ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಸ್‌ ಪ್ರವೇಶಿಸದ ‘ಫಿಡೋರ್‌’

ಜೋಡಣೆಯಾಗುವಲ್ಲಿ ಸೊಯೂಜ್‌ ನೌಕೆ ವಿಫಲ
Last Updated 24 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಮಾಸ್ಕೊ:ಮನುಷ್ಯರನ್ನೇ ಹೋಲುವ ‘ಫಿಡೋರ್‌’ ರೋಬೊ ಹೊತ್ತೊಯ್ದಿದ್ದ ರಷ್ಯಾದ ಮಾನವರಹಿತ ಗಗನನೌಕೆ, ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ(ಐಎಸ್‌ಎಸ್‌)ಜತೆ ಜೋಡಣೆಯಾಗುವಲ್ಲಿ (ಡಾಕಿಂಗ್‌) ವಿಫಲವಾಗಿದೆ.

‘ಸೊಯುಜ್‌ ಎಂಎಸ್‌ 14’ ರಾಕೆಟ್‌ ಗುರುವಾರ ಉಡಾವಣೆಯಾಗಿತ್ತು. ನಿಗದಿಯಂತೆ ಶನಿವಾರ ಬೆಳಗ್ಗೆ 5.30ಕ್ಕೆ
ಐಎಸ್‌ಎಸ್‌ಗೆ ಈ ನೌಕೆ ಜೋಡಣೆಯಾಗಬೇಕಿತ್ತು. ಆದರೆ ‘ಐಎಸ್‌ಎಸ್‌ಗೆ 100 ಮೀ.ದೂರದಲ್ಲಿರುವಾಗ ನಿಗದಿತ ಪಥದಲ್ಲಿ ನೌಕೆ ಮುಂದುವರಿದಿಲ್ಲ. ಹೀಗಾಗಿ ರಷ್ಯಾದ ಅಂತರಿಕ್ಷಯಾತ್ರಿಗಳು ಕೊನೇ ಕ್ಷಣದಲ್ಲಿ ಸ್ವಯಂಚಾಲಿತ ಜೋಡಣೆ ಪ್ರಕ್ರಿಯೆಯನ್ನುರದ್ದುಗೊಳಿಸಿದರು’ ಎಂದು ನಾಸಾ ಪ್ರಕಟಣೆಯಲ್ಲಿ ತಿಳಿಸಿದೆ.

‘ಐಎಸ್‌ಎಸ್‌ನಲ್ಲಿನ ಸಮಸ್ಯೆಯಿಂದಾಗಿ ಜೋಡಣೆ ಸಾಧ್ಯವಾಗಲಿಲ್ಲ. ಸೊಯುಜ್‌ ನೌಕೆಯಲ್ಲಿ ಯಾವುದೇ ತಾಂತ್ರಿಕ ಸಮಸ್ಯೆ ಕಂಡುಬಂದಿಲ್ಲವೆಂದು ರಷ್ಯಾದ ವಿಜ್ಞಾನಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT