ಸೋಮವಾರ, ಮಾರ್ಚ್ 30, 2020
19 °C

ವೈರಸ್‌ ಸೋಂಕು ತಡೆ ಕೇಂದ್ರವಾಗಿದ್ದ ಹೊಟೇಲ್‌ ಕಟ್ಟಡ ಕುಸಿದು 20 ಮಂದಿ ಸಾವು 

ಪಿಟಿಐ Updated:

ಅಕ್ಷರ ಗಾತ್ರ : | |

ಕಟ್ಟಡದ ಅವಶೇಷಗಳ ಅಡಿ ಸಿಲುಕಿದ್ದ ಮಗುವನ್ನು ರಕ್ಷಿಸಿದ ಸಂದರ್ಭ

ಬೀಜಿಂಗ್: ಕೊರೊನಾ ವೈರಸ್‌ ಸೋಂಕು ತಡೆ ಕೇಂದ್ರವಾಗಿ ಬಳಸಿಕೊಳ್ಳಲಾಗುತ್ತಿದ್ದ ಚೀನಾದ ಫ್ಯೂಜಿಯಾನ್‌ ಪ್ರಾಂತ್ಯದ ಹೊಟೇಲ್‌ ಕುಸಿದ ಪರಿಣಾಮ ಕನಿಷ್ಠ 20 ಮಂದಿ ಸಾವಿಗೀಡಾಗಿದ್ದಾರೆ. 

ಕ್ವಾಂಝುವಾ ಸಿಟಿಯ ಕ್ಸಿನ್‌ಜಿಯಾ ಹೊಟೇಲ್‌ನ್ನು ಸೋಂಕು ತಡೆ ಕೇಂದ್ರವಾಗಿ ಬಳಸಲಾಗುತ್ತಿತ್ತು. ವೈರಸ್‌ ಸೋಂಕಿಗೆ ಒಳಗಾದವರ ಸಂಪರ್ಕಕ್ಕೆ ಬಂದು ಸೋಂಕು ತಗುಲಿಸಿಕೊಂಡವರ ಮೇಲೆ ನಿಗಾವಹಿಸಿ, ಸೋಂಕು ಹರಡದಂತೆ ನಿಯಂತ್ರಿಸುವ ಸಲುವಾಗಿ ಹೊಟೇಲ್‌ ಕಟ್ಟಡ ಬಳಕೆಯಾಗಿತ್ತು. ಶನಿವಾರ ಹೊಟೇಲ್‌ ಕಟ್ಟಡ ಕುಸಿದಿದೆ. 

ಕಟ್ಟಡದ ಅವಶೇಷಗಳ ಅಡಿ ಸಿಲುಕಿದ್ದ 61 ಜನರನ್ನು ಹೊರಗೆ ತರಲಾಗಿದ್ದು, ಆ ಪೈಕಿ 20 ಮಂದಿ ಸಾವಿಗೀಡಾಗಿದ್ದಾರೆ. 

ಸೋಮವಾರ ರಾತ್ರಿ, 10 ವರ್ಷದ ಬಾಲಕ ಮತ್ತು ಆತನ ತಾಯಿಯನ್ನು ಅವಶೇಷಗಳ ಅಡಿಯಿಂದ ರಕ್ಷಿಸಲಾಗಿತ್ತು. ಸುಮಾರು 52 ಗಂಟೆಗಳು ತಾಯಿ ಮತ್ತು ಮಗ ಕಟ್ಟಡದ ಅವಶೇಷಗಳ ಮಧ್ಯೆ ಸಿಲುಕಿದ್ದರು. ಕಟ್ಟಡ ಕುಸಿದಾಗ ಒಟ್ಟು 71 ಮಂದಿ ಸಿಲುಕಿದ್ದರು ಹಾಗೂ 9 ಮಂದಿ ರಕ್ಷಿಸಿಕೊಳ್ಳಲು ಯಶಸ್ವಿಯಾದರು. ಇನ್ನೂ ಹತ್ತು ಮಂದಿ ಅಲ್ಲಿಯೇ ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. 

ಕಟ್ಟಡದ ಮಾಲೀಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಕಳೆದ ವರ್ಷ ಡಿಸೆಂಬರ್‌ನಲ್ಲಿ ಚೀನಾದ ವುಹಾನ್‌ ಸಿಟಿಯಿಂದ ವ್ಯಾಪಿಸಿದ ಮಾರಣಾಂತಿಕ ಕೊರೊನಾ ವೈರಸ್‌, ಚೀನಾದಲ್ಲಿ 3,000ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು