದಿಂದಾಗಿ ಹೆಚ್ಚಿನ ವೈರಸ್‌ಗಳು ಸುಲಭವಾಗಿ ಹರಡಲಾರವು. ಆದಾಗ್ಯೂ, ಕೊರೊನಾ ವೈರಸ್ ಸಾಂಕ್ರಾಮಿಕದ ಈ ಸಂದರ್ಭದಲ್ಲಿ ಪ್ರಯಾಣಿಕರು ಅಪಾಯವನ್ನು ಮೈಮೇಲೆ ಎಳೆದುಕೊಳ್ಳಬಾರದು. ಸಾಧ್ಯವಾದಷ್ಟೂ ವಿಮಾನ ಪ್ರಯಾಣದಿಂದ ದೂರವಿರಬೇಕು ಎಂದು ಸಿಡಿಸಿ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು