ಸೋಮವಾರ, ಫೆಬ್ರವರಿ 17, 2020
17 °C

ಒಟ್ಟಿಗೆ 6 ಟೆನಿಸ್‌ ಬಾಲ್‌ಗಳನ್ನು ಬಾಯಲ್ಲಿ ಹಿಡಿದುಕೊಳ್ಳುವ ಶ್ವಾನ!

ಏಜನ್ಸೀಸ್ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್‌: ಬರೋಬ್ಬರಿ ಆರು ಟೆನಿಸ್‌ ಬಾಲ್‌ಗಳನ್ನು ಬಾಯಲ್ಲಿ ಇಟ್ಟುಕೊಳ್ಳುವ ಗೋಲ್ಡನ್‌ ರಿಟ್ರೀವರ್‌ ತಳಿಯ 6 ವರ್ಷದ ಶ್ವಾನವೊಂದು ಎಲ್ಲರ ಗಮನ ಸೆಳೆದಿದೆ. ಆ ಮೂಲಕ ಈ ಶ್ವಾನ ಹೆಚ್ಚು ಚೆಂಡುಗಳನ್ನು ಬಾಯಲ್ಲಿ ಇಟ್ಟುಕೊಂಡ ಸಾಧನೆ ಮಾಡಿದೆ. ಈ ಬಗ್ಗೆ ನ್ಯೂಯಾರ್ಕ್‌ ಪೋಸ್ಟ್‌ ವರದಿ ಮಾಡಿದೆ.

ಸದ್ಯ ನ್ಯೂಯಾರ್ಕ್‌ನಲ್ಲಿ ನೆಲೆಸಿರುವ ಶ್ವಾನದ ಮಾಲೀಕರಾದ ಚೆರಿ ಮತ್ತು ರಾಬ್‌ ಮಾಲಿ, ‘ಫಿನ್ಲೇಗೆ ಎರಡು ವರ್ಷವಾಗಿದ್ದಾಗಲೇ ಅದರ ಈ ವಿಶೇಷ ಸಾಮರ್ಥ್ಯ ನಮ್ಮ ಗಮನಕ್ಕೆ ಬಂದಿತ್ತು’ ಎಂದಿದ್ದಾರೆ.

ಚೆರಿ ಅವರ ಮಗಳು ಎರಿನ್‌ ತನ್ನ ತಾಯಿ ಮತ್ತು ಫಿನ್ಲೆ ಜೊತೆ ವಿಹಾರಕ್ಕೆ ತೆರಳಿದ್ದರು. ಈ ವೇಳೆ ಫಿನ್ಲೆ ನಾಲ್ಕು ಚೆಂಡುಗಳನ್ನು ಬಾಯಲ್ಲಿ ಇಟ್ಟುಕೊಂಡಿರುವುದನ್ನು ಎರಿನ್‌ಳತ್ತ ಬಂದಿತ್ತು. ಇದನ್ನು ಗಮನಿಸಿದ ಎರಿನ್‌ ಕೂಡಲೇ ಚಿತ್ರ ತೆಗೆದು ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದರು. ಪೂರಕ ದಾಖಲೆಗಳನ್ನು ಒದಗಿಸಲು ಸಾಧ್ಯವಾಗದ್ದರಿಂದ ಆಗ ಗಿನ್ನಿಸ್‌ ದಾಖಲೆ ಸಾಧ್ಯವಾಗಿರಲಿಲ್ಲ.

 ಗಿನ್ನಿಸ್ ಪುಸ್ತಕದಲ್ಲಿ ಸ್ಥಾನ ಪಡೆಯಲು ನಿರ್ದಿಷ್ಟ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಸದ್ಯ ಗಿನ್ನಿಸ್‌ ಜೊತೆಗೆ ಸಂಪರ್ಕ ಕಾಯ್ದುಕೊಂಡಿರುವ ನಾಯಿಯ ಪಾಲಕರು, ಪಿನ್ಲೇ ಸಾಧನೆಯನ್ನು ಗಿನ್ನಿಸ್‌ ಪುಟಕ್ಕೆ ಸೇರಿಸಲು ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ.

ಟೆಕ್ಸಾಸ್‌ನಲ್ಲಿ 2003ರಲ್ಲಿ ಇದೇ ತಳಿಯ ನಾಯಿಯೊಂದು ಐದು ಚೆಂಡುಗಳನ್ನು ಇಟ್ಟುಕೊಂಡು ಗಿನ್ನಿಸ್‌ ದಾಖಲೆ ಬರೆದಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು